ಕೇಂದ್ರಕ್ಕೆ ಸಡ್ಡು: ಜನೌಷಧಿ ರೀತಿ ತಮಿಳುನಾಡಲ್ಲಿ 1 ಸಾವಿರ ಔಷಧ ಅಂಗಡಿ!

Published : Feb 25, 2025, 09:50 AM ISTUpdated : Feb 25, 2025, 10:20 AM IST
ಕೇಂದ್ರಕ್ಕೆ ಸಡ್ಡು: ಜನೌಷಧಿ ರೀತಿ ತಮಿಳುನಾಡಲ್ಲಿ 1 ಸಾವಿರ ಔಷಧ ಅಂಗಡಿ!

ಸಾರಾಂಶ

ತಮಿಳುನಾಡು ಸರ್ಕಾರವು ರಾಜ್ಯಾದ್ಯಂತ ಸಬ್ಸಿಡಿ ದರದಲ್ಲಿ ಔಷಧಿಗಳನ್ನು ಒದಗಿಸಲು 'ಮುದಲ್ವಾರ್‌ ಮರುಂಧಗಂಗಲ್‌' ಔಷಧ ಅಂಗಡಿಗಳನ್ನು ಪ್ರಾರಂಭಿಸಿದೆ. ಈ ಔಷಧಾಲಯಗಳು ಸಾರ್ವಜನಿಕರಿಗೆ ಶೇ.75ರವರೆಗೆ ರಿಯಾಯ್ತಿ ದರದಲ್ಲಿ ಔಷಧಿಗಳನ್ನು ಪೂರೈಸುತ್ತವೆ.

ಚೆನ್ನೈ (ಫೆ.25) : ಮೋದಿ ಸರ್ಕಾರದ ಜನೌಷಧಿ ರೀತಿಯಲ್ಲಿ ತಮಿಳುನಾಡಿನಾದ್ಯಂತ ಸಬ್ಸಿಡಿ ದರದಲ್ಲಿ ಜನರಿಗೆ ಔಷಧಿಗಳನ್ನು ಒದಗಿಸುವ ಸುಮಾರು 1 ಸಾವಿರ 'ಮುದಲ್ವಾರ್‌ ಮರುಂಧಗಂಗಲ್‌' ಔಷಧ ಅಂಗಡಿಗಳಿಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೋಮವಾರ ಇವನ್ನು ಉದ್ಘಾಟಿಸಿದರು. ಈ ಔಷಧಾಲಯಗಳು ಸಾರ್ವಜನಿಕರಿಗೆ ಶೇ.75ರವರೆಗೆ ರಿಯಾಯ್ತಿ ದರದಲ್ಲಿ ಔಷಧಿಗಳನ್ನು ಪೂರೈಸುತ್ತವೆ. ಅಲ್ಲದೆ, ಸುಮಾರು 1,500 ಬಿ.ಫಾರ್ಮ, ಡಿ.ಫಾರ್ಮ ಪದವಿ, ಡಿಪ್ಲೊಮಾ ಮಾಡಿದವರಿಗೆ ಉದ್ಯೋಗಾವಕಾಶವನ್ನೂ ಒದಗಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ದೀರ್ಘಕಾಲದ ವರೆಗೆ ಔಷಧಗಳ ಮೇಲೆ ಅವಲಂಬಿತರಾಗಿರುವ ಅನೇಕರಿಗೆ ಈ ಔಷಧಾಲಯಗಳಿಂದ ಅನುಕೂಲವಾಗಲಿದೆ. ಅವರಿಗೆ ಆಗುತ್ತಿದ್ದ ಹಣಕಾಸಿನ ಹೊರೆಯೂ ಕಡಿಮೆಯಾಗಲಿದೆ. ಇಂಥ ಮೆಡಿಕಲ್‌ ಶಾಪ್‌ ನಡೆಸಲು ಫಾರ್ಮಸಿಸ್ಟ್‌ಗಳು ಹಾಗೂ ಕೋ-ಆಪರೇಟಿವ್‌ ಸೊಸೈಟಿಗಳಿಗೆ ಸರ್ಕಾರದಿಂದ ಸಬ್ಸಿಡಿ ಮತ್ತು ಹಣಕಾಸು ನೆರವು ನೀಡಲಾಗಿದೆ. ಉದ್ಯಮಿಗಳಿಗೆ 3 ಲಕ್ಷ ಹಾಗೂ ಕೋ-ಆಪರೇಟಿವ್‌ ಸೊಸೈಟಿಗಳಿಗೆ 2 ಲಕ್ಷ ಸಬ್ಸಿಡಿ ನೀಡಲಾಗಿದೆ. ಈ ಔಷಧಾಲಯಗಳಲ್ಲಿ ಮೂರು ತಿಂಗಳಿಗಾಗುವಷ್ಟು ಔಷಧಗಳ ದಾಸ್ತಾನು ಇರುತ್ತದೆ. ಅಲ್ಲದೆ, ರಾಜ್ಯದ ಎಲ್ಲ 38 ಜಿಲ್ಲೆಗಳಲ್ಲೂ ಔಷಧ ಉಗ್ರಾಣಗಳನ್ನು ಸ್ಥಾಪಿಸಲಾಗಿದೆ ಎಂದು ಸ್ಟಾಲಿನ್‌ ಮಾಹಿತಿ ನೀಡಿದರು.

 

ಬೆಂಗಳೂರಲ್ಲಿ ಜನೌಷಧಿ ಮಳಿಗೆ ಆರಂಭಿಸಲು ನಿರುದ್ಯೋಗಿಗಳಿಂದ ಬಿಬಿಎಂಪಿ ಅರ್ಜಿ ಆಹ್ವಾನ

ಜನೌಷಧಿಗೂ, ತ.ನಾಡು ಫಾರ್ಮಸಿಗೂ ವ್ಯತ್ಯಾಸವೇನು?: ಜನೌಷಧಿ ಕೇಂದ್ರಗಳಲ್ಲಿ ಪ್ರಮುಖ ಔಷಧಗಳ ಜನರಿಕ್‌ ಬ್ರಾಂಡ್‌ ಔಷಧಿಗಳು ಕಡಿಮೆ ದರದಲ್ಲಿ ಸಿಗುತ್ತಿದ್ದರೆ, ಇಲ್ಲಿ ಎಲ್ಲಾ ರೀತಿಯ ಔಷಧಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ.

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ' ಜನ ಔ‍ಷಧಿ' ಕೇಂದ್ರ ನಿಷೇಧ; ಸಂಸದ ತೇಜಸ್ವಿ ಸೂರ್ಯ ಆಕ್ರೋಶ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌