ಜಗಳವಾಡಲ್ಲ, ಬೈಯಲ್ಲ.. ಪಾತ್ರೆ ತೊಳಿತಾನೆ.. ದಯವಿಟ್ಟು ವಿಚ್ಛೇದನ ಕೊಡಿಸಿ!

Published : Aug 21, 2020, 10:26 PM IST
ಜಗಳವಾಡಲ್ಲ, ಬೈಯಲ್ಲ.. ಪಾತ್ರೆ ತೊಳಿತಾನೆ.. ದಯವಿಟ್ಟು ವಿಚ್ಛೇದನ ಕೊಡಿಸಿ!

ಸಾರಾಂಶ

ಗಂಡ  ಚೆನ್ನಾಗಿ ನೋಡಿಕೊಳ್ಳುತ್ತಾನೆ, ಪ್ಲೀಸ್ ಡೀವೋರ್ಸ್ ಕೊಡಿ/ ವಿವಾಹವಾಗಿ 18 ತಿಂಗಳಲ್ಲೇ ಮಹಿಳೆ ವಿಚ್ಛೇನಕ್ಕೆ ಅರ್ಜಿ/  ಅಡುಗೆ ಮಾಡ್ತಾನೆ, ಕೆಲಸದಲ್ಲಿ ಸಹಾಯ ಮಾಡ್ತಾನೆ/ ಬೈಯೋದಿಲ್ಲ, ಜಗಳ ಮಾಡಲ್ಲ

ಲಕ್ನೋ(ಆ.21) ಪ್ರತಿನಿತ್ಯ ಗಂಡ ಕುಡಿದು ಮನೆಗೆ ಬರುತ್ತಾನೆ, ವರದಕ್ಷಿಣೆ ತರಲು ಪೀಡಿಸುತ್ತಾನೆ, ಮಾನಸಿಕ ಕಿರುಕುಳ ನೀಡುತ್ತಾನೆ.. ವಿಚ್ಛೇದನ ಕೊಡಿ ಎಂಬ ಅರ್ಜಿಗಳು ಸಲ್ಲಿಕೆಯಾಗುವುದು ಸಾಮಾನ್ಯ. ಆದರೆ ಇಲ್ಲೊಂದು ವಿಚಿತ್ರ ಅರ್ಜಿ ಬಂದಿದೆ.
 
ಪತಿ ನನ್ನ ಜತೆ ಜಗಳವಾಡಲ್ಲ, ಹೆಚ್ಚು ಪ್ರೀತಿಸುತ್ತಾನೆ. ಇದರಿಂದ ನನಗೆ ಬೇಸರವಾಗಿದೆ ದಯವಿಟ್ಟು ವಿಚ್ಛೇದನ ಕೊಡಿ ಎಂದು ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ

ಕುಂಕುಮ, ಬಳೆ ಧರಿಸದ ಪತ್ನಿ ವಿಚ್ಛೇದನಕ್ಕೆ ಅರ್ಹ

ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮಹಿಳೆಗೆ ವಿಚ್ಛೇದನ ಬೇಕಾಗಿದೆಯಂತೆ.  ಶರಿಯಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ವೇಳೆ ವಿಚ್ಛೇದನಕ್ಕೆ ಕಾರಣ ಕೇಳಿದಾಗ ಪತಿ ಜಗಳವಾಡುವುದಿಲ್ಲ, ಹೆಚ್ಚು ಪ್ರೀತಿಸುತ್ತಾನೆ ಎಂದು ಮಹಿಳೆ ಹೇಳಿದ್ದಾಳೆ. ಇದನ್ನು ಕೇಳಿ ಸ್ವತಃ ನ್ಯಾಯಾಧೀಶರೇ  ಗೊಂದಲಕ್ಕೆ ಗುರಿಯಾಗಿದ್ದು ವಿಚ್ಛೇದನಕ್ಕೆ ಇದು ಸಮಂಜಸ ಕಾರಣ ಅಲ್ಲ ಎಂದು ಅರ್ಜಿ ವಜಾ ಮಾಡಿದ್ದಾರೆ. ಇನ್ನೊಮ್ಮೆ ಇಬ್ಬರು ಮಾತುಕತೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಪತಿ ಎಂದೂ ನನ್ನ ಮೇಲೆ ಕೂಗಾಡಲಿಲ್ಲ. ಯವುದೇ ವಿಷಯದ ಬಗ್ಗೆ ನನಗೆ ನಿರಾಸೆ ಮಾಡಿಲ್ಲ. ಇಂತಹ ವಾತಾವರಣದಿಂದಾಗಿ ನನಗೆ ಉಸಿರುಗಟ್ಟಿದಂತಗುತ್ತಿದೆ. ಕೆಲವೊಮ್ಮೆ ಅವನೇ ಅಡುಗೆ ಮಾಡಿ ನನಗೆ ಬಡಿಸುತ್ತಾನೆ. ಮನೆ ಕೆಲಸ ಮಾಡಲು ಸಹ ಸಹಾಯ ಮಾಡುತ್ತಾನೆ ಇದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಹಿಳೆ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್