ಬಾಡಿಗೆ ಮನೆಯಲ್ಲಿರುವಾಕೆಗೆ ಅಶ್ಲೀಲ ಸಿಡಿ ಕಲೆಕ್ಷನ್ ತೋರಿಸಿದ ಮಾಲೀಕ, ನೋವು ಹೇಳಿಕೊಂಡ ಯುವತಿ

Published : Sep 22, 2025, 08:10 PM IST
Apartment

ಸಾರಾಂಶ

ಬಾಡಿಗೆ ಮನೆಯಲ್ಲಿರುವಾಕೆಗೆ ಅಶ್ಲೀಲ ಸಿಡಿ ಕಲಕ್ಷೆನ್ ತೋರಿಸಿದ ಮಾಲೀಕ,ನೋವು ಹೇಳಿಕೊಂಡ ಯುವತಿ, ನಡೆದ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಲಹೆ ಕೇಳಿದ್ದಾರೆ. ತನಗಾಗುತ್ತಿರುವ ಹಿಂಸೆಯನ್ನು ಹೇಳಿಕೊಂಡಿದ್ದಾಳೆ. 

ಮುಂಬೈ (ಸೆ.22) ಬಾಡಿಗೆ ಮನೆಯಲ್ಲಿರುವ 26 ವರ್ಷದ ಯುವತಿ ರೆಡ್ಡಿಟ್ ಮೂಲಕ ಬಳಕೆದಾರರಿಂದ ಸಲಹೆ ಕೇಳಿದ್ದಾಳೆ. ಮನೆ ಮಾಲೀಕ ಸುತ್ತಿ ಬಳಸಿ ಫೌಂಡೇಶನ್ ರೆಡಿ ಮಾಡುತ್ತಿದ್ದಾನೆ. ಏನು ಮಾಡಲಿ, ಮಾಲೀಕನ ಉದ್ದೇಶ ಅರಿವಾಗಿದೆ, ಬೇರೆ ಮನೆ ಹುಡುಕುವುದು ಆರ್ಥಿಕವಾಗಿ ಸುಲಭವಲ್ಲ ಎಂದು ಯುವತಿ ನೋವು ತೋಡಿಕೊಂಡಿದ್ದಾಳೆ. ಯುವತಿ ಬಾಡಿಗೆ ಮನೆಯಲ್ಲಿರುವಾಗ ಈ ಮಾಲೀಕ ರಿಪೇರಿ ಕೆಲಸವಿದೆ ಎಂದು ಎಂಟ್ರಿಕೊಟ್ಟು ತನ್ನಲ್ಲಿರುವ ಅಶ್ಲೀಲ ವಿಡಿಯೋಗಳ ಸಿಡಿ, ಡಿವಿಡಿಗಳ ಕಲೆಕ್ಷನ್ ತೋರಿಸಿದ್ದಾನೆ. ಆತ ಸುತ್ತಿ ಬಳಸಿ ಏನು ಹೇಳುತ್ತಿದ್ದಾನೆ ಅನ್ನೋ ಅರ್ಥವಾಗಿದೆ ಎಂದು ಯುವತಿ ಹೇಳಿದ್ದಾಳೆ.

ರೆಡ್ಡಿಟ್‌ನಲ್ಲಿ ತನ್ನ ನೋವು ಹೇಳಿಕೊಂಡ ಯುವತಿ

ನಾನು 26 ವರ್ಷದ ಯುವತಿ. ಮುಂಬೈನ ಅಪಾರ್ಟ್‌ಮೆಂಟ್ ಒಂದರಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ಮಾಲೀಕ ಇತ್ತೀಚೆಗೆ ನನ್ನ ಬಾಡಿಗೆ ಮನೆಯಲ್ಲಿ ರಿಪೇರಿ ಕೆಲಸವಿದೆ ಎಂದು ಆಗಮಿಸಿದ್ದಾನೆ. ಪ್ಲಂಬಿಂಗ್ ಸೇರಿದಂತೆ ಇತರ ಕೆಲ ಸಮಸ್ಯೆಗಳು ಕುರಿತು ನಾನು ಹೇಳಿದ್ದೆ. ಸರಿ ರಿಪೇರಿ ಮಾಡಲಿ ಎಂದು ಬಾಗಿಲು ತೆರೆದೆ. ಆತ ಒಂದಷ್ಟು ಸಲಕರಣೆ ಹಿಡಿದು ಏನೋ ಮಾಡಿದ. ಅದು ಸರಿಯಾಗಿಯೂ ಇಲ್ಲ. ಕೊನೆಗೆ ರಿಪೇರಿ, ಕೆಲಸ ಸೇರಿದಂತೆ ಒಂದಷ್ಟು ಮಾತನಾಡಿದ್ದ. ಮಾಲೀಕನ ವಯಸ್ಸು 40 ದಾಟಿದೆ ಎಂದು ಯುವತಿ ಹೇಳಿಕೊಂಡಿದ್ದಾರೆ.

ಕೆಲ ಹಾರ್ಡ್‌ಡ್ರೈವ್, ಡಿವಿಡಿ ಕನೆಕ್ಟ್ ಮಾಡಬೇಕು ಎಂದ ಮಾಲೀಕ

ಕೆಲ ಹಳೇ ಹಾರ್ಡ್ ಡ್ರೈವ್, ಡಿವಿಡಿ ಇದೆ. ಅದನ್ನು ಟ್ಯಾಬ್‌ಗೆ ಕನೆಕ್ಟ್ ಮಾಡಬೇಕು. ಏನು ಮಾಡಿದರೂ ಕನೆಕ್ಟ್ ಆಗುತ್ತಿಲ್ಲ. ಹೀಗಾಗಿ ಒಂದು ಬಾರಿ ಕನೆಕ್ಟ್ ಮಾಡಿಕೊಡುತ್ತೀರಾ ಎಂದು ಮಾಲೀಕ ಕೇಳಿದ್ದ. ಹಲವು ತಿಂಗಳಿನಿಂದ ಸಭ್ಯನಂತಿದ್ದ ಮಾಲೀಕನಿಗೆ ಟೆಕ್ನಿಕಲ್ ವಿಚಾರ ಗೊತ್ತಿಲ್ಲದೇ ಇರಬಹುದು ಎಂದು ಸರಿ ಎಂದು ಆತನ ಮನೆಗೆ ತೆರಳಿದೆ. ಒಂದೇ ಅಪಾರ್ಟ್‌ಮೆಂಟ್‌ನ ಕೆಳಮಹಡಿಯಲ್ಲಿ ಆತನ ಮನೆಯಿದೆ ಎಂದು ಯುವತಿ ಬರೆದುಕೊಂಡಿದ್ದಾರೆ

ಡಿವಿಡಿ ಕವರ್ ಪೇಜ್ ನೋಡಿ ಅರ್ಥವಾಯಿತು

ಹಾರ್ಡ್ ಡ್ರೈವ್‌ನ್ನು ಟ್ಯಾಬ್ ಕನೆಕ್ಟ್ ಮಾಡಿಕೊಟ್ಟೆ. ಆದರೆ ಮಾಲೀಕ, ಬ್ಯಾಗಿನಿಂದ ಒಂದಷ್ಟು ಡಿವಿಡಿಗಳನ್ನು ತೆಗೆದ. 40 ದಾಟಿದ ಮಾಲೀಕ, ಹಳೇ ಹಿಂದಿ ಸಿನಿಮಾ ಸೇರಿದಂತೆ ಒಂದಷ್ಟು ಕಲೆಕ್ಷನ್ ಮಾಡಿರಬೇಕು. ಮತ್ತೆ ತನ್ನ ಹಳೇ ನೆನಪು ಮರುಕಳಿಸಲು ಸಿನಿಮಾ ನೋಡುತ್ತಿರಬೇಕು ಎಂದುಕೊಂಡೆ. ಆದರೆ ಆತ ಡಿವಿಡಿಗಳನ್ನ ನನಗೆ ತೋರಿಸುತ್ತಿತ್ತ. ಈ ಡಿವಿಡಿಗಳ ಕವರ್ ಪೇಜ್ ನೋಡಿದಾಗ ಅದರೊಳಗೆ ಏನಿದೆ ಅನ್ನೋದು ಅರ್ಥವಾಗಿತ್ತು. ಅಲ್ಲೀವರೆಗೆ ಮಾಲೀಕನ ಮಾತಿನ ಒಳ ಅರ್ಥವೇನು? ಆತ ಏನು ಹೇಳುತ್ತಿದ್ದಾನೆ ಅನ್ನೋದು ಸರಿಯಾಗಿ ಅರ್ಥವಾಗದಿದ್ದರೂ, ಕವರ್ ಪೇಜ್ ನೋಡಿದಾಗ ಎಲ್ಲವೂ ಅರ್ಥವಾಗಿತ್ತು ಎಂದಿದ್ದಾರೆ.

ನನಗೆ ವಯಸ್ಸಾಗಿದೆ, ಆದರೆ ಈ ವಯಸ್ಸಿನಲ್ಲಿ...

ಒಂದು ಡಿವಿಡಿ ಮೇಲಿದ್ದ ಅದರ ಹೆಸರು ಫೋಟೋಗಳು ನೋಡಲು ಅಸಹ್ಯವಾಗುತ್ತಿತ್ತು. ಈ ಡಿವಿಡಿ ಕೈಯಲ್ಲಿದ ಮಾಲೀಕ, ಸಾರಿ, ನಾನು ಇದೆಲ್ಲಾ ನಿಮಗೆ ತೋರಿಸಬಾರದು. ನನಗೂ ವಯಸ್ಸಾಗಿದೆಯಲ್ವಾ, ಇವೆಲ್ಲಾ ಮಾಡೋದು ಎಂದು ರಾಗ ಎಳೆಯಲು ಶುರುಮಾಡಿದ. ಈತನ ಮಾತು ಮುಗಿಯುವ ಮೊದಲೇ ನಾನು ನನಗೆ ಕೆಲಸವಿದೆ ಎಂದು ಹೊರಟೆ. ಮಾಲೀಕನ ಮಾತುಗಳಿಗೆ ನಾನು ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಗೊತ್ತಾಗಲಿಲ್ಲ. ಈ ಪರಿಸ್ಥಿತಿಯಲ್ಲಿ ನಾನು ಏನು ಮಾಡಲಿ ಎಂದು ಯುವತಿ ರೆಡ್ಡಿಟ್‌ನಲ್ಲಿ ಕೇಳಿದ್ದಾಳೆ.

ಯುವತಿಗೆ ಪೋಸ್ಟ್‌ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಮನೆಯಲ್ಲಿ ಒಬ್ಬರೇ ಇರುವುದು ಸುರಕ್ಷಿತವಲ್ಲ. ಒಬ್ಬರೇ ಇರುವಾಗ ಮಾಲೀಕನನ್ನು ಮನೆ ಒಳಗೆ ಬಿಡಬೇಡಿ, ನೀವು ಮಾಲೀಕನ ಮನೆಗೆ ಹೋಗಬೇಡಿ. ಮಹಿಳಾ ಪೊಲೀಸರನ್ನು ಸಂಪರ್ಕಿಸಿ, ಕುಟಂಬಸ್ಥರು, ಆಪ್ತರಿಗೆ ಮಾಹಿತಿ ನೀಡಿ, ಮಾಲೀಕನ ಉದ್ದೇಶವೇನು ಅನ್ನೋದು ನಿಮಗೂ, ನಿಮ್ಮ ಕುಟುಂಬ, ಆಪ್ತರಿಗೂ ಗೊತ್ತಾಗಿದೆ ಅನ್ನೋದು ಮಾಲೀಕನಿಗೆ ಸೂಚ್ಯವಾಗಿ ಗೊತ್ತಾಗುವಂತಾಗಲಿ ಎಂದು ಹಲವು ಸಲೆಹೆಗಳನ್ನು ಬಳಕೆದಾರರು ನೀಡಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ