Mukesh Ambani: 984 ಕೋಟಿಗೆ ಅಂಬಾನಿಯಿಂದ ರೋಬೋಟ್‌ ಸ್ಟಾರ್ಟಪ್‌ ಖರೀದಿ

By Kannadaprabha News  |  First Published Jan 19, 2022, 1:30 AM IST

ಕೋಟ್ಯಧಿಪತಿ ಮುಕೇಶ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ ರೋಬೋಟ್‌ ತಯಾರಿಕಾ ಸ್ಟಾರ್ಟಪ್‌ ಅಡ್ವರ್ಬ್‌ ಟೆಕ್ನಾಲಜಿ ಖರೀದಿಸಲು ಮುಂದಾಗಿದೆ. ಈ ಮೂಲಕ ಇ-ಕಾಮರ್ಸ್‌ ಕ್ಷೇತ್ರದಿಂದ ಹೊಸ ಇಂಧನ ಕ್ಷೇತ್ರದವರೆಗೆ ತನ್ನ ವ್ಯವಹಾರದ ಕಬಂಧಬಾಹುವನ್ನು ವಿಸ್ತರಿಸಲು ಮುಂದಾಗಿದೆ.


ನವದೆಹಲಿ (ಜ.19): ಕೋಟ್ಯಧಿಪತಿ ಮುಕೇಶ್‌ ಅಂಬಾನಿ (Mukesh Ambani) ನೇತೃತ್ವದ ರಿಲಯನ್ಸ್‌ ಇಂಡಸ್ಟ್ರೀಸ್‌ (Reliance Industries) ರೋಬೋಟ್‌ ತಯಾರಿಕಾ ಸ್ಟಾರ್ಟಪ್‌ ಅಡ್ವರ್ಬ್‌ ಟೆಕ್ನಾಲಜಿ (Addverb Technologies) ಖರೀದಿಸಲು ಮುಂದಾಗಿದೆ. ಈ ಮೂಲಕ ಇ-ಕಾಮರ್ಸ್‌ ಕ್ಷೇತ್ರದಿಂದ ಹೊಸ ಇಂಧನ ಕ್ಷೇತ್ರದ ವರೆಗೆ ತನ್ನ ವ್ಯವಹಾರದ ಕಬಂಧಬಾಹುವನ್ನು ವಿಸ್ತರಿಸಲು ಮುಂದಾಗಿದೆ. 

ರೊಬೋಟ್‌ಗಳ ಮೂಲಕ ಇ-ಕಾಮರ್ಸ್‌ ಮತ್ತು ಇಂಧನ ಉತ್ಪಾದಕತೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು 13.2 ಕೋಟಿ ಡಾಲರ್‌ (984 ಕೋಟಿ ರು.)ಪಾವತಿಸಿ ಅಡ್ವರ್ಬ್‌ ಕಂಪನಿಯ ಬಹುಪಾಲು ಷೇರು ಖರೀದಿಸಿದೆ ಎಂದು ಸಾರ್ಟಪ್‌ ಸಹಸಂಸ್ಥಾಪಕ ಸಂಗೀತ್‌ ಕುಮಾರ್‌ ತಿಳಿಸಿದ್ದಾರೆ. ಇ-ಕಾಮರ್ಸ್‌ ದೈತ್ಯ ಅಮೆಜಾನ್‌.ಕಾಂಗಳ ನಡುವೆ ಭಾರೀ ಪೈಪೋಟಿ ನಡೆಯುತ್ತಿರುವ ಹೊತ್ತಲ್ಲೇ ಮುಕೇಶ್‌ ಅಂಬಾನಿ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿ ತನ್ಮೂಲಕ ಪ್ರತಿಸ್ಪರ್ಧೆಗೆ ಸಜ್ಜಾಗಿದ್ದಾರೆ. 

Tap to resize

Latest Videos

ಅಡ್ವರ್ಬ್‌ ಈಗಾಗಲೇ ರಿಲಯನ್ಸ್‌ ಮಾಲೀಕತ್ವದ ಜಿಯೋ ಮಾರ್ಟ್‌, ಅಜಿಯೋ, ನೆಟ್‌ಮೆಂಡ್ಸ್‌ಗಳಲ್ಲಿ ರೋಬೋಟಿಕ್‌ ಮತ್ತಿತರ ಸ್ವಯಂಚಾಲಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿದೆ. ಉತ್ತರ ಪ್ರದೇಶದ ನೋಯ್ಡಾ ಮೂಲದ 5 ವರ್ಷದ ಸ್ಟಾರ್ಟಪ್‌ ಅಡ್ವರ್ಬ್‌ ಸಾಫ್ಟ್‌ವೇರ್‌ ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿ ರೋಬೋಟಿಕ್‌ ವ್ಯವಸ್ಥೆಯನ್ನು ಇನ್‌ಸ್ಟಾಲ್‌ ಮಾಡುತ್ತದೆ.

Leadership Transition: ರಿಲಯನ್ಸ್‌ಗೆ ಶೀಘ್ರ ಉತ್ತರಾಧಿಕಾರಿ: ಖುದ್ದು ಅಂಬಾನಿ ಸುಳಿವು

ಐಷಾರಾಮಿ ಹೋಟೆಲ್ ತೆಕ್ಕೆಗೆ: ರಿಲಯನ್ಸ್  (Reliance) ಮೂಲಕ ಉದ್ಯಮ ಸಾಮ್ರಾಜ್ಯನ್ನು ಮುಕೇಶ್ ಅಂಬಾನಿ (Mukesh Ambani) ವಿಸ್ತರಣೆ ಮಾಡುತ್ತಲೇ ಇದ್ದಾರೆ.  ಲಂಡನ್ ನಲ್ಲಿ ಸ್ಟೋಕ್ ಪಾರ್ಕ್ ಎಸ್ಟೇಟ್ ಖರೀದಿಸಿದ್ದ ಅಂಬಾನಿ ಈಗ ಅಮೆರಿಕದ (USA) ನ್ಯೂಯಾರ್ಕ್ (New York) ನಗರದಲ್ಲಿ ಐಷರಾಮಿ  ಮ್ಯಾಂಡರಿನ್ ಓರಿಯೆಂಟಲ್  ಹೋಟೆಲ್ ಖರೀದಿ ಮಾಡಿದ್ದಾರೆ. ಐಕಾನಿಕ್ ಐಷಾರಾಮಿ ಹೋಟೆಲ್ ಮಾಂಟ್ರಿಯಲ್ ಓರಿಯೆಂಟಲ್ ನ ಶೇ. 73.37 ರಷ್ಟು ಷೇರುಗಳನ್ನು 98.15 ಮಿಲಿಯನ್ ಡಾಲರ್ ಗಳಿಗೆ ರಿಲಯನ್ಸ್ ಇಂಡಸ್ಟ್ರಿಯಲ್ ಇನ್ವೆಸ್ಟ್ ಮೆಂಟ್ ಆಂಡ್ ಹೋಲ್ಡಿಂಗ್ ಲಿಮಿಟೆಡ್ ಖರೀದಿ ಮಾಡಿದೆ. ಕಂಪನಿಗೆ ಸಂಬಂಧಿಸಿದ ಶೇ. 100 ಶೇರು ಖರೀದಿಗೂ ಆಲೋಚನೆ ಮಾಡಿದ್ದೇವೆ ಎಂದು ತಿಳಿಸಿದೆ.

ಹೊಟೆಲ್ ಉದ್ಯಮದಲ್ಲಿ ರಿಲಯನ್ಸ್ ಈಗಾಗಲೇ ಹೆಜ್ಜೆ ಇಟ್ಟು ಆಗಿದೆ. ಓಬೇರಾಯ್ ಹೋಟೆಲ್ಸ್ ನಲ್ಲಿ ರಿಲಯನ್ಸ್ ಈಗಾಗಲೇ ಶೇ. 19  ರಷ್ಟು ಪಾಲು ಹೊಂದಿದೆ. ನೀತಾ ಅಂಬಾನಿ ಕಾರ್ಯಕಾರಿಯ ನಿರ್ದೇಶಕರಲ್ಲಿ ಒಬ್ಬರು.  ಒಟ್ಟಿನಲ್ಲಿ ಲಂಡನ್ ಮತ್ತು ನ್ಯೂಯಾರ್ಕ್ ನಲ್ಲಿ ಭಾರತೀಯ ಕಂಪನಿಯ ಹೋಟೆಲ್ ತೆರೆದಂತೆ ಆಗಿದೆ. ಕೊಲಂಬಸ್ ಸೆಂಟರ್  ಲಕ್ಸುರಿ ಜೊಟೆಲ್ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದ್ದು ರಿಲಯನ್ಸ್ ತೆಕ್ಕೆಗೆ ಬಂದಂತೆ ಆಗಿದೆ. ನಕೆಲ ದಾಖಲಾತಿಗಳ ಕೆಲಸ ಬಾಕಿ ಇದ್ದು ಉಳಿದರುವ 26.63 ಶೇ. ಶೇರುಗಳನ್ನು ರಿಲಯನ್ಸ್ ಖರೀದಿ  ಮಾಡಲಿದೆ. 

Reliance Industries: ರಿಯಲ್ ಎಸ್ಟೇಟ್ ಉದ್ಯಮಿ ಮಗಳ ಜೊತೆ ಮುಕೇಶ್ ಅಂಬಾನಿ ಮೊಮ್ಮಗನ ನಿಶ್ಚಿತಾರ್ಥ!

ಹೋಟೆಲ್ ವಿಶೇಷತೆಗಳು: 2003ಲ್ಲಿ ಸ್ಥಾಪಿಸಲಾದ ಮ್ಯಾಂಡರಿನ್ ಓರಿಯೆಂಟಲ್ ಹೋಟೆಲ್ ವಿಶ್ವದ ಅತ್ಯಂತ ಜನಪ್ರಿಯ ಹೋಟೆಲ್ ಗಳಲ್ಲಿ ಒಂದು. ಪೋರ್ಬ್ಸ್ ಫೈವ್ ಸ್ಟಾರ್ ಸ್ಪಾ ಪ್ರಶಸ್ತಿಗಳಿ ಇದಕ್ಕೆ ಸಂದಿವೆ ಮುಕೇಶ್ ಅಂಬಾನಿ ಇದೇ ಹೋಟೆಲ್ ನ ಬಹುಪಾಲು ಷೇರುಗಳನ್ನು ಖರೀದಿಸಿರುವುದರಿಂದ ಸಹಜವಾಗಿಯೇ ಆಸ್ತಿ ಪ್ರಮಾಣದಲ್ಲಿಯೂ ಹೆಚ್ಚಳವಾಗಿದೆ.

click me!