ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿದೆ ಅಯೋಧ್ಯೆ: ಮೊದಲ ದೀಪಾವಳಿಯಂದೇ ರಾಮಲಲ್ಲಾ ವಿಶ್ವ ದಾಖಲೆ?

By Suchethana D  |  First Published Oct 29, 2024, 6:40 PM IST

ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಬಳಿಕ ಅಯೋಧ್ಯೆಯಲ್ಲಿ ಇದು ಮೊದಲ ದೀಪಾವಳಿ. ಮೊದಲ ಹಬ್ಬದಂದೇ ವಿಶ್ವ ದಾಖಲೆ ಬರೆಯಲು ಸಜ್ಜಾಗಿ ನಿಂತಿದೆ ರಾಮನಗರಿ... 
 


ಅಯೋಧ್ಯೆಯು ಐತಿಹಾಸಿಕ ದೀಪಾವಳಿಗೆ ಸಜ್ಜಾಗುತ್ತಿದೆ. ಇದೇ ಜನವರಿ 22ರಂದು ರಾಮಲಲ್ಲಾಗೆ ಪ್ರಾಣ ಪ್ರತಿಷ್ಠೆ ಮಾಡಲಾಗಿದ್ದು, ಇದು ಮೊದಲ ದೀಪಾವಳಿಯಾಗಿದೆ. ಮೊದಲ ಹಬ್ಬದಂದೇ ವಿಶ್ವ ದಾಖಲೆಗೆ ಸಜ್ಜಾಗಿ ನಿಂತಿದ್ದಾನೆ ರಾಮಲಲ್ಲಾ!  ಇದಕ್ಕೆ ಕಾರಣ, ಇದೇ 31 ರಂದು ತನ್ನ ಮೊದಲ ಬೆಳಕಿನ ಹಬ್ಬವನ್ನು ಆಚರಿಸಲು ಸಿದ್ಧವಾಗಿರುವ ದೇಗುಲದಲ್ಲಿ 28 ಲಕ್ಷ ದೀಪಗಳನ್ನು ಬೆಳಗಿಸುವ ಗುರಿ ಹೊಂದಾಗಿದೆ.  ದೀಪೋತ್ಸವ ಎಂದು ಕರೆಯಲ್ಪಡುವ ಈ ಭವ್ಯವಾದ ಕಾರ್ಯಕ್ರಮವನ್ನು ಉತ್ತರ ಪ್ರದೇಶ ಸರ್ಕಾರವು ನಗರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಗೌರವಿಸಲು ಆಯೋಜಿಸುತ್ತಿದೆ. ಸರಯು ನದಿಯ ದಡದಲ್ಲಿ ಬೃಹತ್ ದೀಪಾಲಂಕಾರದೊಂದಿಗೆ ವಿಶ್ವ ದಾಖಲೆಯನ್ನು ಸೃಷ್ಟಿಸುವ ಗುರಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೊಂದಿದ್ದಾರೆ.  
 
 . ದೇವಾಲಯದ ಕಟ್ಟೆಗಳು ಹಾಗೂ ಕೆತ್ತನೆಯ ಮೇಲೆ ಕಲೆಗಳು ಮತ್ತು ಮಸಿ ಪರಿಣಾಮ ಬೀರುವುದನ್ನು ತಡೆಯಲು ಈ ದೀಪಗಳನ್ನು ವಿನ್ಯಾಸಗೊಳಿಸಲಾಗಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ವಿಶೇಷ ಮೇಣದ ದೀಪಗಳನ್ನು ಬಳಸಲು ಇದಾಗಲೇ ಸಿದ್ಧತೆ ನಡೆದಿದೆ. ಅಷ್ಟೇ ಅಲ್ಲದೇ, ದೀರ್ಘಕಾಲದವರೆಗೆ ಈ ದೀಪಗಳು ಬೆಳಗಲಿವೆ. ಈ ದೀಪೋತ್ಸವದಲ್ಲಿ ಪರಿಸರ ಸಂರಕ್ಷಣೆಯೂ ಪ್ರಮುಖವಾಗಿರಲಿದೆ. ದೇವಾಲಯದ ಟ್ರಸ್ಟ್ ಅಕ್ಟೋಬರ್ 29 ರಿಂದ ನವೆಂಬರ್ 1 ರವರೆಗೆ 'ಭವನ ದರ್ಶನ' ಸಮಯವನ್ನು ವಿಸ್ತರಿಸಿದೆ, ಮಧ್ಯರಾತ್ರಿಯವರೆಗೆ ದೇವಾಲಯದ ಅಲಂಕಾರಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದೆ. ಅಧಿಕಾರಿಗಳ ಪ್ರಕಾರ, ವಿವಿಧ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಎನ್‌ಜಿಒಗಳಿಂದ 30,000 ಕ್ಕೂ ಹೆಚ್ಚು ಸ್ವಯಂಸೇವಕರು ಅಯೋಧ್ಯೆಯ 55 ಘಾಟ್‌ಗಳಾದ್ಯಂತ ದೀಪಗಳನ್ನು ವ್ಯವಸ್ಥೆಗೊಳಿಸಲು ಮತ್ತು ಕಾರ್ಯಕ್ರಮವನ್ನು ನಿರ್ವಹಿಸಲು ಸಹಾಯ ಮಾಡಲಿದ್ದಾರೆ. 

ಮಿಸ್ ಗ್ರ್ಯಾಂಡ್ ಇಂಟರ್‌ನ್ಯಾಷನಲ್ ಪ್ರಶಸ್ತಿ ಪಡೆದು ಇತಿಹಾಸ ಸೃಷ್ಟಿಸಿದ ಭಾರತದ ಸುಂದರಿ ರಾಚೆಲ್​

Tap to resize

Latest Videos

ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸಲಿರುವ ರಾಮ ಮಂದಿರ ಸಂಕೀರ್ಣವನ್ನು ಅಲಂಕಾರಕ್ಕಾಗಿ ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ವಿಭಾಗಕ್ಕೆ ನಿರ್ದಿಷ್ಟ ಜವಾಬ್ದಾರಿಗಳನ್ನು ನೀಡಲಾಗಿದೆ. ಬೆಳಕು, ಪ್ರವೇಶ ಕಮಾನು ಅಲಂಕಾರಗಳು ಮತ್ತು ಸಂಪೂರ್ಣ ಶುಚಿಗೊಳಿಸುವಿಕೆಯ ಒಟ್ಟಾರೆ ಮೇಲ್ವಿಚಾರಣೆಯನ್ನು ಬಿಹಾರ ಕೇಡರ್‌ನ ನಿವೃತ್ತ ಐಜಿ ಅಶು ಶುಕ್ಲಾ ಅವರಿಗೆ ವಹಿಸಲಾಗಿದೆ. ಸ್ಥಳೀಯ ಮುಖಂಡರು ಮತ್ತು ಸಂಯೋಜಕರ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಸ್ವಯಂಸೇವಕರಿಗೆ ಶುದ್ಧ ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಸಿದ್ಧತೆಗಳನ್ನು ಮಾಡಲಾಗಿದೆ.    ದೀಪೋತ್ಸವದ ಪ್ರಮುಖ ಅಂಶವಾಗಿ, ರಾಮ್ ಕಿ ಪೈಡಿಯ ಘಾಟ್ ಸಂಖ್ಯೆ 10 ರಲ್ಲಿ 80,000 ದಿಯಾಗಳಿಂದ ಮಾಡಿದ ಸ್ವಸ್ತಿಕ್ ಮಾದರಿಯನ್ನು ರಚಿಸಲಾಗುವುದು, ಇದು ಸಮೃದ್ಧಿ ಮತ್ತು ಸದ್ಭಾವನೆಯ ಸಂಕೇತಗಳನ್ನು ಪ್ರತಿಬಿಂಬಿಸುತ್ತದೆ. ಪ್ರತಿ ದಿನವೂ 30 ಮಿಲಿ ಸಾಸಿವೆ ಎಣ್ಣೆಯಿಂದ ತುಂಬಿರುತ್ತದೆ, ದೇವಸ್ಥಾನದ ಅಧಿಕಾರಿಗಳು ಮತ್ತು ಪುರಸಭೆಯ ಸಿಬ್ಬಂದಿಗಳು ತಡೆರಹಿತ ಪ್ರದರ್ಶನವನ್ನು ಖಚಿತಪಡಿಸಿಕೊಳ್ಳಲು ನಿಖರವಾದ ವ್ಯವಸ್ಥೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. 

ಇಂದು ದೇಶ ಮಾತ್ರವಲ್ಲದೇ ವಿದೇಶಿಗರೂ ಬಂದು ರಾಮಲಲ್ಲಾನನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ. ಪ್ರಾಣ ಪ್ರತಿಷ್ಠೆ ಸಂದರ್ಭದಲ್ಲಿ ವಿವಿಧ ದೇಶಗಳಿಂದ ಉಡುಗೊರೆ ಬಂದಿದ್ದವು. ಅವುಗಳೆಲ್ಲವೂ ವಿಭಿನ್ನ ರೀತಿಯಲ್ಲಿ ಮನಸೂರೆಗೊಂಡಿದ್ದವು. ಇವುಗಳಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು,  ಅಯೋಧ್ಯೆಯಲ್ಲಿ ಬೆಳಗಿದ್ದ ಅತಿದೊಡ್ಡ ದೀಪ. ಬರೋಡದ ರೈತ ಅರವಿಂದ್ ಭಾಯ್ ಪಟೇಲ್ ಈ ಬೃಹತ್ 1100 ಕೆಜಿ ದೀಪವನ್ನು ಅಯೋಧ್ಯೆಗೆ ಕಳುಹಿಸಿದ್ದರು. ಈ ದೀಪ ತಯಾರಿಕೆಯಲ್ಲಿ ಮಣ್ಣು ಮತ್ತು ಪಂಚಧಾತು ಬಳಸಲಾಗಿದೆ. ಈ ದೀಪಕ್ಕೆ ಒಂದೇ ಬಾರಿಗೆ 850 ಲೀಟರ್ ತುಪ್ಪ ಸುರಿಯಬಹುದಾಗಿದೆ. ಇದೀಗ ಪರಿಸರ ಸ್ನೇಹಿ ದೀಪಗಳ ಬಳಕೆ  ಮಾಡಲಾಗುತ್ತಿದೆ. 

ಗೋಡೆ ಮೇಲೆ ಟೇಪ್​ ಹಚ್ಚಿದ ಬಾಳೆಹಣ್ಣು 12 ಕೋಟಿಗೆ ಹರಾಜು! ನಂಬಲಾಸಾಧ್ಯವಾದ್ರೂ ಸತ್ಯ ಇದು...
 

click me!