ರಾಜೀವ್ ಹತ್ಯೆಯ ನಂತರ ಮನೆಗೆ ಬಂದಿದ್ದ ತೆರೆಸಾ ಪ್ರಿಯಾಂಕಾಗೆ ಏನು ಹೇಳಿದ್ದರು?

Published : Aug 26, 2020, 11:07 PM ISTUpdated : Aug 26, 2020, 11:13 PM IST
ರಾಜೀವ್ ಹತ್ಯೆಯ ನಂತರ ಮನೆಗೆ ಬಂದಿದ್ದ ತೆರೆಸಾ ಪ್ರಿಯಾಂಕಾಗೆ ಏನು ಹೇಳಿದ್ದರು?

ಸಾರಾಂಶ

ಬಾ ನನ್ನ ಜತೆ ಕೆಲಸ ಮಾಡು/ ಮದರ್ ತೆರೆಸಾ ಜನ್ಮದಿನ/ ರಾಜೀವ್ ಹತ್ಯೆ ಬಳಿಕ ಮನೆಗೆ ಬಂದಿದ್ದ ಮದರ್ ತೆರೆಸಾ/  ಹಳೆಯ ನೆನಪು ಹೊರಹಾಕಿದ ಪ್ರಿಯಾಂಕಾ ಗಾಂಧಿ ವಾದ್ರಾ

ನವದೆಹಲಿ(ಆ. 26)  'ಬಾ ನನ್ನ ಜತೆ ಕೆಲಸ ಮಾಡು' ಹೌದು ಈ ಮಾತನ್ನು ಮದರ್ ತೆರೆಸಾ ಪ್ರಿಯಾಂಕಾ ಗಾಂಧಿ ವಾದ್ರಾಗೆ ಹೇಳಿದ್ದರಂತೆ.

1991 ರಲ್ಲಿ ರಾಜೀವ್ ಗಾಂಧಿ ಹತ್ಯೆ ಬಳಿಕ ರಾಜೀವ್ ಮನೆಗೆ ಬಂದಿದ್ದ ತೆರೆಸಾ ಪ್ರಿಯಾಂಕಾ ಬಳಿ  ಹೀಗೆ ಹೇಳಿದ್ದರಂತೆ. ಈ ವಿಚಾರವನ್ನು ಪ್ರಿಯಾಂಕಾ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮದರ್ ತೆರೆಸಾ ಅವರ 110 ನೇ  ಜನ್ಮದಿನದ ವೇಳೆ ಪ್ರಿಯಾಂಕಾ ವಿಚಾರ ಹಂಚಿಕೊಂಡಿದ್ದಾರೆ. ನ ನನ್ನ ತಂದೆ ಹತ್ಯೆಯಾದ ಸಂದರ್ಭ ಎಲ್ಲರೂ ಆತಂಕದಲ್ಲಿದ್ದ ಕಾಲ. ನಾನು ಸಣ್ಣ ಜ್ವರದಿಂದ ನಡುಗುತ್ತಿದ್ದೆ. ಈ ವೇಳೆ ಮನೆಗೆ ಬಂದಿದ್ದ ಮದರ್ ತೆರೆಸಾ ನನ್ನ ಪಕ್ಕ ಕುಳಿತುಕೊಂಡರು. ನನ್ನ ಕೈಯನ್ನು ಹಿಡಿದುಕೊಂಡು ಬಾ ನನ್ನ ಜತೆ ಕೆಲಸ ಮಾಡು ಎಂದು ಕರೆದಿದ್ದರು ಎಂದಿದ್ದಾರೆ.

ಕಾಂಗ್ರೆಸ್ ನಾಯಕತ್ವ ಪ್ರಿಯಾಂಕಾಗೆ; ಹೊಸ ರಾಜಕೀಯ ದಾಳ

ಮಿಶನರಿಯ ಸ್ನೇಹಿತರು ಮತ್ತು ಸಹೋದರಿಯರೊಂದಿಗೆ ಕೆಲಸ ಮಾಡುತ್ತಿರುವ ಪೋಟೋವನ್ನು ಪ್ರಿಯಾಂಕ ಹಂಚಿಕೊಂಡು ಅವರ ಸೇವೆಗೆ ಒಂದು ಅಭಿನಂದನೆಯನ್ನು ಹೇಳಿದ್ದಾರೆ.

ನೋಬೆಲ್ ಶಾಂತಿ ಪುರಸ್ಕಾರಕ್ಕೆ ಪಾತ್ರರಾದ ತೆರೆಸಾ ವಿದೇಶದಲ್ಲಿಯೂ ಹುಟ್ಟಿದ್ದರೂ ಭಾರತವನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡಿದ್ದರು. ಕೋಲ್ಕತ್ತಾದಲ್ಲಿ ಮದರ್ ತೆರೆಸಾ ಅವರನ್ನು ಸ್ಮರಿಸಲಾಯಿತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?
India Latest News Live: ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!