ತೇಜಸ್ವಿ ನೀಡಿದ ಮೈಸೂರ್ ಪಾಕ್‌ನ್ನು ಖುಷಿಖುಷಿ ಯಿಂದಲೇ ಸ್ವೀಕರಿಸಿದ ಜೈಶಂಕರ್ ಬೆಂಗಳೂರಿನ ಜತೆಗೆ ತಮಗೆ ಭಾವನಾತ್ಮಕ ಸಂಬಂಧವಿರುವುದಾಗಿ ಹೇಳಿಕೊಂಡಿದ್ದಾರೆ.
ನವದೆಹಲಿ(ಡಿ.16): ಬೆಂಗಳೂರಿನಲ್ಲಿ ಇದೇ ತಿಂಗಳ 17ರಂದು ಅಮೆರಿಕ ಕಾನ್ಸುಲೇಟ್ (ದೂತಾವಾಸ) ಕಚೇರಿ ಆರಂಭ ಆಗಲಿದ್ದು, ಈ ಹಿನ್ನೆಲೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿದೇಶಾಂಗ ಸಚಿವ ಎಸ್.ಜೈ ಶಂಕರ್‌ಗೆ ಮೈಸೂರ್ ಪಾಕ್ ನೀಡಿ ಧನ್ಯವಾದ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಬುಧವಾರ ವಿದೇಶಾಂಗ ಸಚಿವರನ್ನು ಅವರ ಕಚೇರಿಯಲ್ಲೇ ಭೇಟಿ ಮಾಡಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಜೈಶಂಕರ್ ಅವರನ್ನು ರಾಕ್‌ಸ್ಟಾರ್ ಎಂದು ಹೊಗಳಿದ್ದಾರೆ. ಭೇಟಿ ಕುರಿತು ತೇಜಸ್ವಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 'ಬೆಂಗಳೂರಿನ ಲಕ್ಷಾಂತರ ಜನರ ಪರವಾಗಿ ನಿಮಗೆ ಧನ್ಯವಾದಗಳು. ಪ್ರಧಾನಿ ನರೇಂದ್ರ ಮೋದಿ ಮತ್ತು ನಿಮ್ಮ ಪ್ರಯತ್ನ ಇಲ್ಲದಿದ್ದರೆ ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ಸಾಧ್ಯವಾಗುತ್ತಿರಲಿಲ್ಲ' ಎಂದು ಶ್ಲಾಘಿಸಿದ್ದಾರೆ.
ಬೆಂಗ್ಳೂರಲ್ಲಿ ಜ.17ಕ್ಕೆ ಅಮೆರಿಕ ಕಾನ್ಸುಲೆಟ್ ಶುರು: ಕನ್ನಡಿಗರಿಗೆ ಭಾರೀ ಅನುಕೂಲ!
ತೇಜಸ್ವಿ ನೀಡಿದ ಮೈಸೂರ್ ಪಾಕ್‌ನ್ನು ಖುಷಿಖುಷಿ ಯಿಂದಲೇ ಸ್ವೀಕರಿಸಿದ ಜೈಶಂಕರ್ ಬೆಂಗಳೂರಿನ ಜತೆಗೆ ತಮಗೆ ಭಾವನಾತ್ಮಕ ಸಂಬಂಧವಿರುವುದಾಗಿ ಹೇಳಿಕೊಂಡಿದ್ದಾರೆ. 'ಬೆಂಗಳೂರು ಮತ್ತು ಬೆಂಗಳೂರಿನ ಜನರೊಂದಿಗೆ ನನಗೆ ಭಾವನಾತ್ಮಕ ಸಂಬಂಧವಿದೆ. ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗುತ್ತಿರುವುದಕ್ಕೆ ಮತ್ತು ಕಾರ್ಯಕ್ರಮದಲ್ಲಿ ನಾನು ಖುದ್ದು ಭಾಗಿಯಾಗುವುದಕ್ಕೆ ಉತ್ಸುತಕನಾಗಿದ್ದೇನೆ. ನನಗೆ ಇದು ಅತ್ಯಂತ ಮಹತ್ವದ ಹೆಜ್ಜೆ. ಬೆಂಗಳೂರಿನ ಜನ ಈ ಕ್ಷಣಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದರು. 2023ರಲ್ಲಿ ಮೋದಿ ಅಮೆರಿಕ ಭೇಟಿ ಸಂದರ್ಭದಲ್ಲಿ ಈ ಮಹತ್ವದ ಯೋಜನೆಯ ಬಗ್ಗೆ ಮಾತುಕತೆ ನಡೆದಿತ್ತು' ಎಂದಿದ್ದಾರೆ.
ತೇಜಸ್ವಿ ಸೂರ್ಯ ಪ್ರಯತ್ನಕ್ಕೆ ಫಲ:
ನಗರದಲ್ಲಿ ಅಮೆರಿಕ ಕಾನುಲೇಟ್ ಕಚೇರಿ ಆರಂಭವಾಗಬೇಕು ಎಂಬ ಹಲವು ವರ್ಷಗಳ ಬೇಡಿಕೆ ಈಗ ಸಾಕಾರವಾಗು ತ್ತಿದ್ದು, ಭಾರತಕ್ಕೆ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಕಚೇರಿಯನ್ನು ಅರ್ಪಿಸಲಿದ್ದಾರೆ. ಬೆಂಗಳೂರಿಗರು ಅಮೆ ರಿಕದ ವೀಸಾಕ್ಕೆ ಹೈದರಾಬಾದ್, ಚೈನ್ನೆಗೆ ಹೋಗಬೇಕಿತ್ತು. ಆದರೆ, ಇದೀಗ ಇಲ್ಲಿ ಕಚೇರಿ ಆರಂಭವಾಗುತ್ತಿರು ವುದರಿಂದ ಈ ಸಮಸ್ಯೆ ತಪ್ಪಿದಂತಾಗಿದೆ. ಸಂಸದರಾಗಿ ಆಯ್ಕೆಯಾದಾಗಿನಿಂದ ತೇಜಸ್ವಿ ಸೂರ್ಯ ಅವರು ಈ ಬೇಡಿಕೆ ಈಡೇರಿಕೆಗೆ ನಿರಂತರವಾಗಿ ಪ್ರಯತ್ನಿಸುತ್ತಿದ್ದರು.
6 ತಿಂಗಳೊಳಗೆ ಅಮೆರಿಕ ವೀಸಾ ಸೇವೆ ಇಲ್ಲಿ ಆರಂಭ
ಬೆಂಗಳೂರು: ನಗರದಲ್ಲಿ ಅಮೆರಿಕ ದೂತಾವಾಸ ಕಚೇರಿಯು (ಯು.ಎಸ್. ಕಾನ್ಸುಲೇಟ್ ) ಜ.17ರಿಂದ ಕಾರ್ಯಾರಂಭ ಮಾಡಲಿದ್ದು, 6 ತಿಂಗಳೊಳಗೆ ವೀಸಾ ನೀಡುವ ಸೇವೆಯೂ ಶುರುವಾಗಲಿದೆ. ತನ್ಮೂಲಕ ಅಮೆರಿಕ ಕಾನ್ಸುಲೇಟ್ ಬೆಂಗಳೂರಿನಲ್ಲಿ ಆರಂಭವಾಗಬೇಕು ಎಂಬ ಹಲವು ವರ್ಷಗಳ ಬೇಡಿಕೆ ಸಾಕಾರವಾಗುತ್ತಿದೆ.
ತೇಜಸ್ವಿ ಸೂರ್ಯ ಮೆಟ್ರೋ ಮಿತ್ರ: ಸಂಸದರ ಬಗ್ಗೆ ಸಚಿವ ಕೇಂದ್ರ ಸಚಿವ ಮನೋಹರ್ ಖಟ್ಟರ್ ಮೆಚ್ಚುಗೆ
ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್‌ಲ್ಯೂ ಮ್ಯಾರಿಯೇಟ್ ಹೋಟೆಲ್ ನಲ್ಲಿ ಶುಕ್ರವಾರ ಅಮೆರಿಕ ಕಾನ್ಸುಲೇಟ್‌ನ ಕಚೇರಿ ಕಾರ್ಯಾರಂಭ ಕಾರ್ಯಕ್ರಮ ನಡೆಯಲಿದೆ. ಸದ್ಯಕ್ಕೆ ಮ್ಯಾರಿಯೇಟ್ ಹೋಟೆಲ್‌ನಲ್ಲಿಯೇ ಕಚೇರಿ ಕಾರ್ಯನಿರ್ವಹಿಸಲಿದ್ದು, ವ್ಯಾಪಾರ ಮತ್ತು ವಾಣಿಜ್ಯ ಸಂಬಂಧಿ ಚಟುವಟಿಕೆ ಮಾತ್ರ ಇಲ್ಲಿ ನಡೆಯಲಿದೆ.
ಶೀಘ್ರದಲ್ಲೇ ಸಾಮಾನ್ಯ ವೀಸಾ ಪ್ರಕ್ರಿಯೆ ಹಾಗೂ ವಿತರಣೆ ಸೇವೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, 6 ತಿಂಗಳ ಒಳಗಾಗಿ ವೀಸಾ ಸೇವೆಯೂ ಲಭ್ಯವಾಗಲಿದೆ. ಅಲ್ಲಿಯವರೆಗೆ ಎಂದಿನಂತೆ ಚೆನ್ನೈ ಸೇರಿ ನಿಗದಿತ ಕಡೆ ವೀಸಾ ಸೇವೆ ಪಡೆಯಬಹುದು ಎಂದು ಮೂಲಗಳು ತಿಳಿಸಿವೆ.