
ನವದೆಹಲಿ(ಸೆ.14): ಎರಡನೇ ವಿಶ್ವ ಮಹಾ ಯುದ್ಧದ ಸಂದರ್ಭಕ್ಕೂ ಈಗಿನ ಯುದ್ಧಗಳಿಗೂ ಹಲವು ವ್ಯತ್ಯಾಸಗಳಿವೆ. ಸದ್ಯ ಯುದ್ಧ ಸಾಮಾಗ್ರಿಗಳೆಲ್ಲಾ ಆಧುನಿಕವಾಗಿದೆ. ತಂತ್ರಜ್ಞಾನದ ಮೂಲಕವೇ ಎದುರಾಳಿಗಳ ಮೇಲೆ ದಾಳಿ ಮಾಡುವ ಯುದ್ಧ ಸಾಮಾಗ್ರಿ ಬಹುತೇಕ ಎಲ್ಲಾ ರಾಷ್ಟ್ರದಲ್ಲಿದೆ. ಇದೀಗ ಡೆಫೆನ್ಸ್ ರಿಸರ್ಚ ಅಂಡ್ ಡೆವಲಪ್ಮೆಂಟ್ ಸಂಸ್ಥೆ(DRDO) ಭವಿಷ್ಯದ ಯುದ್ಧ ಸಾಮಾಗ್ರಿ ಉತ್ಪಾದನೆಗೆ ಮುಂದಾಗಿದೆ.
ಕೆಂಪು ಕೋಟೆಯಲ್ಲಿ ಮೋದಿ ಧ್ವಜಾರೋಹಣಕ್ಕೆ DRDO ಆ್ಯಂಟಿ ಡ್ರೋನ್ ಬಳಸಿದ ಭದ್ರತಾ ಪಡೆ!
ಭವಿಷ್ಯದ ಯುದ್ಧದ ಸ್ವರೂಪವೇ ಬದಲಾಗಲಿದೆ. ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಯುದ್ಧ ಸಾಮಾಗ್ರಿ ನಿರ್ಮಾಣಕ್ಕೆ DRDO ಯೋಜನೆ ಹಾಕಿಕೊಂಡಿದೆ. ಹೈ ಎನರ್ಜಿ ಲೇಸರ್ ಹಾಗೂ ಹೈ ಪವರ್ ಮೋಕ್ರೋವೇವ್ಸ್ (ಡೈರೆಕ್ಟೆಡ್ ಎನರ್ಜಿ ವೆಪನ್ಸ್) ಉತ್ಪಾದನ ಮಾಡಲು DRDO ಪ್ಲಾನ್ ಮಾಡಿದೆ.
ಶತ್ರುಗಳನ್ನು ಬಗ್ಗುಬಡಿಯುವ ಸ್ವದೇಶಿ ಹೈಪರ್‌ಸಾನಿಕ್ ಪ್ರಯೋಗ ಗೆದ್ದ ಭಾರತ..!
ಅತ್ಯಾಧುನಿಕ ಶಸ್ತ್ರಾಸ್ತ್ರ ಉತ್ಪಾದನೆ ಯೋಜನೆಯಡಿ DRDO ಕೆಮಿಕಲ್ ಆಕ್ಸಿಜನ್ ಐಯೋಡಿನ್, ಹೈಪವರ್ ಫೈಬರ್ ಲೇಸರ್, ಬೀಮ್ ವೆಪನ್ ಸೇರಿದಂತೆ ಹಲವು ಯುದ್ಧ ಸಾಮಾಗ್ರಿ ಉತ್ಪಾದನೆಗೆ ಮುಂದಾಗಿದೆ. ಈ ಎಲ್ಲಾ ಯುದ್ಧ ಸಾಮಾಗ್ರಿಗಳನ್ನು ಕುಳಿತಲ್ಲಿಂದಲೇ ನಿಯಂತ್ರಿಸಬಹುದು. ಯುದ್ಧದ ವೇಳೆ ಗಡಿಯಲ್ಲಿ ನಿಂತು ಹೋರಾಡಬೇಕಾದ ಅವಶ್ಯಕತೆ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ