
ನವದೆಹಲಿ[ಮಾ.06]: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆಯಿಂದಲೇ ಭಾರತದಲ್ಲಿ ಕೊರೋನಾ ವೈರಸ್ ಹಬ್ಬಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂಬ ಬಿಜೆಪಿ ಸಂಸದ ಹನುಮಾನ ಬೇನಿವಾಲ್ ಅವರ ಹೇಳಿಕೆಯೊಂದು ಗುರುವಾರ ಸಂಸತ್ತಿನ ಉಭಯ ಸದನಗಳಲ್ಲೂ ಭಾರೀ ಕೋಲಾಹಲ ಸೃಷ್ಟಿಸಿದೆ.
ಗುರುವಾರ ಲೋಕಸಭೆ ಕಲಾಪದ ವೇಳೆ ಮಾತನಾಡಿದ ಬೇನಿವಾಲ್, ‘ಭಾರತದಲ್ಲಿ ಸೋಂಕು ಪತ್ತೆಯಾದ ಬಹುತೇಕ ಜನರು ಇಟಲಿ ಮೂಲದವರು. ಹೀಗಾಗಿ ಸೋನಿಯಾ ಅವರ ಮನೆಯಿಂದಲೇ ಭಾರತಕ್ಕೆ ಸೋಂಕು ಹಬ್ಬಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬೇನಿವಾಲ್ ಅವರ ಈ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಸಂಸತ್ತಿನ ಉಭಯ ಸದನಗಳಲ್ಲೂ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದರು. ಜೊತೆಗೆ ಬೇನಿವಾಲ್ ಕ್ಷಮೆಗೆ ಆಗ್ರಹಿಸಿದರು. ಹೀಗಾಗಿ ಕಲಾಪವನ್ನೇ ಮುಂದೂಡಬೇಕಾಗಿ ಬಂತು. ಮತ್ತೊಂದೆಡೆ ಬಿಜೆಪಿ ಸಂಸದ ರಮೇಶ್ ಬಿಧೂರಿ ಕೂಡಾ, ಸೋನಿಯಾ ಮತ್ತು ರಾಹುಲ್ ಇತ್ತೀಚೆಗೆ ಇಟಲಿಯಿಂದ ಮರಳಿದ್ದಾರೆ. ಹೀಗಾಗಿ ಅವರನ್ನೂ ಕೊರೋನಾ ಸೋಂಕು ಪತ್ತೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ