ಪ್ರಾಣ ಪಣಕ್ಕಿಟ್ಟು ಬಾಹ್ಯಾಕಾಶ ಯಾತ್ರೆ ಮಾಡುವ ಗಗನಯಾತ್ರಿಗಳ ಸಂಬಳ ಎಷ್ಟು ಗೊತ್ತಾ? ಇಲ್ಲಿದೆ ನೋಡಿ

By Kannadaprabha News  |  First Published Aug 27, 2024, 6:09 AM IST

ದೈಹಿಕವಾಗಿ, ಮಾನಸಿಕವಾಗಿ ಮತ್ತು ತಾಂತ್ರಿಕವಾಗಿ ಭಾರೀ ನೈಪುಣ್ಯ ಬಯಸುವ ಬಾಹ್ಯಾಕಾಶ ಯಾನಿಗಳು ಅಥವಾ ಗಗನಯಾತ್ರಿಗಳು ಎಷ್ಟು ವೇತನ ಪಡೆಯಬಹುದು? ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುವ ವೇಳೆ ಮತ್ತು ಅಲ್ಲಿಂದ ಭೂಮಿಗೆ ಮರಳುವ ವೇಳೆ ಸದಾ ಜೀವ ಭಯದಲ್ಲೇ ಇರುವ ವಿಜ್ಞಾನಿಗಳಿಗೆ ಕೋಟಿ ಕೋಟಿ ರು. ಸಂಬಳ ಇರಬಹುದು ಎಂಬುದು ಎಲ್ಲರ ನಿರೀಕ್ಷೆ.


ನವದೆಹಲಿ (ಆ.27): ದೈಹಿಕವಾಗಿ, ಮಾನಸಿಕವಾಗಿ ಮತ್ತು ತಾಂತ್ರಿಕವಾಗಿ ಭಾರೀ ನೈಪುಣ್ಯ ಬಯಸುವ ಬಾಹ್ಯಾಕಾಶ ಯಾನಿಗಳು ಅಥವಾ ಗಗನಯಾತ್ರಿಗಳು ಎಷ್ಟು ವೇತನ ಪಡೆಯಬಹುದು? ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುವ ವೇಳೆ ಮತ್ತು ಅಲ್ಲಿಂದ ಭೂಮಿಗೆ ಮರಳುವ ವೇಳೆ ಸದಾ ಜೀವ ಭಯದಲ್ಲೇ ಇರುವ ವಿಜ್ಞಾನಿಗಳಿಗೆ ಕೋಟಿ ಕೋಟಿ ರು. ಸಂಬಳ ಇರಬಹುದು ಎಂಬುದು ಎಲ್ಲರ ನಿರೀಕ್ಷೆ.

ಆದರೆ ಹಾಗೇನೂ ಇಲ್ಲ. ಇಲ್ಲಿ ವೇತನದ ಜೊತೆಗೆ ಜೀವಮಾನದ ಸಿಗುವ ಅಪರೂಪದ ಅವಕಾಶ ಕೂಡಾ ಮುಖ್ಯ ಎಂಬುದು ಗಮನಾರ್ಹ. ಏಕೆಂದರೆ ಗಗನಯಾತ್ರಿಗಳಿಗಿಂತ ಹೆಚ್ಚಿನ ವೇತನ ಹಲವು ಕಂಪನಿಗಳ ಸಿಇಒಗಳೇ ಸಂಪಾದಿಸುತ್ತಾರೆ. ಜೊತೆಗೆ ಗಗನಯಾತ್ರಿಗಳ ವೇತನವು ಅವರು ಯಾವ ದೇಶದವರು ಎಂಬುದನ್ನು ಕೂಡಾ ಅವಲಂಬಿಸಿದೆ.

Tap to resize

Latest Videos

ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ಇನ್ನೂ 6 ತಿಂಗಳು ವಾಪಾಸ್‌ ಬರಲ್ಲ!

ಯಾರಿಗೆ ಎಷ್ಟು ವೇತನ?:

ಉದಾಹರಣೆಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿಯೇ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್‌ ಮತ್ತಿತರರಿಗೆ ಕಳೆದ ವರ್ಷದ ವೇತನ ಶ್ರೇಣಿಯ ಅನ್ವಯ ವಾರ್ಷಿಕ 70 ಲಕ್ಷ ರು.ನಿಂದ 1.27 ಕೋಟಿ ರು.ವರೆಗೂ ವೇತನ ನಿಗದಿಪಡಿಸಲಾಗಿದೆ. ಆದರೆ ಈ ವೇತನ ಸೇನೆಯಿಂದ ಆಯ್ಕೆಯಾದ ಗಗನಯಾತ್ರಿಗಳಿಗೆ ಸ್ವಲ್ಪ ಕಡಿಮೆ ಇರುತ್ತದೆ. ಕಾರಣ, ಯಾತ್ರೆ ಬಳಿಕ ಅವರು ಸೇನೆಯ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಉದಾಹರಣೆಗೆ ಭಾರತೀಯ ಮೂಲದ ರಾಜಾ ಚಾರಿ ಅವರ ಮಾಸಿಕ ವೇತನ 8.92 ಲಕ್ಷ ರು.ನಷ್ಟಿದೆ.

ಇನ್ನು ಯುರೋಪಿಯನ್‌ ಸ್ಪೇಸ್‌ ಏಜೆನ್ಸಿಯ ಗಗನಯಾತ್ರಿಗಳಲ್ಲಿ, ಆರಂಭಿಕ ಹಂತದಲ್ಲಿ ಮಾಸಿಕ 5.50 ಲಕ್ಷ ರು., ಬ್ರಿಟನ್‌ನಲ್ಲಿ 5.86 ಲಕ್ಷ ರು., ಫ್ರಾನ್ಸ್‌ನಲ್ಲಿ 7.23- 8.43 ಲಕ್ಷ ರು., ರಷ್ಯಾದಲ್ಲಿ 4.58 ಲಕ್ಷ ರು. ವೇತನ ನಿಗದಿ ಮಾಡಲಾಗಿದೆ. ಇದಲ್ಲದೇ ಗಗನಯಾತ್ರಿಗಳಿಗೆ ವಿವಿಧ ದೇಶಗಳು ಪ್ರತಿ ಉಡ್ಡಯನಕ್ಕೂ ಪ್ರತ್ಯೇಕ ಬೋನಸ್‌ ಮತ್ತು ಇತರೆ ಭತ್ಯೆಗಳನ್ನೂ ನೀಡುತ್ತವೆ.

ಬಾಹ್ಯಾಕಾಶದಲ್ಲಿ ಸಿಲುಕಿದ ಸುನಿತಾ ವಿಲಿಯಮ್ಸ್ ಕರೆತರುವ ಪ್ರಯತ್ನ: ಜೀವಕ್ಕೆ ಅಪಾಯ ಸೇರಿ 3 ಎಚ್ಚರಿಕೆ!

ಹೆಸರು/ದೇಶ ವೇತನ

  • ಸುನಿತಾ ವಿಲಿಯಮ್ಸ್‌ 70 ಲಕ್ಷ - 1.27 ಕೋಟಿ (ವಾರ್ಷಿಕ)
  • ರಾಜಾ ಚಾರಿ 8.92 ಲಕ್ಷ (ಮಾಸಿಕ)
  • ಯೂರೋಪ್‌ 5.50 ಲಕ್ಷ (ಮಾಸಿಕ)
  • ಬ್ರಿಟನ್‌ 5.86 ಲಕ್ಷ (ಮಾಸಿಕ)
  • ಫ್ರಾನ್ಸ್‌ 7.23- 8.43 ಲಕ್ಷ (ಮಾಸಿಕ)
  • ರಷ್ಯಾ 4.58 ಲಕ್ಷ (ಮಾಸಿಕ)
click me!