ರಾಮಾಯಣ ರಸಪ್ರಶ್ನೆ ಸ್ಪರ್ಧೆ: ಗೆದ್ದರೆ ಅಯೋಧ್ಯೆಗೆ ವಿಮಾನ ಪ್ರಯಾಣ ಭಾಗ್ಯ!!

By Suvarna News  |  First Published Oct 19, 2021, 8:59 AM IST

* ರಾಮಾಯಾಣ ಮಹಾಕಾವ್ಯ ಆಧರಿಸಿ ಮಧ್ಯಪ್ರದೇಶ ಸರ್ಕಾರವು ರಸಪ್ರಶ್ನೆ ಸ್ಪರ್ಧೆ

* ರಾಮಾಯಣ ರಸಪ್ರಶ್ನೆ ಸ್ಪರ್ಧೆ ಗೆದ್ದರೆ ಅಯೋಧ್ಯೆಗೆ ವಿಮಾನ ಪ್ರಯಾಣ ಭಾಗ್ಯ


ಭೋಪಾಲ್‌(ಅ.19): ರಾಮಾಯಾಣ ಮಹಾಕಾವ್ಯ(Ramayana) ಆಧರಿಸಿ ಮಧ್ಯಪ್ರದೇಶ ಸರ್ಕಾರವು ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಿದೆ. ಇದರಲ್ಲಿ ವಿಜೇತರಾಗುವವರಿಗೆ ವಿಮಾನದ ಮೂಲಕ ಅಯೋಧ್ಯೆಗೆ(Ayodhya) ಹೋಗುವ ಅವಕಾಶ ದೊರೆಯಲಿದೆ ಎಂದು ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಇಲಾಖೆ ಸಚಿವೆ ಉಷಾ ಠಾಕೂರ್‌(Usha Thakur) ಹೇಳಿದ್ದಾರೆ.

ಡಾ.ಬಿ.ಆರ್‌. ಅಂಬೇಡ್ಕರ್‌ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ರಾಮಚರಿತ ಮಾನಸ ಕೃತಿಯ ಅಯೋಧ್ಯಾಖಾಂಡದ ಮೇಲೆ ಆಯೋಜಿಸಿದ್ದ ರಸಪ್ರಶ್ನೆ(Quiz) ಸ್ಫರ್ಧೆಯನ್ನು ಉದ್ಘಾಟಿಸಿ ಅವರು ಈ ವಿಷಯ ತಿಳಿಸಿದ್ದಾರೆ. ರಾಷ್ಟ್ರೀಯ ಹಾಗೂ ಅಂತಾ​ರಾ​ಷ್ಟ್ರೀಯ ಮಟ್ಟ​ದಲ್ಲಿ ಈ ಸ್ಪರ್ಧೆ ನಡೆ​ಯ​ಲಿದೆ ಎಂದು ಅವರು ತಿಳಿ​ಸಿದ್ದಾರೆ. ಆದರೆ ಸ್ಪರ್ಧೆ​ಯಲ್ಲಿ ಯಾರು ಭಾಗ​ವ​ಹಿ​ಸ​ಬ​ಹುದು ಹಾಗೂ ಎಷ್ಟು ಜನ​ರನ್ನು ವಿಜೇ​ತ​ರ​ನ್ನಾಗಿ ಆಯ್ಕೆ ಮಾಡ​ಲಾ​ಗು​ತ್ತದೆ ಎಂಬ ವಿವ​ರ​ವನ್ನು ಅವರು ನೀಡಿ​ಲ್ಲ.

Latest Videos

undefined

ಈ ಸ್ಪರ್ಧೆಯಲ್ಲಿ ಪ್ರತಿ ಜಿಲ್ಲೆಯಿಂದ 8 ವಿದ್ಯಾರ್ಥಿಗಳು ಭಾಗವಹಿಸಿದ್ದರು. 4 ವಿದ್ಯಾರ್ಥಿಗಳನ್ನು ವಿಜೇತರೆಂದು ಘೋಷಿಸಲಾಯಿತು. ಆದರೆ ವಿಮಾನಯಾನ ಬಹುಮಾನವಾಗಿರುವ ಸ್ಪರ್ಧೆಯ ವೇಳಾಪಟ್ಟಿ ಹಾಗೂ ಭಾಗವಹಿಸುವ ಜನರ ಮಾಹಿತಿಯನ್ನು ಸರ್ಕಾರ ಪ್ರಕಟಿಸಿಲ್ಲ.

ರಾ​ಮ​ನ ವಿಗ್ರಹ ಸೂರ್ಯರಶ್ಮಿ ಸ್ಪರ್ಶಿ​ಸು​ವಂತೆ ರಾಮ​ಮಂದಿರ ನಿರ್ಮಾ​ಣ!

ಮತ್ತೊಂದೆಡೆ ಅಯೋಧ್ಯೆ ರಾಮಮಂದಿರ(Ayodhya Ram Mandir) ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಪ್ರತಿ ರಾಮನವಮಿ(Ram Navami) ದಿನ ಸೂರ್ಯರಶ್ಮಿ(Sun Rays) ಗರ್ಭಗುಡಿ ಪ್ರವೇಶಿಸುವಂತೆ ವಿನ್ಯಾಸಗೊಳಿಸಲಾಗು​ವು​ದು ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌Sri Ram Janmabhoomi Tirath Kshetra Trust) ಸದಸ್ಯ ಕಾಮೇ​ಶ್ವರ ಚೌಪಾ​ಲ್‌ ತಿಳಿಸಿದ್ದಾರೆ.

ಈ ಒಂದು ವಿನ್ಯಾಸಕ್ಕೆ 13ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಒಡಿಶಾದ ಕೊನಾರ್ಕ್ ಸೂರ್ಯ ದೇವಾಲಯವೇ( Sun temple at Konark in Odisha) ಪ್ರೇರಣೆ ಎಂದಿದ್ದಾರೆ.

ವಿಜ್ಞಾನಿಗಳು(Scientists), ಜ್ಯೋತಿಷಿಗಳು, ಮತ್ತು ತಂತ್ರಜ್ಞರ ಸಲಹೆ ಪಡೆದು ರಾಮನವಮಿಯಂದು(Ram Navami) ಸೂರ್ಯರಶ್ಮಿ ಗರ್ಭಗುಡಿ ಪ್ರೇವೇಶಿಸುವಂತೆ ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಕೋನಾರ್ಕ್ದ ಸೂರ್ಯ ದೇಗುಲ ನಮಗೆ ಮಾದರಿಯಾಗಿದೆ ಎಂದಿ​ದ್ದಾ​ರೆ.

2023ರ ಡಿಸೆಂಬರ್‌ ವೇಳೆಗೆ ರಾಮಮಂದಿರ(Ram Navami) ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದ್ದು, ಭಕ್ತರ ದರ್ಶನಕ್ಕೆ ಮುಕ್ತವಾಗಲಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಮೊದಲಹಂತದ ನಿರ್ಮಾಣ ಕಾರ್ಯಗಳು ಮುಕ್ತಾಯವಾಗಿದ್ದು ನವೆಂಬರ್‌ ಮೂರನೇ ವಾರದಿಂದ ಎರಡನೇ ಹಂತದ ನಿರ್ಮಾಣ ಕಾರ್ಯಗಳು ಶುರುವಾಗಲಿವೆ ಎಂದು ತಿಳಿಸಿದ್ದಾರೆ.

ಉತ್ತರ ಪ್ರದೇಶ ಭೂಕಂಪ ಪೀಡತ ಮತ್ತು ಹಿಮಾಲಯದ ತಪ್ಪಲಲ್ಲಿರುವ ಪ್ರದೇಶವಾದ್ದರಿಂದ ಸಾಕಷ್ಟು ಅಂಶಗಳನ್ನು ಪರಿಗಣಿಸಿ, ವೈಜ್ಞಾನಿಕ, ಭೌಗೋಳಿಕ, ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಮೂಲ ಮಾದರಿಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಎರಡು ಅಂತಸ್ತಿನ ಬದಲು ಮೂರು ಅಂತಸ್ತು ಕಟ್ಟಲಾಗುತ್ತದೆ ಎಂದು ಚೌಪಾಲ್‌ ತಿಳಿಸಿದ್ದಾರೆ.

ಅಲ್ಲದೇ ರಾಮಮಂದಿರ ವಸ್ತು ಸಂಗ್ರಹಾಲಯ, ದಾಖಲೆಗಳ ಸಂಗ್ರಹಾಲಯ ಸಂಶೋಧನಾ ಕೇಂದ್ರ, ಸಭಾಂಗಣ, ಗೋಶಾಲೆ, ಪ್ರವಾಸಿ ಕೇಂದ್ರ ಆಡಳಿತ ಭವನ, ಯೋಗ ಕೇಂದ್ರ ಸೇರಿ ಇತರ ಸೌಲಭ್ಯಗಳನ್ನು ಒಳಗೊಂಡಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

click me!