ಕೊರೋನಾ ಹೊಡೆತ, ಸಂಸದರ ವೇತನ ಕಡಿತ ಮಸೂದೆ ಮಂಡನೆ!

Published : Sep 14, 2020, 08:01 PM IST
ಕೊರೋನಾ ಹೊಡೆತ, ಸಂಸದರ ವೇತನ ಕಡಿತ ಮಸೂದೆ ಮಂಡನೆ!

ಸಾರಾಂಶ

 ಕೊರೋನಾ ವಕ್ಕರಿಸಿದ ಬೆನ್ನಲ್ಲೇ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಲಾಕ್‌ಡೌನ್ ಘೋಷಿಸುತ್ತಿದ್ದಂತೆ ಇತ್ತ ಹಲವು ಕಂಪನಿಗಳು ವೇತನ ಕಡಿತ, ಉದ್ಯೋಗ ಕಡಿತ ಮಾಡಲು ಆರಂಭಿಸಿತು. ಇದೀಗ ಕೊರೋನಾ ಹೊಡೆತ ಸಂಸದರಿಗೂ ತಟ್ಟಿದೆ. ಸಂಸದರಿ ವೇತನ ಕಡಿತಕ್ಕೆ ಮಸೂದೆ ಮಂಡಿಸಲಾಗಿದೆ.

ನವದೆಹಲಿ(ಸೆ.14): ಕೊರೋನಾ ವೈರಸ್, ಲಾಕ್‌ಡೌನ್ ಸೇರಿದಂತೆ ಹಲವು ಕಾರಣಗಳಿಂದ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಲಾಕ್‌ಡೌನ್ ನಷ್ಟ ಸರಿದೂಗಿಸಲು ಸರ್ಕಾರ ಹೆಣಗಾಡುತ್ತಿದೆ. ಹೀಗಾಗಿ ಕೊರೋನಾ ವೈರಸ್‌ನಿಂದ ಸೃಷ್ಟಿಯಾಗಿರುವ ಅಗತ್ಯತೆಗಳಿಗೆ ಪೂರೈಕೆ ಮಾಡಲು ಸಂಸದರ ವೇತನದ ಶೇಕಡಾ 30 ರಷ್ಟು ಕಡಿತ ಮಾಡುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.

ಸಾರಿಗೆ ನಿಗಮದ 10,000 ನೌಕರರಿಗೆ ಸಂಬಳವಿಲ್ಲ

ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ಸಂಸದರ ವೇತನ ಕಡಿತ ಮಸೂದೆಯನ್ನು ಮಂಡಿಸಿದ್ದಾರೆ. ಸಂಸದ  ವೇತನ, ಭತ್ಯೆ, ಪೆನ್ಶನ್  ಬಿಲ್ ತಿದ್ದುಪಡಿ 2020ರ ಅಡಿಯಲ್ಲಿ ಪ್ರಸಕ್ತ ವರ್ಷ ಈ ಕಡಿತ ಜಾರಿ ಮಾಡುವಂತೆ ಈ ಮಸೂದೆ ಉಲ್ಲೇಖಿಸಿದೆ. 1954ರ ಪಾರ್ಲಿಮೆಂಟ್ ಮೆಂಬರ್ ಸ್ಯಾಲರಿ ಬಿಲ್ ತಿದ್ದುಪಡಿ ಬಿಲ್ ಮಂಡಿಸುತ್ತಿದ್ದೇನೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇಲ್ಲಿನ ಶಿಕ್ಷಕರು ಪಿಎಂ ಮೋದಿಗಿಂತಲೂ ಹೆಚ್ಚು ಸ್ಯಾಲರಿ ಪಡೆಯುತ್ತಾರೆ!

ಕೊರೋನಾ ವೈರಸ್ ಮಹಾಮಾರಿಯಿಂದ ನಿರ್ಮಾಣವಾಗಿರುವ ಆರ್ಥಿಕ ಬಿಕ್ಕಟ್ಟು ಸರಿದೂಗಿಸಲು ವೇತನ ಕಡಿತ  ಅನಿವಾರ್ಯವಾಗಿದೆ. ಈ ಮಸೂದೆ ಎಪ್ರಿಲ್ 6 ರಂದು ಕ್ಯಾಬಿನೆಟ್ ಅನುಮೂದನೆ ನೀಡಿದೆ .

ಕೆಲಸ ಕಳೆದುಕೊಂಡ 40 ಸಾವಿರ ಖಾಸಗಿ ಶಿಕ್ಷಕರು

ಪ್ರಧಾನಿ ಲಾಕ್‌ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ, ಹಲವು ಕಂಪನಿಗಳು ವೇತನ ಕಡಿತ, ಉದ್ಯೋಗ ಕಡಿತ ಮಾಡಿತ್ತು. ಅನ್‌ಲಾಕ್ ಪ್ರಕ್ರಿಯೆ ಸಂಪೂರ್ಣವಾಗಿ ಜಾರಿಯಾದರೂ ಹಲವು ಕಂಪನಿಗಳ ಕಡಿತಗಳು ಮುಂದುವರಿದಿದೆ. ಇದೀಗ ಸಂಸದರಿಗೂ ವೇತನ ಕಡಿತದ ಬಿಸಿ ತಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..