ಕರ್ನಾಟಕಕ್ಕೆ ಅವಮಾನಿಸಿ, ಕನ್ನಡಿಗರನ್ನು ಕೆಣಕಿದ ಉತ್ತರ ಭಾರತೀಯನಿಗೆ ಕಾಲಿಗೆ ಬೀಳುವ ಪರಿಸ್ಥಿತಿ!

By Sathish Kumar KH  |  First Published Oct 29, 2024, 7:49 PM IST

ಕರ್ನಾಟಕವನ್ನು ತನ್ನ ಜನನಾಂಗಕ್ಕೆ ಹೋಲಿಸಿ, ಕನ್ನಡಿಗರಿಗೆ ಅಕ್ಕ, ಅಮ್ಮನೆಂದು ಬೈದು ದೇಶದಲ್ಲಿಯೇ ಅತಿ ಕೆಟ್ಟ ಜನರೆಂದು ಹೀಯಾಳಿಸಿದ ಮಹರಾಷ್ಟ್ರದ ಸೋಷಿಯಲ್ ಮೀಡಿಯಾ ಇನ್ಪ್ಲೂಯೆನ್ಸರ್ ದೇವ್ ಜೆ. ಶರ್ಮಾಗೆ ಇದೀಗ ಕನ್ನಡಿಗರ ಕಾಲಿಗೆ ಬೀಳುವ ಪರಿಸ್ಥಿತಿ ಬಂದಿದೆ.


ಬೆಂಗಳೂರು (ಅ.29): ಕರ್ನಾಟಕವನ್ನು ಜನನಾಂಗಕ್ಕೆ ಹೋಲಿಸಿ, ಕನ್ನಡಿಗರಿಗೆ ಅಕ್ಕ, ಅಮ್ಮನೆಂದು ಬೈದು ದೇಶದಲ್ಲಿಯೇ ಅತಿ ಕೆಟ್ಟ ಜನರೆಂದು ಹೀಯಾಳಿಸಿದ ಉತ್ತರ ಭಾರತೀಯ ಸೋಷಿಯಲ್ ಮೀಡಿಯಾ ಇನ್ಪ್ಲೂಯೆನ್ಸರ್ ದೇವ್ ಜೆ. ಶರ್ಮಾಗೆ ಇದೀಗ ಕನ್ನಡಿಗರ ಕಾಲಿಗೆ ಬೀಳುವ ಪರಿಸ್ಥಿತಿ ಬಂದಿದೆ.

ಉತ್ತರ ಭಾರತದಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿ ಕರ್ನಾಟಕ ಹಾಗೂ ಕನ್ನಡಿಗರ ವಿರುದ್ಧವೇ ಮಾತನಾಡಿದ ಹೇಳ ಹೆಸರಿಲ್ಲದಂತೆ ನಾಪತ್ತೆ ಆಗಿದ್ದಾರೆ. ಆದರೆ, ಇಲ್ಲೊಬ್ಬ ಮಹಾರಾಷ್ಟ್ರದ ದೇವ್ ಜೆ ಶರ್ಮಾ ಎನ್ನುವ ವ್ಯಕ್ತಿ ಕರ್ನಾಟಕಕ್ಕೆ ತೀರಾ ಕೆಟ್ಟದಾಗಿ ಅವಮಾನಿಸಿ, ಕನ್ನಡಿಗರನ್ನು ಹೀಯಾಳಿಸಿ ಬೈದು ಕೆಂಗಣ್ಣಿಗೆ ಗುರಿ ಆಗಿದ್ದವನಿಗೆ ಇದೀಗ ಕನ್ನಡಿಗರ ಕಾಲಿಗೆ ಬೀಳುವ ಪರಿಸ್ಥಿತಿ ಬಂದಿದೆ. ಕನ್ನಡಿಗರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದವನಿಗೆ, ಪೊಲೀಸರು ಎಲ್ಲೆಲ್ಲೂ ಮುಟ್ಟಿ ನೋಡಿಕೊಳ್ಳುವಂತೆ ಮಾಡಿದ್ದಾರೆ.

Tap to resize

Latest Videos

undefined

ಸಾಮಾಜಿಕ ಜಾಲತಾಣದಲ್ಲಿ ಆಯೆಶ್‌ದೇವ್/ ದೇವ್ ಜೆ. ಶರ್ಮಾ (https://www.instagram.com/aaahyesdev/) ಎನ್ನುವ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ತನ್ನ ಫಾಲೋವರ್ಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಕರ್ನಾಟಕದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಟಿವಿ ಪರದೆಯಲ್ಲಿ ಭಾರತದ ನಕ್ಷೆಯನ್ನು ತೋರಿಸುತ್ತಾ ರಾಜಸ್ಥಾನ, ಮಹರಾಷ್ಟ್ರ ಹಾಗೂ ಕರ್ನಾಟಕವನ್ನು ತೋರಿಸುವಾಗ ಮಹಾರಾಷ್ಟ್ರ ಹೃದಯದಲ್ಲಿದೆ ಎಂದು ಹೇಳುತ್ತಾ, ಕರ್ನಾಟಕ ಎಲ್ಲಿದೆ ಎಂದು ಕೇಳಿದಾಗ ತನ್ನ ಮೂತ್ರ ಮಾಡುವ ಜಾಗವನ್ನು ತೋರಿಸಿದ್ದಾನೆ.

Dear Kannadigas,

You may have not forgotten this guy. Looks like he had another episode of “FITS/SEIZURES”.

In this chain of tweets, please see the series of stories he has put up on his insta handle today. … pic.twitter.com/QeZlwRt1fN

— ಸುಷ್ಮಾ ಅಯ್ಯಂಗಾರ್ (@malnadkoos)

ಇಷ್ಟಕ್ಕೆ ಸುಮ್ಮನಾಗದೇ ಕರ್ನಾಟಕವನ್ನು ಅವಹೇಳನ ಮಾಡಿದ್ದಲ್ಲದೇ, ಅವನಿಗೆ ಕನ್ನಡಿಗರು ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಕೋಪಗೊಂಡು 'ನೀವು ದೇಶದ ಎಲ್ಲ ಜನರಿಗೆ ಕನ್ನಡ ಅಂತಾ ಹೇಳಿ ಎಂದು ಯಾಕೆ ಒತ್ತಾಯ ಮಾಡ್ತೀರಿ.. ನೀವು ದೆಹಲಿ, ಮುಂಬೈ ಎಲ್ಲೆಡೆ ಹೋಗಿ, ದೇಶದ ಹೊರಗೆ ಪಾಕಿಸ್ತಾನಕ್ಕೆ ಹೋಗಿ ಆಗ ಗೊತ್ತಾಗುತ್ತದೆ. ಪಾಕಿಸ್ತಾನದಲ್ಲಿ ಕನ್ನಡ ಅಂತಾ ಹೇಳಿ ನಾಯಿಗೆ ಹೊಡೆದಂತೆ ಹೊಡೆಯುತ್ತಾರೆ. ನಿವೇನಾದರೂ ಹರಿಯಾಣಕ್ಕೆ ಹೋದರೆ ನೀವು ಕನ್ನಡ ಮಾತನಾಡಿ ಎಂದು ಹೇಳಿದರೆ ನಿಮ್ಮಂತಹ ನಾಯಿಗಳನ್ನು ಮೊದಲು ಹೊಡೆಯುತ್ತಾರೆ, ನಂತರ ಅವರು ಮಾತನಾಡುತ್ತಾರೆ. ನಿಮ್ಮನ್ನು ಅಲ್ಲಿಯೇ ಹೊಡೆದು ಸಾಯಿಸುತ್ತಾರೆ ಎಂದು ಕೆಟ್ಟಾದಾಗಿ ಮಾತನಾಡಿ ವಿಡಿಯೋ ಹರಿಬಿಟ್ಟಿದ್ದಾನೆ.

ಇದನ್ನೂ ಓದಿ: ಕನ್ನಡಿಗರನ್ನು ಕೆಣಕಿದ ಸುಗಂಧ ಶರ್ಮಾಗೆ ಇದೆಂಥಾ ಸ್ಥಿತಿ ಬಂತು: ಕೆಲಸ ಕಳೆದುಕೊಂಡವಳಿಗೆ ನೆಲೆ ಕಳೆದುಕೊಳ್ಳುವ ಆತಂಕ!

ಇದರ ನಂತರವೂ ಕನ್ನಡಿಗರು ನಿನ್ನನ್ನು ಕಂಡಲ್ಲಿ ಹೊಡೆದು ಸಾಯಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕಕ್ಕೆ ಕನ್ನಡಿಗರಿಗೆ ಮರ್ಯಾದೆ ಕೊಟ್ಟು ಮಾತನಾಡು ಎಂದು ಹೇಳಿದರೂ ಪುನಃ ಕೆಟ್ಟದಾಗಿ ಮಾತನಾಡಿದ್ದಾನೆ. ಇಡೀ ದೇಶದಲ್ಲಿಯೇ ಕರ್ನಾಟಕಕ್ಕೆ ಕೆಟ್ಟ ಹೆಸರಿದೆ, ಇದು ನಿಮಗೆ ಗೊತ್ತಾ? ನಾನು ಏನೇ ಮಾತನಾಡಿದರೂ ನೀವೇನೂ ಕಿತ್ತುಕೊಳ್ಳಲು ಆಗುವುದಿಲ್ಲ, ನಿಮ್ಮ ಬೆದರಿಕೆಗೆ ನಾನೇನೂ ಹೆದರುವುದಿಲ್ಲ. ನಾನು ವಿಡಿಯೋ ಮಾಡುತ್ತೇನೆ, ಹಂಚಿಕೊಳ್ತೇನೆ. ಇಷ್ಟೇ ಅಲ್ಲದೇ ಎಲ್ಲ ಕನ್ನಡಿಗರೂ ನೀವು ಗಂಡಸರಾಗಿದ್ದರೆ ನನ್ನ ಮುಂದೆ ಬಂದು ಮಾತನಾಡಿ, ಎನ್ನುತ್ತಾ ತಾಯಿ, ಅಕ್ಕ ತಂಗಿ ಎಲ್ಲರನ್ನೂ ಬೈದಿದ್ದಾನೆ. 


Update :

Thank you https://t.co/oOKUCuBpqG pic.twitter.com/IsRlHywfaN

— ಸುಷ್ಮಾ ಅಯ್ಯಂಗಾರ್ (@malnadkoos)

ಕನ್ನಡಿಗರಿಗೆ ಮಾಡಿದ ಅವಮಾನದ ಸರಣಿ ವಿಡಿಯೋವನ್ನು ಹಂಚಿಕೊಂಡ ದೇವ್ ಜೆ ಶರ್ಮಾನಿಗೆ ಬುದ್ಧಿ ಕಲಿಸಲು ನೆಟ್ಟಿಗರು ಕೂಡಲೇ ಈ ವಿಡಿಯೋವನ್ನು ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರು, ಬೆಂಗಳೂರು ಪೊಲೀಸ್ ಆಯುಕ್ತರು, ಮುಂಬೈ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ದೂರು ಕೊಡಲಾಗಿದೆ. ತಕ್ಷಣವೇ ಮುಂಬೈ ಪೊಲೀಸರ ಸಂಪರ್ಕ ಸಾಧಿಸಿದ ಕರ್ನಾಟಕ ಪೊಲೀಸರು ಕೆಟ್ಟದಾಗಿ ವಿಡಿಯೋ ಮಾಡುತ್ತಿದ್ದವನನ್ನು ಹೆಡೆಮುರಿ ಕಟ್ಟಲು ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ನಾರ್ತ್ ಇಂಡಿಯನ್ಸ್ ಇಲ್ಲವೆಂದರೆ ಬೆಂಗಳೂರು ಖಾಲಿ ಖಾಲಿ ಎಂದಿದ್ದ ಸುಗಂಧ ಶರ್ಮಾಗೆ ಮತ್ತೊಂದು ಸಂಕಷ್ಟ!

ಇದರ ಬೆನ್ನಲ್ಲಿಯೇ ಮುಂಬೈ ಪೊಲೀಸರು ಕನ್ನಡಿಗರನ್ನು ಕೆಣಕಿದ್ದ ದೇವ್ ಶರ್ಮಾನನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಎಲ್ಲೆಲ್ಲಿಗೆ ಹೇಗೆ ಬಾರಿಸಬೇಕೋ ಹಾಗೆ ಬಾರಿಸಿ ಬುದ್ಧಿ ಕಲಿಸಿದ್ದಾರೆ. ಇದಾದ ನಂತರ ಕನ್ನಡಿಗರು, ಕರ್ನಾಟಕದ ಬಗ್ಗೆ ಮಾತನಾಡಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಿ, ಕನ್ನಡಿಗರಿಗೆ ಕ್ಷಮೆ ಕೇಳುವ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಕನ್ನಡಿಗ ಸಹೋದರರೇ, ಕರ್ನಾಟಕದ ಜನತೆಯೇ ನನ್ನನ್ನು ಕ್ಷಮಿಸಿಬಿಡಿ. ನನ್ನಿಂದ ತಪ್ಪಾಗಿದೆ, ಲಕ್ಷಾಂತರ ಫಾಲೋವರ್ಸ್ ಹೊಂದಿರುವ ನಾನು ಹಲವು ಹಾಸ್ಯಾತ್ಮಕ ವಿಡಿಯೋ ಮಾಡಿ ರಂಜಿಸುತ್ತಿದ್ದೇನೆ. ಇದೀಗ ಒಮ್ಮೆ ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಮನವಿ ಮಾಡಿಕೊಂಡಿದ್ದಾನೆ.

click me!