
ನವದೆಹಲಿ (ಅ.01) ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ಭಾರತ್ ಬಂದ್ ಬಿಸಿ ಆತಂಕ ಎದುರಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಆಲ್ ಇಂಡಿಯಾ ಮುಸ್ಲಿಂ ಪರ್ಲನಲ್ ಲಾ ಬೋರ್ಡ್ (AIMPLB ) ಭಾರತ್ ಬಂದ್ ದಿನಾಂಕ ಮುಂದೂಡಿದೆ. ಅಕ್ಟೋಬರ್ 3ರಂದು ನಡೆಯಬೇಕಿದ್ದ ಭಾರತ್ ಬಂದ್ ಮುಂದೂಡಲಾಗಿದೆ. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಶೀಘ್ರದಲ್ಲೇ ಹೊಸ ದಿನಾಂಕ ಘೋಷಿಸುವುದಾಗಿ ಹೇಳಿದೆ. ವಕ್ಫ್ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು AIMPLB ಕರೆ ಕೊಟ್ಟಿತ್ತು.
ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಅಧ್ಯಕ್ಷ ಮೌಲನಾ ಖಾಲೀದ್ ಸೈಫುಲ್ಲಾ ರಹಮಾನಿ ತುರ್ತು ಸಭೆ ನಡೆಸಿದ್ದಾರೆ. ಮುಸ್ಲಿಂ ಬೋರ್ಡ್ ಸದಸ್ಯರು ಈ ಸಭೆಯಲ್ಲಿ ಹಾಜರಿದ್ದರು. ಅಕ್ಟೋಬರ್ 3ರಂದು ಭಾರತ್ ಬಂದ್‌ಗೆ ತಯಾರಿ ಮಾಡಿಕೊಂಡಿದ್ದ ಲಾ ಬೋರ್ಡ್ ಕೊನೆಗೆ ಈ ಭಾರತ್ ಬಂದ್ ಮುಂದೂಡಲು ಒಪ್ಪಿಗೆ ಸೂಚಿಸಿದ್ದಾರೆ.
ಸಾಲು ಸಾಲು ಹಬ್ಬಗಳ ಸಂಭ್ರಮ ನಡೆಯುತ್ತಿದೆ. ಅಕ್ಟೋಬರ್ 2ರಂದು ವಿಜಯದಶಮಿ ನಡೆಯಲಿದೆ. ಮರು ದಿನವೇ ಭಾರತ್ ಬಂದ್ ನಡೆಸಿದರೆ ಸಾರ್ವಜನಿಕರಿಂದ ಹಾಗೂ ಸರ್ಕಾರದಿಂದ ಕಠಿಣ ಕ್ರಮಕೊಳ್ಳಬುಹುದು ಎಂದು ಪರ್ಲನಲ್ ಲಾ ಬೋರ್ಡ್ ದೇಶಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆ ದಿನಾಂಕ ಮುಂದೂಡಿದೆ.
ಕೇಂದ್ರ ಬಿಜೆಪಿ ಸರ್ಕಾರ ವಕ್ಫ್ ಬೋರ್ಡ್‌ಗೆ ತಿದ್ದುಪಡಿ ತರಲು ಎಲ್ಲಾ ತಯಾರಿ ಮಾಡಿಕೊಂಡಿದೆ. ತಿದ್ದುಪಡಿಗಳ ಕುರಿತು ಸದನದ ಜಂಟಿ ಸಮಿತಿಗೆ ಕಳುಹಿಸಲಾಗಿದೆ. ವಕ್ಫ್ ಬೋರ್ಡ್‌ನಲ್ಲಿ ಪ್ರಮುಖ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ವಕ್ಫ್ ತಿದ್ದುಪಡಿ ವಿರೋಧಿಸಿ ಈಗಾಗಲೇ ದೇಶಾದ್ಯಂತ ಪ್ರತಿಭಟನೆ ನಡೆಸಿದೆ. ಇದೀಗ ವಕ್ಫ್ ತಿದ್ದುಪಡಿ ಕುರಿತು ಗಂಭೀರ ಪ್ರಶ್ನೆಗಳಮುಂದಿಟ್ಟು ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ದೇಶಾದ್ಯಂತ ಪ್ರತಿಭಟನೆಗೆ ಮುಂದಾಗಿದೆ. ಸದ್ಯ ದಿನಾಂಕ ಅಕ್ಟೋಬರ್ 3ರಿಂದ ಬೇರೆ ದಿನಾಂಕಕ್ಕೆ ಬದಲಾಗಿದೆ. ಹೊಸ ದಿನಾ ಮುಸ್ಲಿಂ ಲಾ ಬೋರ್ಡ್ ಸಭೆ ಸೇರಿ ನಿರ್ಧರಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ