ಮುಂಬೈ ಬಸ್ ದುರಂತ: ಅಪಘಾತದ ಕಾರಣ ಕೇಳಿ ಮುಂಬೈ ಪೊಲೀಸರೇ ಶಾಕ್!

By Ravi Janekal  |  First Published Dec 11, 2024, 9:41 AM IST

ಮುಂಬೈನ ಕುರ್ಲಾದಲ್ಲಿ ಚಾಲಕನ ನಿರ್ಲಕ್ಷ್ಯದಿಂದ ಬಸ್ ಅಪಘಾತ ಸಂಭವಿಸಿ 7 ಜನರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಚಾಲಕನಿಗೆ ಭಾರೀ ವಾಹನ ಚಾಲನೆಯ ಅನುಭವ ಇಲ್ಲದಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ.


ಮುಂಬೈ (ಡಿ.11):  ಚಾಲಕನ ನಿರ್ಲಕ್ಷ್ಯದಿಂದ ಭೀಕರವಾಗಿ ಬಸ್ ಅಪಘಾತಕ್ಕೀಡಾದ ಘಟನೆ ಮುಂಬೈನ ಕುರ್ಲಾದಲ್ಲಿ ನಡೆದಿದೆ. ಅಪಘಾತದಲ್ಲಿ ಸುಮಾರು 7 ಜನರು ದುರ್ಮರಣಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾಟದಲ್ಲಿ ಮೃತರಾದ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಸ್‌ಸಿ) ಘೋಷಿಸಿದೆ.

Tap to resize

Latest Videos

ಕೊಡಗಿನಲ್ಲಿ KSRTC ಬಸ್ ಭೀಕರ ಅಪಘಾತ: 17 ಮಂದಿಗೆ ಗಾಯ

ಅಪಘಾತ ಸಂಭವಿಸಿದ್ದು ಹೇಗೆ?

undefined

ಘಟನೆ ಸಂಬಂಧ ಬಸ್ ಚಾಲಕ ಸಂಜಯ್ ಮೋರೆಯನ್ನ ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕುರ್ಲಾ ಬಸ್ ಅಪಘಾತ ಪ್ರಕರಣದ ಆರೋಪಿ ಸಂಜಯ್ ಮೋರೆ ಆಕಸ್ಮಿಕವಾಗಿ ಬಸ್‌ನ ಕ್ಲಚ್ ಬದಲಿಗೆ ಆಕ್ಸಿಲರೇಟರ್ ಅನ್ನು ತುಳಿದಿದ್ದಾನೆ  ಸಂಜಯ್‌ಗೆ ಭಾರೀ ವಾಹನಗಳನ್ನು ಓಡಿಸಿದ ಅನುಭವ ಇರಲಿಲ್ಲ, ಮೊದಲು ಸಂಜಯ್ ಮಿನಿ ಬಸ್ ಓಡಿಸುತ್ತಿದ್ದ. ಈ ಬಸ್ಸುಗಳು ಕ್ಲಚ್, ಬ್ರೇಕ್ ಮತ್ತು ವೇಗವರ್ಧಕವನ್ನು ಹೊಂದಿದ್ದವು. ಅದೇ ರೀತಿ 10 ದಿನಗಳ ತರಬೇತಿಯ ನಂತರ ಸಂಜಯ್ ಗೆ ನೇರವಾಗಿ ದೊಡ್ಡ ಬಸ್ ಓಡಿಸುವ ಕೆಲಸಕ್ಕೆ ಸೇರಿದ್ದಾನೆ. ಅಪಘಾತದ ಸಮಯದಲ್ಲಿ, ಆರೋಪಿ ಬ್ರೇಕ್ ಬದಲಿಗೆ ಕ್ಲಚ್  ಆಕ್ಸಿಲರೇಟರ್ ಅನ್ನು ಒತ್ತಿದ  ಇದರಿಂದಾಗಿ ಬಸ್ ನಿಲ್ಲುವ ಬದಲು ವೇಗವನ್ನು ಹೆಚ್ಚಾಗಿ ಅಪಘಾತ ಸಂಭವಿಸಿದ ರಸ್ತೆಯಲ್ಲಿ ಜನಸಂದಣಿಯನ್ನು ನೋಡಿದ ಸಂಜಯ್, ಅನಿಯಂತ್ರಿತ ಬಸ್ ಅನ್ನು ನಿಲ್ಲಿಸಲು ಬಸ್ ಅನ್ನು ಭದ್ರತಾ ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ.

ರಸ್ತೆಯಲ್ಲಿ ರೀಲ್ಸ್ ಮಾಡ್ತಾ ಮೈ ಮರೆತ ತಾಯಿ: ಆಮೇಲಾಗಿದ್ದೇನು?

ಆರೋಪಿಗಳು 21 ರವರೆಗೆ ಪೊಲೀಸರ ವಶಕ್ಕೆ

ಬಸ್ ಅಪಘಾತದ ತನಿಖೆಗಾಗಿ ಬೆಸ್ಟ್ ಎಂಟರ್‌ಪ್ರೈಸಸ್ ಮಂಗಳವಾರ ಸಮಿತಿಯನ್ನು ರಚಿಸಿದೆ ಎನ್ನಲಾಗಿದೆ. ಏತನ್ಮಧ್ಯೆ, ಇಲ್ಲಿನ ನ್ಯಾಯಾಲಯವು ಬಸ್ ಚಾಲಕನನ್ನು ಡಿಸೆಂಬರ್ 21 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ತನಿಖಾ ಸಮಿತಿಯು ಮುಖ್ಯ ವ್ಯವಸ್ಥಾಪಕ (ಸಾರಿಗೆ) ರಮೇಶ್ ಮಾದವಿ ಅವರ ನೇತೃತ್ವದಲ್ಲಿರುತ್ತದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗಳ ಚಿಕಿತ್ಸೆಯ ವೆಚ್ಚವನ್ನು ಸಹ ಬೆಸ್ಟ್ ಭರಿಸಲಿದೆ. ಇದೇ ವೇಳೆ ಬಿಜೆಪಿ ನಿಯೋಗ ಬೆಸ್ಟ್ ಜನರಲ್ ಮ್ಯಾನೇಜರ್ ಅನಿಲ್ ಡಿಗ್ಗಿಕರ್ ಅವರನ್ನು ಭೇಟಿ ಮಾಡಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರದಿಂದ 2 ಲಕ್ಷ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ

click me!