26/11 ಮುಂಬೈ ದಾಳಿ, ಕಳೆದ 14 ವರ್ಷದಲ್ಲಿ ಪುಲ್ವಾಮಾ ಸೇರಿ ಹಲವು ಅ್ಯಟಾಕ್, ಬೇಕಿದೆ ರಾಷ್ಟ್ರೀಯ ಭದ್ರತಾ ನೀತಿ!

By Suvarna NewsFirst Published Nov 26, 2022, 7:56 PM IST
Highlights

14 ವರ್ಷಗಳ ಹಿಂದೆ ಮುಂಬೈ ಮೇಲೆ ನಡೆದ ಭಯೋತ್ಪಾದಕ ದಾಳಿ ಭಾರತ ಸೇರಿ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಪಾಕಿಸ್ತಾನ ಉಗ್ರರು ನಡೆಸಿದ ಈ ದಾಳಿ ಘನಘೋರ. ಕಳೆದ 14 ವರ್ಷದಲ್ಲಿ ಹಲವು ಉಗ್ರ ದಾಳಿ ನಡೆದಿದೆ. ಪುಲ್ವಾಮಾ ಸೇರಿದಂತೆ ಭೀಕರ ದಾಳಿಗಳನ್ನು ಭಾರತ ಎದುರಿಸಿದೆ. ಇಂತಹ ಉಗ್ರರ ದಾಳಿಯನ್ನು ಹತ್ತಿಕ್ಕಲು ಭಾರತಕ್ಕೆ ಪ್ರಬಲ ಭದ್ರತಾ ನೀತಿಯ ಅವಶ್ಯತೆ ಇದೆಯಾ? 

ನವದೆಹಲಿ(ನ.26):  ಪಾಕಿಸ್ತಾನದಿಂದ ಯಾವುದೇ ಅಡ್ಡಿ ಆತಂಕವಿಲ್ಲದೆ ಭಾರತದ ಮಹಾ ನಗರಿ ಮುಂಬೈ ಪ್ರವೇಶಿಸಿದ ಉಗ್ರರು ಏಕಾಏಕಿ ಹಲವು ಕಡೆಗಳಲ್ಲಿ ದಾಳಿ ನಡೆಸಿದರು. ತಾಜ್ ಹೊಟೆಲ್, ಒಬೆರಾಯ್ ಹೊಟೆಲ್, ಚತ್ರಪತಿ ಶಿವಾಜಿ ಟರ್ಮಿನಲ್ ರೈಲು ನಿಲ್ದಾಣ ಸೇರಿದಂತೆ ಜನಜಂಗುಳಿ ಹೆಚ್ಚಿದ್ದ ಕಡೆಗಳಲ್ಲಿ ದಾಳಿ ನಡೆಸಿ 300ಕ್ಕೂ ಹೆಚ್ಚು ಜನರ ಮಾರಣಹೋಮ ನಡೆಸಿದ್ದರು. ಗಾಯಗೊಂಡವರ ಸಂಖ್ಯೆ ದುಪ್ಪಟ್ಟು. ಭಾರತ ಕಂಡ ಘನಘೋರ ಭಯೋತ್ಪಾದಕ ದಾಳಿಗಳಲ್ಲಿ ಇದೂ ಒಂದು, 2008ರ ಮುಂಬೈ ದಾಳಿಗೂ ಮೊದಲು ಮುಂಬೈ ಸ್ಫೋಟ ಸೇರಿದಂತೆ ಹಲವು ಭಯೋತ್ಪಾದಕ ದಾಳಿಗಳನ್ನು ಭಾರತ ಎದುರಿಸಿದೆ.  26/11 ದಾಳಿಯಿಂದ ಭಾರತ ಹಲವು ಪಾಠಗಳನ್ನು ಕಲಿತುಕೊಂಡರು, ಭಾರತಕ್ಕೆ ಪ್ರಬಲ ರಾಷ್ಟ್ರೀಯ ಭದ್ರತಾ ನೀತಿಯ ಅವಶ್ಯಕತೆ ಎದ್ದು ಕಾಣುತ್ತಿದೆ. ಕಾರಣ ಮುಂಬೈ ದಾಳಿ ಬಳಿಕ ಕಳೆದ 14 ವರ್ಷದಲ್ಲಿ ಹಲವು ಬೀಕರ ಉಗ್ರರ ದಾಳಿಯನ್ನು ಭಾರತ ಎದುರಿಸಿದೆ.  ಪ್ರತಿ ದಾಳಿ ಒಂದಕ್ಕಿಂತ ಒಂದು ಭಿನ್ನ. ಆದರೆ ಉದ್ದೇಶ ಒಂದೇ. ಈ ದಾಳಿಗಳು ಮರುಕಳಿಸದಿರಲು ಹಾಗೂ ಭಾರತದಲ್ಲಿ ನೆಮ್ಮದಿಯ ಪರಿಸರ ವ್ಯವಸ್ಥೆ ನಿರ್ಮಿಸಲು ಪ್ರಬಲ ನೀತಿಯ ಅವಶ್ಯಕತೆ ಇದೆ. ದೇಶದ ಹಿತವನ್ನು ಮುಂದಿಟ್ಟುಕೊಂಡು ಈ ನೀತಿಯನ್ನು ರಚಿಸಬೇಕೇ ಹೊರತು, ಇಲ್ಲಿ ರಾಜಕಾರಣ ನುಸುಳಬಾರದು, ಇಲ್ಲಿ ವೋಟ್ ಬ್ಯಾಂಕ್ ಇರಕೂಡದು.

2008ರ ಮುಂಬೈ ದಾಳಿ ಅತ್ಯಂತ ಪೂರ್ವನಿಯೋಜಿತ ದಾಳಿ. ಇದಕ್ಕಾಗಿ ವರ್ಷಗಳ ಕಾಲ ತಯಾರಿ ನಡೆದಿದೆ ಅನ್ನೋ ಮಾಹಿತಿಯನ್ನು ಅಮೆರಿಕ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಬಳಿಕ ಭಾರತ ತನಿಖೆಯಲ್ಲಿ ಈ ದಾಳಿ ಹಿಂದಿನ ಪಾಕಿಸ್ತಾನ ಸರ್ಕಾರ ಹಾಗೂ ಪಾಕಿಸ್ತಾನ ಸೇನೆಯ ಕೈವಾಡ ಬಯಲಾಗಿತ್ತು. ಭಾರತ ವಿರುದ್ಧ ಅಸಾಂಪ್ರದಾಯಿಕ ಯುದ್ಧಕ್ಕೆ ಈ ರೀತಿಯ ದಾಳಿಯನ್ನು ಪಾಕಿಸ್ತಾನ ನಡೆಸಿಕೊಂಡೇ ಬರುತ್ತಿದೆ.

26/11 ಮುಂಬೈ ದಾಳಿ ನಡೆದು ಇಂದಿಗೆ 14 ವರ್ಷ, ಕರಾಳ ದಿನ ನೆನಪಿಸಿಕೊಂಡ ದೇಶ!

ಭಯೋತ್ಪಾದಕ ದಾಳಿಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಭಾರತ ಈ ಹಿಂದೆ ಮಾಡಿದ ತಪ್ಪುಗಳನ್ನು ಮಾಡಬಾರದು. ಮುಂಬೈ ದಾಳಿ ಆರಂಭವಾಗುತ್ತಿದ್ದಂತೆ ಇದನ್ನು ಸಹಜ ದಾಳಿ ಎಂದು ತೀರ್ಮಾನಿಸಿ ನಿರ್ಲಕ್ಷಿಸಲಾಗಿತ್ತು. ಭದ್ರತಾ ವಿಚಾರದಲ್ಲಿ ಕೆಲ ಸೇವೆಗಳು ತುರ್ತಾಗಿ ಲಭ್ಯವಿರಬೇಕು. ಆದರೆ 2008ರಲ್ಲಿ ಇರಲಿಲ್ಲ. ದಾಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಜಾಯಾಮಾನ ನಿಲ್ಲಬೇಕು. ಇದು ಈಗಲೂ ನಡೆಯುತ್ತಿದೆ. 

2008ರ ಮುಂಬೈ ದಾಳಿ ವೇಳೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ದಾಳಿ ನಡೆದ ಸಂದರ್ಭದಲ್ಲಿ ಈ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಸರ್ಕಾರ, ಸೂಕ್ತ ನೆರವು ನೀಡಲು ಹಿಂದೇಟು ಹಾಕಿತು. ಎನ್‌ಎಸ್‌ಜಿ ಕಮಾಂಡೋಗಳು ಕಾರ್ಯಾಚರಣೆ ಇಳಿಯಲು ಹಲವು ಅಡತೆಡಗಳು ಎದುರಾಗಿತ್ತು. ದಾಳಿ ಮುಗಿದು 300ಕ್ಕೂ ಹೆಚ್ಚು ಜನರು ಮೃತಪ್ಪಟ್ಟಿದ್ದರು. ದಾಳಿಯಲ್ಲಿ ಓರ್ವ ಉಗ್ರ ಅಜ್ಮಲ್ ಕಸಾಬ್ ಸೆರೆ ಸಿಕ್ಕಿದ್ದ. ಈತ ಪಾಕಿಸ್ತಾನಿ ಅನ್ನೋದು ಬಹಿರಂಗಾಗಿತ್ತು. ಆದರೆ ಕಾಂಗ್ರೆಸ್ ನಾಯಕರು ಇದು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡೆಸಿದ ದಾಳಿ ಎಂದು ಹೇಳಿಕೆ ಕೊಟ್ಟಿತು. ಈ ಮೂಲಕ ಇಡಿ ಘಟನೆ ಹಾಗೂ ಪ್ರಕರಣದ  ದಿಕ್ಕು ತಪ್ಪಿಸುವ ಯತ್ನಗಳು ನಡೆದಿತ್ತು.

 

ಪ್ರಧಾನಿ ಮೋದಿ ಹತ್ಯೆಗೆ ಸ್ಕೆಚ್, ದಾವುದ್ ಹೆಸರಿನಲ್ಲಿ ಪೊಲೀಸರಿಗೆ ಬಂತು ಆಡಿಯೋ ಕ್ಲಿಪ್ ಬೆದರಿಕೆ!

ಇದೇ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ತನಿಖೆ ನಡೆದಿತ್ತು.  ಇದು ಪಾಕಿಸ್ತಾನ ನಡೆಸಿದ ದಾಳಿ ಅನ್ನೋದನ್ನು ಬಹಿರಂಗವಾಗಿತ್ತು. ಉಗ್ರ ಅಜ್ಮಲ್ ಕಸಬ್‌ಗೆ ಗಲ್ಲು ಶಿಕ್ಷೆ ನೀಡಲಾಗಿತ್ತು. ಹಾಗಾದರೆ ಅಂದು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ಬಳಿಕ ತಾನೇನು ಮಾಡೇ ಇಲ್ಲ ಎಂದು ಮುಂದೆ ಸಾಗಿತು. ಭಾರತದಲ್ಲಿ ಭಯೋತ್ಪಾದನಾ ದಾಳಿ ಸಂಚು, ಸ್ಫೋಟದ ಸಂಚುಗಳ ಪ್ರಕರಣದ ಗಂಭೀರತೆಯನ್ನು ಅರಿಯಲು ಸರ್ಕಾರಗಳು ವಿಫಲವಾಗುತ್ತಿದೆ. ಇದರ ತನಿಖೆಗಳು ವಿಳಂಬವಾಗುತ್ತಿದೆ. ಸಾಕ್ಷ್ಯಗಳ ಕೊರತೆಗಳಿಂದ ಆರೋಪಿಗಳು ಖುಲಾಸೆಗಳೊತ್ತಿದ್ದಾರೆ. ಕೆಲ ಪ್ರಕರಣಗಳಲ್ಲಿ ಪೊಲೀಸರಿಗಿರುವ ಮಾಹಿತಿ ಕೊರತೆಯಿಂದ ಆರೋಪಿಗಳು ಜಾಮೀನ ಮೇಲೆ ಹೊರಬಂದು ಮತ್ತೆ ವಿದ್ವಂಸಕ ಕೃತ್ಯಗಳನ್ನು ಎಸೆದ ಹಲವಾರು ಘಟನೆಗಳಿವೆ. ಇದೆಲ್ಲವೂ ಬದಲಾಗಬೇಕು. ಪ್ರಬಲ ರಾಷ್ಟ್ರೀಯ ನೀತಿಯ ಅವಶ್ಯಕತೆ ಈ ದೇಶದ ಭದ್ರತಗೆ ಅತ್ಯಂತ ಮುಖ್ಯವಾಗಿದೆ. 
 

click me!