ನನ್ನ ಮೆದುಳಿನ ಬೆಲೆಮಾಸಿಕ ₹ 200 ಕೋಟಿ : ಕೇಂದ್ರ ಸಚಿವ ಗಡ್ಕರಿ

Kannadaprabha News   | Kannada Prabha
Published : Sep 15, 2025, 04:26 AM IST
Nitin Gadkari

ಸಾರಾಂಶ

ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಿಡುಗಡೆಯಲ್ಲಿ ತಮ್ಮ ವೈಯಕ್ತಿಕ ಲಾಭವಿದೆ ಎಂಬ ಆರೋಪದ ಕುರಿತು ತಿರುಗೇಟು ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ನನ್ನ ಮೆದುಳಿನ ಬೆಲೆ ತಿಂಗಳಿಗೆ 200 ಕೋಟಿ ರು.. ನಾನು ಪ್ರಾಮಾಣಿಕತೆಯಿಂದ ಹಣ ಸಂಪಾದಿಸಿದ್ದೇನೆ ಎಂದಿದ್ದಾರೆ.

ನಾಗ್ಪುರ: ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ ಬಿಡುಗಡೆಯಲ್ಲಿ ತಮ್ಮ ವೈಯಕ್ತಿಕ ಲಾಭವಿದೆ ಎಂಬ ಆರೋಪದ ಕುರಿತು ತಿರುಗೇಟು ನೀಡಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ, ನನ್ನ ಮೆದುಳಿನ ಬೆಲೆ ತಿಂಗಳಿಗೆ 200 ಕೋಟಿ ರು.. ನಾನು ಪ್ರಾಮಾಣಿಕತೆಯಿಂದ ಹಣ ಸಂಪಾದಿಸಿದ್ದೇನೆ ಎಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ‘ಪ್ರಾಮಾಣಿಕವಾಗಿ ಹೇಗೆ ಉದ್ಯಮ ನಡೆಸಬಹುದು ಎಂಬ ಬಗ್ಗೆ ನಾನು ನನ್ನ ಮಗನಿಗೆ ಐಡಿಯಾಗಳನ್ನು ನೀಡುತ್ತೇನೆ. ಇತ್ತೀಚೆಗೆ ನನ್ನ ಮಗ ಇರಾನ್‌ನಿಂದ 800 ಕಂಟೇನರ್‌ ಸೇಬು ಆಮದು ಮಾಡಿಕೊಂಡ, ಅದೇ ವೇಳೆ 1000 ಕಂಟೇನರ್‌ ಬಾಳೆಹಣ್ಣು ರಫ್ತು ಮಾಡಿದ. 

ಇದರ ಹೊರತಾಗಿ ನಾನು ಸಕ್ಕರೆ, ಡಿಸ್ಟಿಲರಿ, ವಿದ್ಯುತ್‌ ಸ್ಥಾವರ ಹೊಂದಿದ್ದೇನೆ. ನನ್ನ ಆದಾಯ ಸಾಕಷ್ಟಿದೆ. ನನ್ನ ಮೆದುಳು ತಿಂಗಳಿಗೆ 200 ಕೋಟಿ ಮೌಲ್ಯದ್ದಾಗಿದೆ. ನನಗೆ ಹಣದ ಕೊರತೆಯಿಲ್ಲ’ ಎಂದು ಹೇಳಿದರು.

ಪೆಟ್ರೋಲ್‌ಗೆ ಎಥೆನಾಲ್‌ ಆಯ್ತು, ಈಗ ಡೀಸೆಲ್‌ಗೆ ಶೀಘ್ರದಲ್ಲೇ ಐಸೊಬ್ಯುಟನಾಲ್ ಮಿಶ್ರಣ

ನವದೆಹಲಿ  : ಶೇ. 10 ರಷ್ಟು ಐಸೊಬ್ಯುಟನಾಲ್ ಅನ್ನು ಡೀಸೆಲ್‌ನೊಂದಿಗೆ ಬೆರೆಸುವ ಸಾಧ್ಯತೆಯನ್ನು ಅನ್ವೇಷಿಸಲು ಭಾರತೀಯ ಆಟೋಮೋಟಿವ್ ಸಂಶೋಧನಾ ಸಂಘ (ARAI) ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಗುರುವಾರ ತಿಳಿಸಿದ್ದಾರೆ. ಭಾರತ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘದ (ISMA) ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಶ್ರೀ ಗಡ್ಕರಿ, ಐಸೊಬ್ಯುಟನಾಲ್ ಮಿಶ್ರಣವನ್ನು ಹೊರತುಪಡಿಸಿ, ಹತ್ತನೇ ಒಂದು ಭಾಗದಷ್ಟು ಎಥೆನಾಲ್ ಅನ್ನು ಡೀಸೆಲ್‌ನೊಂದಿಗೆ ಬೆರೆಸುವ ಪ್ರಯೋಗಗಳು ಯಶಸ್ವಿಯಾಗದಿದ್ದರೂ, ಅದನ್ನು ಸ್ವತಂತ್ರ ಬಳಕೆಗಾಗಿಯೂ ಅನ್ವೇಷಿಸಲಾಗುತ್ತಿದೆ ಎಂದು ಹೇಳಿದರು.

ಏನಿದು ಐಸೊಬ್ಯುಟನಾಲ್?

ಐಸೊಬ್ಯುಟನಾಲ್ ಸುಡುವ ಗುಣಲಕ್ಷಣಗಳನ್ನು ಹೊಂದಿರುವ ಆಲ್ಕೊಹಾಲ್ಯುಕ್ತ ಸಂಯುಕ್ತವಾಗಿದ್ದು, ಇದನ್ನು ಸಾಮಾನ್ಯವಾಗಿ ಬಣ್ಣಗಳು ಮತ್ತು ಲೇಪನ ಸೇರಿದಂತೆ ವಿವಿಧ ಕೈಗಾರಿಕೆಗಳಲ್ಲಿ ದ್ರಾವಕವಾಗಿ ಬಳಸಲಾಗುತ್ತದೆ. 20% ರಷ್ಟು ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್‌ಗೆ ವ್ಯಾಪಕ ವಿರೋಧ ವ್ಯಕ್ತವಾಗಿರುವ ನಡುವೆಯೇ ನಿತಿನ್‌ ಗಡ್ಕರಿ ಅವರಿಂದ ಈ ಘೋಷಣೆ ಬಂದಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ