Covid 19 cases ಲಾಕ್‌ಡೌನ್ ಸೂಚನೆ ನೀಡಿದ ಮೇಯರ್, ಮುಂಬೈನಲ್ಲಿ ಹೆಚ್ಚಿತು ಆತಂಕ!

By Suvarna News  |  First Published Jan 4, 2022, 8:45 PM IST
  • ಮೇಯರ್ ಸೂಚನೆ ಬಳಿಕ ಮುಂಬೈನಲ್ಲಿ ಲಾಕ್‌ಡೌನ್ ಆತಂಕ ಹೆಚ್ಚು
  • 20,000 ಕೇಸ್ ದಾಟಿದರೆ ಲಾಕ್‌ಡೌನ್ ಖಚಿತ ಎಂದ ಮೇಯರ್
  • ಮುಂಬೈನಲ್ಲಿ ಕೇಸ್ ಹೆಚ್ಚಳದಿಂದ ಕರ್ನಾಟಕದಲ್ಲೂ ಆತಂಕ
     

ಮುಂಬೈ(ಜ.04): ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೊರೋನಾ ವೈರಸ್(Coronavius) ಗಣನೀಯವಾಗಿ ಏರಿಕೆಯಾಗಿದೆ. ಮುಂಬೈನಲ್ಲಿ(Mumbai) ಪರಿಸ್ಥಿತಿ ಕೈಮೀರುತ್ತಿದೆ. ಪ್ರತಿ ದಿನ 10,000 ಅಧಿಕ ಹೊಸ ಪ್ರಕರಣಗಳು ದಾಖಲಾಗುತ್ತಿದೆ. ದಿನದಿಂದ ದಿನಕ್ಕೆ ಮುಂಬೈನಲ್ಲಿ ಕೋವಿಡ್ ಪ್ರಕರಣ ದ್ವಿಗಣಗೊಳ್ಳುತ್ತಿದೆ.  ಇದರ ಬೆನ್ನಲ್ಲೇ ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಎಚ್ಚರಿಕೆ ನೀಡಿದ್ದಾರೆ. ಪ್ರತಿ ದಿನ 20,000 ಕೇಸ್ ದಾಖಲಾದರೆ ಲಾಕ್‌ಡೌನ್(Lockdown) ಖಚಿತ ಎಂದಿದ್ದಾರೆ. 

ಒಂದೇ ವಾರದಲ್ಲಿ ಮುಂಬೈನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 10,000ಕ್ಕ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ(Covid Guidelines) ಪ್ರತಿ ದಿನ 20,000 ಹೊಸ ಕೊರೋನಾ ಕೇಸ್ ದಾಖಲಾದರೆ ಲಾಕ್‌ಡೌನ್ ಅನಿವಾರ್ಯವಾಗಿದೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ. ಮುಂದಿನ 2ರಿಂದ 3 ದಿನಗಳ ಕೊರೋನಾ ವರದಿ ಮೇಲೆ ಎಲ್ಲವೂ ನಿರ್ಧಾರವಾಗಲಿದೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.

Latest Videos

undefined

Coronavirus ಕೊರೋನಾ ನಿಯಂತ್ರಣಕ್ಕೆ ನೋಡಲ್‌ ಅಧಿಕಾರಿಗಳನ್ನ ನೇಮಿಸಿದ ರಾಜ್ಯ ಸರ್ಕಾರ

ಮುಂಬೈನಲ್ಲಿ ಕೊರೋನಾ ಹೆಚ್ಚಳ ಕಾರಣ ಕಠಿಣ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಆದರೆ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ (Mask) ಧರಿಸುವುದು, ಸಾಮಾಜಿಕ ಅಂತರ(Social Distance) ಕಾಪಾಡಿಕೊಳ್ಳುವುದನ್ನು ಜನರು ಮರೆತಿದ್ದಾರೆ. ಚಿತ್ರಮಂದಿರ, ಮಾರುಕಟ್ಟೆ, ಗಾರ್ಡನ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಜನಸಂದಣಿ ಹಾಗೇ ಇದೆ. ಈಗಾಗಲೇ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಭೆ ನಡೆಸಿದ್ದಾರೆ. ಅಗತ್ಯಬಿದ್ದರೆ ಮಿನಿ ಲಾಕ್‌ಡೌನ್(Semi Lockdown) ಜಾರಿಗೊಳಿಸಲು ಸೂಚಿಸಿದ್ದಾರೆ ಎಂದು ಕಿಶೋರಿ ಪೆಡ್ನೆಕರ್ ಹೇಳಿದ್ದಾರೆ.

ಎಪ್ರಿಲ್ 18ರ ಬಳಿಕ ಮುಂಬೈನಲ್ಲಿ ಕೊರೋನಾ ವರೈಸ್ ಪ್ರಕರಣ ಗಣನೀಯವಾಗಿ ತಗ್ಗಿತ್ತು. ಇದೀಗ ಪ್ರತಿ ದಿನ 8,000ಕ್ಕೂ ಅಧಿಕ ಕೇಸ್ ದಾಖಲಾಗಿದೆ. ಸೋಮವಾರ(ಜ.03) 8,082 ಕೊರೋನಾ ಪ್ರಕರಣ ದಾಖಲಾಗಿದೆ. ಇಂದು(ಜ.04) 10,860  ಕೋವಿಡ್ ಪ್ರಕರಣ ದಾಖಲಾಗಿದೆ. ಇದರಲ್ಲಿ 40 ಓಮಿಕ್ರಾನ್(omicron virus) ಕೇಸ್ ಆಗಿದೆ. ಇನ್ನು ಸೋಮವಾರ ಇಬ್ಬರು ಕೊರೋನಾಗೆ ಬಲಿಯಾಗಿದ್ದಾರೆ.  ಸದ್ಯ ಮುಂಬೈನಲ್ಲಿ 368 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ.  ಮುಂಬೈನಲ್ಲಿ ಸದ್ಯ ಕೊರೋನಾ ಪ್ರಕರಣಗಳ ಒಟ್ಟು ಸಂಖ್ಯೆ 8,07,602 ಕ್ಕೆ ಏರಿಕೆಯಾಗಿದ್ದರೆ, ಸಾವಿನ ಸಂಖ್ಯೆ 16,379ಕ್ಕೆ ಏರಿಕೆಯಾಗಿದೆ. 

Courts Switching To Virtual Mode : ಹೈಕೋರ್ಟ್‌ನಲ್ಲಿ ವರ್ಚುವಲ್ ವಿಚಾರಣೆ, ಇವೆರಡು ಪೀಠಕ್ಕೆ ವಿನಾಯಿತಿ!

ಮುಂಬೈ ಮಹಾನಗರ ಪಾಲಿಕೆ ಈಗಾಗಲೇ ಹಲವು ಕ್ರಮಗಳನ್ನು ಜಾರಿಗೊಳಿಸಿದೆ. ಜನವರಿ 31ರ ವರೆಗೆ 1 ರಿಂದ 9ನೇ ತರಗತಿ(School) ಹಾಗೂ 11ನೇ ತರಗತಿ ಕ್ಲಾಸ್‌ಗಳನ್ನು ಮುಚ್ಚಲಾಗಿದೆ. 10ನೇ ತರಗತಿ ಹಾಗೂ 12ನೇ ತರಗತಿ ಮಕ್ಕಳನ್ನು ಶಾಲೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಇನ್ನು 15 ರಿಂದ 18 ವರ್ಷದೊಳಗಿನ ಲಸಿಕೆ(Vaccination) ಪಡೆದ ಮಕ್ಕಳು ಅಂದರೆ 9 ಹಾಗೂ 11ನೇ ತರಗತಿ ಮಕ್ಕಳು ಎರಡೂ ಡೋಸ್ ಪಡೆದಿದ್ದರೆ ಶಾಲೆಗೆ ಹಾಜರಾಗಬಹುದು. 

ಅಪಾರ್ಟ್‌ಮೆಂಟ್, ಬಿಲ್ಡಿಂಗ್, ಕಾಲೋನಿಗಳಲ್ಲಿನ ಜನಸಂಖ್ಯೆಯ ಶೇಕಡಾ 20 ರಷ್ಟು ಕೋವಿಡ್ ಪ್ರಕರಣ ದಾಖಲಾಗಿದ್ದರೆ ಅಂತಹ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಇದರ ಜೊತೆಗೆ ಕೋವಿಡ್ ಸೋಂಕಿತ ವ್ಯಕ್ತಿಗೆ 10 ದಿನ ಐಸೋಲೇಶನ್ ಕಡ್ಡಾಯ ಮಾಡಲಾಗಿದೆ.  

ಕರ್ನಾಟಕದಲ್ಲಿ(Karnataka Covid case) ಕೋವಿಡ್ ಕೇಸ್ 2,479 ಕೇಸ್ ದಾಖಲಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 13,532. ಸದ್ಯ ಕರ್ನಾಟದಲ್ಲಿ ಪಾಸಿಟಿವಿಟಿ ರೇಟ್ 2.59 .  ಇನ್ನು ಕೇರಳದಲ್ಲಿ ಇಂದು 3,640 ಕೊರೋನಾ ಕೇಸ್ ದಾಖಲಾಗಿದೆ. ಗುಜರಾತ್‌ನಲ್ಲಿ 2,265 ಕೊರೋನಾ ಕೇಸ್ ದಾಖಲಾಗಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 7,800ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 5,481 ಕೋವಿಡ್ ಕೇಸ್ ದಾಖಲಾಗಿದೆ. ಒಡಿಶಾದಲ್ಲಿ 680, ಲಡಾಖ್‌ನಲ್ಲಿ 65 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

click me!