ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ , ಗರ್ಭಿಣಿ ಸೇರಿ ಇಬ್ಬರೂ ಸಜೀವ ದಹನ

By Anusha KbFirst Published Feb 2, 2023, 1:07 PM IST
Highlights

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಾರನ್ನು ವ್ಯಾಪಿಸಿದ ಪರಿಣಾಮ ಗರ್ಭಿಣಿ ಸೇರಿದಂತೆ ಇಬ್ಬರೂ ಸಜೀವ ದಹನಗೊಂಡ ಘಟನೆ ದೇವರನಾಡು ಕೇರಳದ ಕಣ್ಣೂರಿನಲ್ಲಿ ನಡೆದಿದೆ.

ಕಣ್ಣೂರ್:  ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಾರನ್ನು ವ್ಯಾಪಿಸಿದ ಪರಿಣಾಮ ಗರ್ಭಿಣಿ ಸೇರಿದಂತೆ ಇಬ್ಬರೂ ಸಜೀವ ದಹನಗೊಂಡ ಘಟನೆ ದೇವರನಾಡು ಕೇರಳದ ಕಣ್ಣೂರಿನಲ್ಲಿ ನಡೆದಿದೆ.  ಇಂದು ಮುಂಜಾನೆ 10 30 ರ ಸುಮಾರಿಗೆ ಕಣ್ಣೂರು ಜಿಲ್ಲಾಸ್ಪತ್ರೆಯ ಮುಂಭಾಗವೇ ಈ ದುರಂತ ನಡೆದಿದೆ.  ಹೀಗೆ ಕಾರಿನಲ್ಲಿ ಸಿಲುಕಿ ಸಜೀವ ದಹನಗೊಂಡವರನ್ನು ಪ್ರಜೀತ್ ಹಾಗೂ ಆತನ ಪತ್ನಿ ರೀಷಾ ಎಂದು ಗುರುತಿಸಲಾಗಿದೆ. 

ಘಟನೆ ಸಂಭವಿಸುವ ವೇಳೆ  ಕಾರಿನಲ್ಲಿ  ಒಟ್ಟು ಆರು ಜನ ಪ್ರಯಾಣಿಸುತ್ತಿದ್ದರು. ಕಾರಿನ ಮುಂಭಾಗದ ಸೀಟಿನಲ್ಲಿ ಗರ್ಭಿಣಿ  ರೀಷಾ (Reesha) ಹಾಗೂ ಪತಿ ಪ್ರಜೀತ್ (Prajith) ಕುಳಿತಿದ್ದು, ಪ್ರಜೀತ್‌ ಅವರೇ ಕಾರು ಚಲಾಯಿಸುತ್ತಿದ್ದರು.  ಉಳಿದ ನಾಲ್ವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಆದರೆ ಕಾರಿಗೆ ಬೆಂಕಿ ಹತ್ತಿಕೊಂಡಾಗ ಹಿಂದಿನ ಸೀಟಿನಲ್ಲಿ ಕುಳಿತ ನಾಲ್ವರು ಕಾರಿನಿಂದ ಹೊರಬಂದು ಪಾರಾಗಿದ್ದಾರೆ. ಆದರೆ ಮುಂಭಾಗದ ಕಾರಿನ ಬಾಗಿಲು ಜಾಮ್ ಆದ ಪರಿಣಾಮ ಮಹಿಳೆ ಹಾಗೂ ಪತಿ ಕಾರಿನಿಂದ ಹೊರ ಬರಲಾಗದೇ ಸಜೀವ ದಹನಗೊಂಡಿದ್ದಾರೆ. 

Mangaluru: ಕಾರಿಗೆ ಬೆಂಕಿ ಬಿದ್ದಿದೆ ಎಂದು ಹಣ ಸುಲಿಯುವ ಗ್ಯಾಂಗ್‌: ವಾಹನ ಸವಾರರೇ ಎಚ್ಚರ..! 

10 ತಿಂಗಳ ಮಗು  ಅಳುತ್ತಿದ್ದರೂ ಬಿಟ್ಟು ಹೋದ ತಾಯಿ: ಕಾರು ಅಪಘಾತದಲ್ಲಿ ಸಾವು

ಮನೆಯಲ್ಲಿ 10 ತಿಂಗಳ ಹಸುಗೂಸು ಅಮ್ಮನನ್ನು ಅಪ್ಪಿಕೊಂಡು ನೀನು ನನ್ನನ್ನು ಬಿಟ್ಟು ಹೋಗಬೇಡ ಎಂದು ಪರಿಪರಿಯಾಗಿ ಅಳುತ್ತಿತ್ತು. ಅದನ್ನು ಲೆಕ್ಕಿಸದೇ ನಾನು ನಿನ್ನ ಅಕ್ಕನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಶಾಲೆಗೆ ಬಿಟ್ಟು ಬರುವುದಾಗಿ ಹೇಳಿ ಹೋದ ತಾಯಿ ಮರಳಿ ಬಾರದ ಲೋಕಕ್ಕೆ ತೆರಳಿದ್ದಾರೆ. ಶಾಲೆಗೆ ಮತ್ತೊಬ್ಬ ಮಗಳನ್ನು ಕರೆದೊಯ್ಯುತ್ತಿದ್ದ ಕಾರಿನ ಮೇಲೆ ಕಾಂಕ್ರೀಟ್‌ ಸಿಮೆಂಟ್‌ ಲಾರಿ ಬಿದ್ದು, ಇಬ್ಬರೂ ತಾಯಿ- ಮಗಳು ಇಬ್ಬರೂ ಸಾವನ್ನಪ್ಪಿದ ಮನಕಲಕುವ ಘಟನೆ  ನಿನ್ನೆ ಬೆಂಗಳೂರಿನಲ್ಲಿ ನಡೆದಿತ್ತು.

ಕಗ್ಗಲೀಪುರ ಸಮೀಪದ ತರಳು ನಿವಾಸಿಯಾಗಿರುವ ಐಟಿ ಉದ್ಯೋಗಿ ಗಾಯಿತ್ರಿ ಕುಮಾರ್(47) ಹಾಗೂ ಅವರ ಹಿರಿಯ ಮಗಳು ಸಮತಾ ಕುಮಾರ್(16)  ಮೃತ ದುರ್ದೈವಿಗಳಾಗಿದ್ದಾರೆ. ಯಾವಾಗಲೂ ಮನೆಯಿಂದ ದೊಡ್ಡ ಮಗಳು ಸಮತಾಳನ್ನು ಅವರ ತಂದೆ ಸುನೀಲ್ ಕುಮಾರ್ ಶಾಲೆಗೆ ಡ್ರಾಪ್‌ ಮಾಡುತ್ತಿದ್ದರು. ಆದರೆ ಇಂದು ಕಛೇರಿಯಲ್ಲಿ ಮೀಟಿಂಗ್ ಹಿನ್ನೆಲೆಯಲ್ಲಿ ಅವರು ಬೇಗನೆ ಕಚೇರಿಗೆ ತೆರಳಿ ಮನೆಯಲ್ಲಿದ್ದ ಪತ್ನಿ ಗಾಯಿತ್ರಿ ಅವರಿಗೆ ಹಿರಿಯ ಮಗಳನ್ನು ಶಾಲೆಗೆ ಬಿಡುವಂತೆ ತಿಳಿಸಿದ್ದಾರೆ. ಹೀಗಾಗಿ, ಕಾರು ತೆಗೆದುಕೊಂಡು ಮಗಳನ್ನು ಶಾಲೆಗೆ ಕಳಿಸಲು ಹೋಗುತ್ತಿದ್ದ ತಾಯಿ, ಮಗಳು ದುರಂತ ಅಂತ್ಯ ಕಂಡಿದ್ದಾರೆ.

ಕಾರು ಅಪಘಾತದ ಕೂಡಲೇ ಪತಿಗೆ ಸಂದೇಶ: ಸುನೀಲ್‌ ಕುಮಾತ್‌ ಮತ್ತು ಮೃತೆ ಗಾಯಿತ್ರಿ ಕುಮಾರ್(47) ಅವರ ಹಿರಿಯ ಮಗಳು ಸಮತಾ ಕುಮಾರ್ ಶೇರ್ ವುಡ್ ಹೈ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಳು. ಪ್ರತಿನಿತ್ಯ ತಂದೆಯೇ ಶಾಲೆಗೆ ಬಿಟ್ಟು ಹೋಗುತ್ತಿದ್ದರು. ಆದರೆ, ಇಂದು ಅಮ್ಮ ಕರೆದುಕೊಂಡು ಹೋಗುತ್ತಿದ್ದರೂ ಜವರಾಯ ಲಾರಿಯ ರೂಪದಲ್ಲಿ ಬಂದು ಪ್ರಾಣವನ್ನು ಹೊತ್ತೊಯ್ದಿದ್ದಾನೆ. ಇವರು ತರಳು‌ ಗ್ರಾಮದ ನಿವಾಸಿ ಆಗಿದ್ದರು. ಮೀಟಿಂಗ್‌ ಹಿನ್ನೆಲೆಯಲ್ಲಿ ಬೇಗನೇ ಕಚೇರಿಗೆ ತೆರಳಿದ್ದ ಸುನೀಲ್‌ ಕುಮಾರ್‌ ಅವರ ಮೊಬೈಲ್‌ಗೆ ಕಾರು ಅಪಘಾತವಾಗುತ್ತಿದ್ದಂತೆ ಗೆ ಮೆಸೇಜ್ ರವಾನೆಯಾಗಿದೆ. ಕಾರು ಅಪಘಾತವಾಗಿದ್ದು, ಕ್ರಷ್ ಆಗಿದೆ ಎಂದು ಮೆಸೇಜ್ ಬಂದಿದೆ. ಇನ್ನು ಮೆಸೇಜ್ ಬರುತ್ತಿದ್ದಂತೆ ಪತಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಜೀವ ಹೋಗಿತ್ತು. 
 

ಹಾವೇರಿ: ಹೆದ್ದಾರಿಯಲ್ಲಿ ಇನ್ನೋವಾ ಕಾರಿಗೆ ಬೆಂಕಿ, ಸುಟ್ಟು ಭಸ್ಮ

 

click me!