ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ ಸಾಂಬಾರ್‌ ಸವಿದ ಮುಖೇಶ್‌ ಅಂಬಾನಿ!

Published : Mar 09, 2026, 08:22 PM IST
Mukesh Ambani In Rameshwaram Cafe

ಸಾರಾಂಶ

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಮುಂಬೈನ 'ರಾಮೇಶ್ವರಂ ಕೆಫೆ'ಗೆ ಭೇಟಿ ನೀಡಿದ್ದರು. ಶತಕೋಟ್ಯಾಧಿಪತಿಯಾದರೂ ಸಾಮಾನ್ಯರಂತೆ ಕೆಫೆಗೆ ಬಂದ ಅವರ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂಬೈ (ಮಾ.9): ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿರುವ ಉದ್ಯಮಿ ಮುಕೇಶ್ ಅಂಬಾನಿ ತಮ್ಮ ಸರಳತೆಯಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ಅಂಬಾನಿ ಕುಟುಂಬದ ಯಾವುದಾದರೂ ಸಮಾರಂಭವಿರಲಿ ಅಥವಾ ಆತ್ಮೀಯರ ಮದುವೆಯಿರಲಿ, ಇಡೀ ಕುಟುಂಬ ಒಟ್ಟಾಗಿ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈಗ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಮುಂಬೈನ ಸಾಮಾನ್ಯ ದಕ್ಷಿಣ ಭಾರತೀಯ ಕೆಫೆಯೊಂದರಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಸಾಮಾನ್ಯರಂತೆ ಕೆಫೆಗೆ ಎಂಟ್ರಿ ಕೊಟ್ಟ ಅಂಬಾನಿ ಕುಟುಂಬ

ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಮುಂಬೈನ ಚರ್ಚ್‌ಗೇಟ್ ಪ್ರದೇಶದಲ್ಲಿ, ಕಳೆದ ವಾರವಷ್ಟೇ ಉದ್ಘಾಟನೆ ಆಗಿರುವ ಬೆಂಗಳೂರು ಮೂಲದ 'ರಾಮೇಶ್ವರಂ ಕೆಫೆ'ಗೆ ಊಟಕ್ಕೆ ತೆರಳಿದ್ದರು. ಅಂಬಾನಿ ಅವರನ್ನು ಕಂಡ ಕೂಡಲೇ ಅಲ್ಲಿ ಜನರ ಜನಜಂಗುಳಿಯೇ ಸೇರಿತು. ಕೆಫೆಯಲ್ಲಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ಸಖತ್‌ ವೈರಲ್‌ ಆಗಿದೆ. ಶತಕೋಟ್ಯಾಧಿಪತಿ ಉದ್ಯಮಿಯಾದರೂ ಸಾಮಾನ್ಯರಂತೆ ಕೆಫೆಗೆ ಬಂದು ಊಟ ಮಾಡಿದ ಅಂಬಾನಿ ಅವರ ಈ ಸರಳತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ಅಂಬಾನಿ ಅವರ ಫೇವರೆಟ್ ಸೌತ್ ಇಂಡಿಯನ್ ಫುಡ್!

ಮುಕೇಶ್ ಅಂಬಾನಿ ಅವರ ಆಹಾರದ ಆಯ್ಕೆಗಳು ತುಂಬಾ ಸರಳವಾಗಿವೆ. ಅವರು ನೀಡಿದ ಸಂದರ್ಶನವೊಂದರ ಪ್ರಕಾರ, ಅವರಿಗೆ ದಕ್ಷಿಣ ಭಾರತೀಯ ಮತ್ತು ಗುಜರಾತಿ ಶೈಲಿಯ ಊಟ ಎಂದರೆ ಪಂಚಪ್ರಾಣ. ಇವರ ಫೇವರೆಟ್ ಲಿಸ್ಟ್‌ನಲ್ಲಿ ಇಡ್ಲಿ ಸಾಂಬಾರ್ ಮೊದಲ ಸ್ಥಾನದಲ್ಲಿದೆ. ಪ್ರತಿ ಭಾನುವಾರ ಇಡ್ಲಿ ಸಾಂಬಾರ್ ಸವಿಯುವುದು ಅಂಬಾನಿ ಅವರಿಗೆ ರೂಢಿಯಂತೆ. ಇದಲ್ಲದೆ ಅವರಿಗೆ ಅಕ್ಕಿ ಹಿಟ್ಟಿನಿಂದ ತಯಾರಿಸಿ ಬಾಳೆ ಎಲೆಯಲ್ಲಿ ಬೇಯಿಸುವ ಗುಜರಾತಿ ಖಾದ್ಯ 'ಪಂಕಿ' ಕೂಡ ತುಂಬಾ ಇಷ್ಟ ಎಂದಿದ್ದಾರೆ.

ಮುಂಬೈನ ಈ ತಾಣಗಳೆಂದರೆ ಅಂಬಾನಿಗೆ ಪ್ರೀತಿ

ಮುಂಬೈನ ಸುಪ್ರಸಿದ್ಧ ದಕ್ಷಿಣ ಭಾರತೀಯ ಮತ್ತು ಗುಜರಾತಿ ರೆಸ್ಟೋರೆಂಟ್‌ಗಳ ಊಟವನ್ನು ಮುಕೇಶ್ ಅಂಬಾನಿ ಇಷ್ಟಪಡುತ್ತಾರೆ. ನಗರದ 'ಮೈಸೂರು ಕೆಫೆ' ಮತ್ತು 'ಸ್ವಾತಿ' ಇವು ಅಂಬಾನಿ ಅವರ ನೆಚ್ಚಿನ ತಾಣಗಳು. ಎಷ್ಟೇ ಬ್ಯುಸಿ ಇದ್ದರೂ ಸಮಯ ಮಾಡಿಕೊಂಡು ಸಾಂಪ್ರದಾಯಿಕ ಮತ್ತು ಹಗುರವಾದ ಊಟವನ್ನು ಸವಿಯಲು ಅವರು ಇಂತಹ ಜಾಗಗಳಿಗೆ ಭೇಟಿ ನೀಡುತ್ತಾರೆ.

ಸರಳ ಉಡುಪಿನಲ್ಲಿ ಗಮನ ಸೆಳೆದ ಅಂಬಾನಿ ಫ್ಯಾಮಿಲಿ

ಕೆಫೆ ಭೇಟಿಯ ವೇಳೆ ಮುಕೇಶ್ ಅಂಬಾನಿ ಅವರು ಕಪ್ಪು ಬಣ್ಣದ ಪ್ಯಾಂಟ್ ಮತ್ತು ಬೀಜ್ ಬಣ್ಣದ ಸ್ವೆಟ್‌ಶರ್ಟ್ ಧರಿಸಿದ್ದರು. ಅನಂತ್ ಅಂಬಾನಿ ನೇವಿ ಬ್ಲೂ ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನಲ್ಲಿ ಕಾಣಿಸಿಕೊಂಡರೆ, ರಾಧಿಕಾ ಮರ್ಚೆಂಟ್ ಅವರು ಬಿಳಿ ಬಣ್ಣದ ಸುಂದರವಾದ ಫ್ರಾಕ್ ಹಾಗೂ ಗುಲಾಬಿ ಬಣ್ಣದ ಸ್ಟೋಲ್ ಧರಿಸಿ ಸರಳವಾಗಿ ಮತ್ತು ಆಕರ್ಷಕವಾಗಿ ಕಾಣುತ್ತಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಫ್ರೀ ಬಸ್​ ಜೊತೆ ಮಹಿಳೆಯರಿಗೆ ಚಿನ್ನ, ದುಡ್ಡು , ರೇಷ್ಮೆ ಸೀರೆ, ಸಿಲಿಂಡರ್‌ ಎಲ್ಲವೂ ಉಚಿತ- ಏನಿದು ಸ್ಕೀಮ್​?
ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ