
ದೆಹಲಿ(ಡಿ.01): ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಲಭ್ಯವಾಗುತ್ತಿದೆ. ದೆಹಲಿಯ ಸಿಖ್ ಗುರುದ್ವಾರ ಸಾಹೀಬ್ ಬಂಗ್ಲಾ ಮಂದಿರ ಆಸ್ಪತ್ರೆ ಕಡಿಮೆ ದರದಲ್ಲಿ ಆರೋಗ್ಯ ಸೇವೆಯನ್ನು ಸಾಕಾರಗೊಳಿಸುತ್ತಿದೆ. ಕೇವಲ 50 ರೂಪಾಯಿಗೆ MRI ಸ್ಕಾನ್ ಲಭ್ಯವಿದೆ. ಈ ಕುರಿತು ದೆಹಲಿ ಸಿಖ್ ಗುರುದ್ವಾರ ಆಡಳಿತ ಸಮಿತಿ(DSGMC) ಹೇಳಿದೆ.
ಗ್ಯಾಸ್ಟ್ರಿಕ್ ಅಂತ ನೆಗ್ಲೆಕ್ಟ್ ಮಾಡ್ಬೇಡಿ, ಅದು ಹಾರ್ಟ್ ಅಟ್ಯಾಕ್ ಆಗಿರಬಹುದು!
ಗುರುದ್ವಾರ ಆವರಣದಲ್ಲಿರುವ ಹರಿಕೃಷ್ಣ ಆಸ್ಪತ್ರೆ ಇದೀಗ ಕಡಿಮೆ ದರದಲ್ಲಿ ಆರೋಗ್ಯ ಸೇವೆ ನೀಡುತ್ತಿದೆ. ಈ ತಿಂಗಳಿನಿಂದ(ಡಿಸೆಂಬರ್ 01) MRI ಸ್ಕಾನ್ ಸೇವೆ ಲಭ್ಯವಿದೆ. ಇನ್ನು ಮುಂದಿನ ವಾರದಿಂದ ಕೇವಲ 600 ರೂಪಾಯಿಗೆ ಡಯಾಲಿಸ್ ಕೂಡ ಲಭ್ಯವಿದೆ. ಇತ್ತೀಚೆಗೆ ಗುರುದ್ವಾರ ಮಂದಿರದ ಆಸ್ಪತ್ರೆಗೆ 6 ಕೋಟಿ ಮೌಲ್ಯದ ಉಪಕರಣಗಳನ್ನು ದಾನ ನೀಡಿದ್ದರು.
ಕಡು ಬಡತನ ಸೇರಿದಂತೆ ಆರ್ಥಿಕ ಸಾಮರ್ಥ್ಯವಿಲ್ಲದವರಿಗೆ 50 ರೂಪಾಯಿಯಲ್ಲಿ MRI ಸ್ಕಾನ್ ಸೇವೆ ನೀಡಲಾಗುತ್ತಿದೆ. ಇನ್ನು ಇತರರಿಗೆ 800 ರೂಪಾಯಿಯಲ್ಲಿ MRI ಸ್ಕಾನ್ ನೀಡಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ. X ray, ಅಲ್ಟ್ರಾಸೌಂಡ್ ಸೇವೆಗಳು ಕೇವಲ 150 ರೂಪಾಯಿಗೆ ಲಭ್ಯವಾಗಲಿದೆ.
ಇತರೆಡೆ MRI ಸ್ಕಾನ್ ಬೆಲೆ ಕನಿಷ್ಠ 2,500 ರೂಪಾಯಿ ಇದೆ. ಆದರೆ ಗುರುದ್ವಾರ ಮಂದಿರ ಇದೀಗ ಅತೀ ಕಡಿಮೆ ಬೆಲೆಯಲ್ಲಿ ಆರೋಗ್ಯ ಸೇವೆ ನೀಡೋ ಮೂಲಕ ದೇಶಕ್ಕೆ ಮಾದರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ