ಹಲವು ವರ್ಷ ಬಳಸದೇ ಇಟ್ಟಿದ್ದ ಕಾರಿನಿಂದ ಬರ್ತಿತ್ತು ವಿಚಿತ್ರ ಸದ್ದು: ಡಿಕ್ಕಿ ತೆರೆದ ಮಾಲೀಕನಿಗೆ ಶಾಕ್

Published : Aug 04, 2025, 03:49 PM ISTUpdated : Aug 04, 2025, 04:16 PM IST
Car's Mysterious Buzzing Noise Reveals Beehive Inside

ಸಾರಾಂಶ

ಬಹಳ ದಿನಗಳಿಂದ ಮೂಲೆ ಸೇರಿದ್ದ ಕಾರಿನ ಡಿಕ್ಕಿಯಿಂದ ವಿಚಿತ್ರ ಸದ್ದು ಕೇಳಿಬಂದಾಗ ಮಾಲೀಕರು ತಪಾಸಣೆ ಮಾಡಲು ಕಾರನ್ನು ಹೊರಗೆ ತೆಗೆದಿದ್ದು, ಕಾರಿನ ಒಳಗಿದ್ದ ಸಂಸಾರವನ್ನು ನೋಡಿ ಅಚ್ಚರಿಯಾಗಿದ್ದಾರೆ.

ಒಬ್ಬರೇ ವ್ಯಕ್ತಿ ಹಲವು ವಾಹನಗಳನ್ನು ಹೊಂದಿದ್ದರೆ ಕೆಲವು ವಾಹನಗಳನ್ನು ವರ್ಷಗಳ ಕಾಲ ಹೊರಗೆ ತೆಗೆಯುವುದಿಲ್ಲ, ಇನ್ನು ಕಾರು ದುರಸ್ಥಿಯಲ್ಲಿದ್ದರೆ ಅದು ಮೂಲೆಗುಂಪಾದಂತೆ, ಅದರ ಮೇಲೆ ಒಂದು ಎರಡಿಂಚಿನಷ್ಟು ಧೂಳು ಕುಳಿತಿರುತ್ತದೆ. ಕೆಲವರು ಕಾರಿನೊಂದಿಗೆ ಹೊಂದಿರುವ ಒಂದು ಭಾವುಕ ಪ್ರೀತಿಯ ಕಾರಣಕ್ಕೆ ಕರು ಹಳೆಯದಾದರೂ ಅದನ್ನು ಮಾರಾಟ ಮಾಡುವುದಿಲ್ಲ, ಬದಲಾಗಿ ಮನೆಯ ಗ್ಯಾರೇಜ್‌ನಲ್ಲಿಯೇ ಅದನ್ನು ಪಾರ್ಕಿಂಗ್ ಮಾಡಿ ಇಟ್ಟಿರುತ್ತಾರೆ. ಹಾಗೆಯೇ ವ್ಯಕ್ತಿಯೊಬ್ಬರು ಬಹಳ ದಿನಗಳಿಂದ ಮೂಲೆ ಸೇರಿದ್ದ ಕಾರಿನಲ್ಲಿ ಇತ್ತೀಚೆಗೆ ಏನೋ ವಿಚಿತ್ರ ಸದ್ದು ಬರುತ್ತಿದೆ ಎಂದು ಕತೂಹಲದಿಂದ ಅದನ್ನು ಹೊರಗೆ ತೆಗೆದು ತಪಾಸಣೆ ಮಾಡಿದಾಗ ಅವರಿಗೆ ಅಚ್ಚರಿ ಕಾದಿತ್ತು.

ಹಾಗಿದ್ರೆ ಒಳಗೆ ಇದ್ದಿದ್ದು ಏನು?

mr.mrs.beerescue(𝐉 𝐄 𝐅 𝐅 + 𝐉 𝐔 𝐋 𝐈 𝐄 🐝 𝐑 𝐔 𝐒 𝐒 𝐄 𝐋 𝐋) ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಸ್ಥಗಿತಗೊಂಡಿದ್ದ ಕಾರಿನೊಳಗೆ ಕಂಡ ದೃಶ್ಯದ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಧೂಳು ಮತ್ತು ಮಣ್ಣಿನ ದಪ್ಪ ಪದರಗಳಿಂದ ಆವೃತವಾದ ಕಾರನ್ನು ಆ ಕಾರಿನ ಮಾಲೀಕರು ಬಳಸದೇ ಬಹಳ ವರ್ಷಗಳಾಗಿತ್ತು. ಆದರೆ ಅದರಿಂದ ವಿಚಿತ್ರವಾದ ಝೇಂಕರಿಸುವ ಶಬ್ದಗಳು ಬರಲು ಪ್ರಾರಂಭಿಸಿದಾಗ, ಮಾಲೀಕರು ಕುತೂಹಲದಿಂದ ಏನಿರಬಹುದು ಎಂದು ನೋಡುವುದಕ್ಕೆ ನಿರ್ಧರಿಸಿದರು. ಹಾಗೆಯೇ ಅವರು ಕಾರಿನ ಡಿಕ್ಕಿ ಒಪನ್ ಮಾಡಿದ ಅವರಿಗೆ ಒಳಗಿನ ದೃಶ್ಯ ನೋಡಿ ಅಚ್ಚರಿ ಕಾದಿತ್ತು. ಅಲ್ಲಿ ದೊಡ್ಡದೊಂದು ಸಂಸಾರವೇ ರೂಪುಗೊಂಡಿತ್ತು.

ಹೌದು ಜೇನುನೊಣಗಳು ಅಲ್ಲಿ ತಮ್ಮ ಸಂಸಾರ ಆರಂಭಿಸಿದ್ದವು, ಅಲ್ಲಿ ಜೇನು ನೊಣಗಳ ದೊಡ್ಡ ಕುಟುಂಬವೇ ಇತ್ತು. ಅವು ಕಾರಿನ ಮಾಲೀಕ ಊಹೆ ಮಾಡಿದ್ದಕ್ಕಿಂತಲೂ ದೊಡ್ಡ ಸಂಸಾರವಾಗಿತ್ತು. ಡಿಕ್ಕಿಯ ಪೂರ್ತಿ ಜೇನುನೊಣಗಳು ಆವರಿಸಿಕೊಂಡಿದ್ದವು. ಸಾವಿರಕ್ಕು ಹೆಚ್ಚು ಜೇನುನೊಣಗಳ ಜೇಂಕಾರ ಅಲ್ಲಿ ವಿಚಿತ್ರ ಸದ್ದನ್ನು ಮೂಡಿಸುತ್ತಿತ್ತು. ಈ ವಿಚಾರವೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕರು ಹಲವು ಕಮೆಂಟ್ ಮಾಡಿದ್ದಾರೆ.

ಜೇನು ಸಾಕಾಣೆ ಮಾಡುವ ಸ್ಥಳೀಯರೊಬ್ಬರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಜೇನು ತೆಗೆಯುವವರು ಕಾರಿನ ಡಿಕ್ಕಿಯಿಂದ ಜೇನನ್ನು ತೆಗೆಯುತ್ತಿರುವ ದೃಶ್ಯ ಕಾಣುತ್ತಿದೆ. ವೀಡಿಯೋ ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಜೇನು ನೊಣಕ್ಕೆ ಹನಿಬೀ ಎಂದು ಕರೆಯುವ ಕಾರಣಕ್ಕೆ ಬಿಎಂಡ್ಬ್ಯು ಎಂದರೆ ಇದೆ ಗಾಡಿನ ಎಂದು ಒಬ್ಬರು ತಮಾಷೆಯಾಗಿ ಕೇಳಿದ್ದಾರೆ. ಇಷ್ಟೊಂದು ದೊಡ್ಡ ಜೇನುಗೂಡಿನಲ್ಲಿ ಒಂದೇ ರಾಣಿ ಇರುವುದೇ ಎಂದು ಒಬ್ಬರು ಕುತೂಹಲದಿಂದ ಕೇಳಿದ್ದಾರೆ.

 

 

9 ಕೋಟಿಯ ಲ್ಯಾಂಬೋರ್ಗಿನಿಗೆ ಬೆಂಕಿ:

ಬೆಂಗಳೂರು: ಶನಿವಾರ ಸಂಜೆ ಬೆಂಗಳೂರಿನ ಬೀದಿಯೊಂದರಲ್ಲಿ ಸುಮಾರು ₹9 ಕೋಟಿ ಮೌಲ್ಯದ ಐಷಾರಾಮಿ ಸ್ಪೋರ್ಟ್ಸ್ ಕಾರು ಲ್ಯಾಂಬೋರ್ಘಿನಿ ಅವೆಂಟಡಾರ್ ಬೆಂಕಿಗೆ ಆಹುತಿಯಾದ ಘಟನೆ ನಡೆದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಡುರಸ್ತೆಯಲ್ಲೇ ಈ ಐಷಾರಾಮಿ ಸ್ಪೋರ್ಟ್ಸ್ ಕಾರಿನಿಂದ ಸಣ್ಣ ಬೆಂಕಿ ಹೊರಹೊಮ್ಮಿದ್ದು, ಅಲ್ಲಿದ್ದವರು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿ ಸೆರೆಯಾಗಿದೆ. ಇನ್ಸ್ಟಾಗ್ರಾಮ್‌ ಇನ್‌ಫ್ಲುಯೆನ್ಸರ್ 'ನಿಮ್ಮ ಮನೆ ಮಗ ಸಂಜು' ಎಂದೇ ಜನಪ್ರಿಯವಾಗಿರುವ ಸೋಶಿಯಲ್ ಮೀಡಿಯಾ ಸ್ಟಾರ್ ಸಂಜೀವ್ ಅವರಿಗೆ ಸೇರಿದ ಕಾರು ಇದು ಎಂದು ವರದಿಯಾಗಿದೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿತ್ತು.ಕೇಸರಿ ಬಣ್ಣದ ಐಷಾರಾಮಿ ಕಾರು ಹೊತ್ತಿ ಉರಿಯುತ್ತಿದ್ದು,ಸೂಪರ್ ಕಾರಿನ ಹಿಂಭಾಗದಿಂದ ಬೆಂಕಿಯ ಜ್ವಾಲೆ ಹಾಗೂ ಹೊಗೆ ಬರುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಕೂಡಲೇ ಬೆಂಕಿ ನಂದಿಸುವ ಯಂತ್ರ ಬಳಸಿ ಬೆಂಕಿ ನಂದಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಂಜೀವ್ ಅವರು ಸ್ಪಷ್ಟನೆ ನೀಡಿದ್ದು, ಸಣ್ಣದೊಂದು ಅವಘಢ ಸಂಭವಿಸಿತ್ತು ಅಷ್ಟೇ ಘಟನೆಯಲ್ಲಿ ನನ್ನ ಕಾರಿಗೆ ಯಾವುದೇ ಹಾನಿಯಾಗಿಲ್ಲ ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಮನವಿ ಮಾಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ