ಕ್ಷಮಿಸಿಬಿಡಿ: ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ಹತ್ಯಾಚಾರಿ!

By Suvarna NewsFirst Published Jan 14, 2020, 7:18 PM IST
Highlights

ಬದುಕು ಕಸಿದುಕೊಂಡನಿಗೆ ಬದುಕುವ ಆಸೆ| ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ ನಿರ್ಭಯಾ ಹತ್ಯಾಚಾರಿ| ರಾಷ್ಟ್ರಪತಿಗಳಿಗೆ ಜೀವದ ಭಿಕ್ಷೆ ಬೇಡಿದ ಮುಕೇಶ್ ಸಿಂಗ್| ಇಂದು ಬೆಳಗ್ಗೆ ಸುಪ್ರೀಂಕೋರ್ಟ್ ಅಪರಾಧಿಗಳ ಕ್ಯುರೇಟಿವ್ ಅರ್ಜಿ ವಜಾಗೊಳಿಸಿತ್ತು| 

ನವದೆಹಲಿ(ಜ.14): ಮಹತ್ವದ ಬೆಳವಣಿಗೆಯೊಂದರಲ್ಲಿ ನಿರ್ಭಯಾ ಹತ್ಯಾಚಾರಿಗಳಲ್ಲಿ ಓರ್ವನಾದ ಮುಕೇಶ್ ಸಿಂಗ್, ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ.

ಇಂದು ಬೆಳಗ್ಗೆಯಷ್ಟೇ ಸುಪ್ರೀಂಕೋರ್ಟ್ ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಮುಕೇಶ್ ಸಿಂಗ್ ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ.

2012 Delhi gang rape case: Tihar Jail official says, "Convict Mukesh Singh has moved mercy petition today".

— ANI (@ANI)

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಪ್ರಕರಣದ ಆರೋಪಿಗಳಿಗೆ ಜನವರಿ 22ರಂದೇ ಗಲ್ಲು ಶಿಕ್ಷೆ ನಡೆಯಲಿದೆ. ಇಬ್ಬರು ಅಪರಾಧಿಗಳು ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ವಜಾಗೊಳಿಸಿದ್ದು, ಅತ್ಯಾಚಾರಿಗಳಿದ್ದ ಕಟ್ಟಕಡೆಯ ದಾರಿಯೂ ಬಂದ್ ಆಗಿದೆ.

ನಿರ್ಭಯಾ ಹತ್ಯಾಚಾರಿಗಳಿಗೆ ಗಲ್ಲು ಫಿಕ್ಸ್: ದೋಷಿಗಳ ಅರ್ಜಿ ವಜಾ!

ಗಲ್ಲು ಶಿಕ್ಷೆ ವಿರೋಧಿಸಿ ಇಬ್ಬರು ಅಪರಾಧಿಗಳಾದ ವಿನಯ್ ಶರ್ಮಾ ಹಾಗೂ ಮುಕೇಶ್ ಸಿಂಗ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಐವರು ಸದಸ್ಯರ ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠ ಇದನ್ನು ವಜಾಗೊಳಿಸಿದೆ. ಇದು ಅಪರಾಧಿಗಳಿಗೆ ತಮ್ಮ ಪರ ವಾದಿಸಲು ಇದ್ದ ಕೊನೆಯ ವಕಾಶವಾಗಿತ್ತು.

SC's 5-judge bench, headed by Justice NV Ramana, starts hearing curative petitions filed by two Delhi 2012 gangrape&murder case convicts Vinay&Mukesh, in a chamber hearing.Curative petitions are decided in-chambers by judges. It' the last&final legal remedy available to convicts. pic.twitter.com/l7Lt8tKoiA

— ANI (@ANI)

ನಿರ್ಭಯಾ ಹತ್ಯಾಚಾರಿಗಳಿಗೆ ಈಗಾಗಲೇ ಡೆತ್ ವಾರಂಟ್ ಜಾರಿಗೊಳಿಸಲಾಗಿದ್ದು, ಇದೇ ಜ.22ರ ಬೆಳಗ್ಗೆ 7 ಗಂಟೆಗೆ ನಾಲ್ವರನ್ನೂ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗುವುದು.

ರೇಪಿಸ್ಟ್‌ಗಳಿಗೆ ಕ್ಷಮಾದಾನ ಇಲ್ಲ: ರಾಷ್ಟ್ರಪತಿ ಕೋವಿಂದ್

click me!