ನಾನು ರಾಜಕೀಯ ವೃತ್ತಿಜೀವನವನ್ನು ಆನಂದಿಸುತ್ತಿಲ್ಲ: ಕಂಗನಾ ರಣಾವತ್

Published : Jul 08, 2025, 03:24 PM IST
Kangana Ranaut

ಸಾರಾಂಶ

ನಟಿ ಕಂಗನಾ ರಣಾವತ್ ತಮ್ಮ ರಾಜಕೀಯ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಸಮಾಜ ಸೇವೆ ತಮ್ಮ ಹಿನ್ನೆಲೆಯಲ್ಲ ಎಂದು ಹೇಳಿಕೊಂಡಿದ್ದಾರೆ. ತಮ್ಮನ್ನು ಭವಿಷ್ಯದ ಪ್ರಧಾನಿಯಾಗಿ ನೋಡಲು ಸಾಧ್ಯವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ನಟಿ-ರಾಜಕಾರಣಿ ಕಂಗನಾ ರಣಾವತ್ , ತಮ್ಮ ದಿಟ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಮನೆ ಮಾತಾಗಿದ್ದಾರೆ. ಇತ್ತೀಚೆಗೆ ಆತ್ಮನಿರ್ಭರ ಭಾರತ್ ಪಾಡ್‌ಕ್ಯಾಸ್ಟ್‌ನಲ್ಲಿ ಅವರು ತಮ್ಮ ರಾಜಕೀಯ ಜೀವನದ ಬಗ್ಗೆ ನೇರವಾಗಿ ಮಾತನಾಡಿದ್ದು, ಹಲವು ವಿಚಾರವನ್ನು ಮನಬಿಚ್ಚಿ ಮಾತನಾಡಿದ್ದಾರೆ.

ಕಂಗನಾ ತಮ್ಮ ರಾಜಕೀಯದ ಕುರಿತು ಮಾತನಾಡಿ ನನಗೆ ರಾಜಕೀಯ ಸಂಪೂರ್ಣವಾಗಿ ಅರ್ಥವಾಗುತ್ತಿದೆ. ಆದರೆ ನಾನು ಇದನ್ನು ಆನಂದಿಸುತ್ತಿದ್ದೇನೆ ಎಂದೇನು ಹೇಳಲ್ಲ. ರಾಜಕೀಯವೆಂಬುದು ಸಂಪೂರ್ಣ ವಿಭಿನ್ನ ಕೆಲಸ. ಇದು ಸಮಾಜ ಸೇವೆಯಂತೆಯೇ. ಆದರೆ ಇದು ನನ್ನ ಹಿನ್ನೆಲೆಯಲ್ಲ. ಜನರಿಗೆ ಸೇವೆ ಸಲ್ಲಿಸುವುದಾಗಿ ನಾನು ಎಂದಿಗೂ ಯೋಚಿಸಿರಲಿಲ್ಲ ಎಂದಿದ್ದಾರೆ.

ಮಹಿಳಾ ಹಕ್ಕುಗಳ ಪರ ಹೋರಾಟ ನಡೆಸುತ್ತಿರುವ ವ್ಯಕ್ತಿಯಾಗಿದ್ದರೂ, ರಾಜಕಾರಣಿಯ ಜೀವನದಲ್ಲಿ ಪ್ರತಿದಿನ ಎದುರಾಗುವ ಸಮಸ್ಯೆಗಳು ತಮ್ಮ ನಿರೀಕ್ಷೆಗಿಂತ ಭಿನ್ನವಾಗಿವೆ ಎಂದು ಒಪ್ಪಿಕೊಂಡ ಕಂಗನಾ “ನಾನು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ್ದೇನೆ. ಆದರೆ ಅದು ಬೇರೆ. ಯಾರಾದರೂ ನೋವಿನಲ್ಲಿ ಇದ್ದರೆ, ಅವರಿಗೆ ನಾನು ನೆರವಾಗಲು ಸಿದ್ಧಳಾಗಿರುತ್ತೇನೆ. ಆದರೆ ನಾನು ಸಂಸದಳಾಗಿ ಯಾವಾಗಲೂ ಪಂಚಾಯತ್ ಮಟ್ಟದ ಸಮಸ್ಯೆಗಳೊಂದಿಗೆ ಜನರು ನನ್ನ ಬಳಿ ಬರುತ್ತಾರೆ. ಅವರಿಗೆ ಹಾಳಾದ ರಸ್ತೆ, ಮೂಲಸೌಕರ್ಯದ ಸಮಸ್ಯೆಗಳು ಮುಖ್ಯ. ನಾನು ಅವರಿಗೆ ಅದು ರಾಜ್ಯ ಸರ್ಕಾರದ ವಿಷಯ ಎಂದು ಹೇಳಿದಾಗ, ಅವರು ನಿಮ್ಮ ಬಳಿ ಹಣವಿದೆ ನಿಮ್ಮ ಸ್ವಂತ ಹಣವನ್ನು ಬಳಸಿರಿ ಎನ್ನುತ್ತಾರೆ ಎಂದು ಕಂಗನಾ ಹೇಳಿದರು.

ತಮ್ಮನ್ನು ಭವಿಷ್ಯದ ಪ್ರಧಾನಿಯಾಗಿ ನೋಡುತ್ತೀರಾ ಎಂಬ ಪ್ರಶ್ನೆಗೆ ಕಂಗನಾ ತಕ್ಷಣ ತಿರಸ್ಕರಿಸಿ “ನಾನು ಭಾರತದ ಪ್ರಧಾನಿಯಾಗಲು ಸೂಕ್ತ ಎಂದು ಭಾವಿಸುವುದಿಲ್ಲ. ನನಗೆ ಆ ಮಟ್ಟದ ಉತ್ಸಾಹವೂ ಇಲ್ಲ, ಆಸಕ್ತಿಯೂ ಇಲ್ಲ ಎಂದರು. ಅವರು ತಮ್ಮ ವ್ಯಕ್ತಿತ್ವ ಮತ್ತು ಜೀವನಶೈಲಿ ಕುರಿತು ಹೆಚ್ಚಿನ ವಿವರ ನೀಡುತ್ತಾ, ಸಮಾಜ ಸೇವೆ ಎಂದಿಗೂ ನನ್ನ ಹಿನ್ನೆಲೆಯಾಗಿರಲಿಲ್ಲ. ನಾನು ತುಂಬಾ ಸ್ವಾರ್ಥ ಜೀವನವನ್ನು ನಡೆಸಿದ್ದೇನೆ. ನನಗೆ ದೊಡ್ಡ ಮನೆ ಬೇಕು, ದೊಡ್ಡ ಕಾರು ಬೇಕು, ವಜ್ರಗಳು ಬೇಕು, ನಾನು ಚೆನ್ನಾಗಿ ಕಾಣಬೇಕೆಂದು ಬಯಸುತ್ತೇನೆ. ನಾನು ಬದುಕುತ್ತಿರುವ ಜೀವನವೇ ಆ ರೀತಿ ಎಂದರು.

ದೇವರು ನನ್ನನ್ನು ಯಾವ ಉದ್ದೇಶಕ್ಕಾಗಿ ಆರಿಸಿದ್ದಾನೆ ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಜೀವನವನ್ನು ಮಹಾ ತ್ಯಾಗವೆಂದು ನಾನು ನೋಡುವುದಿಲ್ಲ. ನನಗೆ ಆ ರೀತಿಯ ಜೀವನ ಇಷ್ಟವಿಲ್ಲ. ಹಾಗೆ ಬದುಕಲು ನನಗೆ ಸಾಧ್ಯವಿಲ್ಲ, ಮತ್ತು ಯಾರಿಗೂ ಅದು ಬೇಕಾಗಿಯೂ ಇರಬೇಕೆಂದು ನಾನು ಭಾವಿಸುವುದಿಲ್ಲ. ನನ್ನಲ್ಲಿ ಅದು ಇಲ್ಲ ಎಂದು ಕಂಗನಾ ಸ್ಪಷ್ಟಪಡಿಸಿದರು. ಕಂಗನಾ ಈ ಹೇಳಿಕೆಗಳನ್ನು, ಪ್ರವಾಹ ಪೀಡಿತ ಮಂಡಿ ಕ್ಷೇತ್ರಕ್ಕೆ ತಡವಾಗಿ ಭೇಟಿ ನೀಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸಿದರು. ಬಳಿಕ ಅವರು ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿ, ಸ್ಥಳೀಯ ನಿವಾಸಿಗಳೊಂದಿಗೆ ಸಂವಹನ ನಡೆಸಿ, ಅಗತ್ಯ ಸಹಾಯದ ಭರವಸೆ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್