
ಹೈದರಾಬಾದ್(ಆ 26) ಭಾರತದ ಹೆಮ್ಮೆ ಗಣಿತ ತಜ್ಞೆ ಶಕುಂತಲಾ ದೇವಿ ಅವರನ್ನು ಮೀರಿಸುವ ಹುಡಗನೊಬ್ಬ ಹೈದರಾಬಾದಿನಿಂದ ದಾಖಲೆ ಮಾಡಿದ್ದಾರೆ. ಹೈದರಾಬಾದಿನ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕ್ಯುಲೇಟರ್ ಎಂಬ ಖ್ಯಾತಿ
ನೀಲಕಂಠ ಅವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಮೈಂಡ್ ಸ್ಫೋರ್ಟ್ಸ್ ಒಲಿಂಪಿಯಾಡ್ ನಲ್ಲಿ ನಡೆದ ಮಾನಸಿಕ ಲೆಕ್ಕಾಚಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟು ದಾಖಲೆ ಮಾಡಿದ್ದಾರೆ.
ವಿದ್ಯಾರ್ಥಿ ಭವನದ ದೋಸೆ ಪ್ರಿಯೆಯಾಗಿದ್ದ ಶಕುಂತಲಾ ದೇವಿ
ಭಾರತ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಇದ್ದಾಗಲೇ ಲಂಡನ್ ನಲ್ಲಿ ಈ ದಾಖಲೆಯಾಗಿದೆ. ಈ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ನಲ್ಲಿ ಚಿನ್ನದ ಪದಕ ಪಡೆದ ಮೊದಲ ಭಾರತೀಯ ಎಂಬ ಹೆಮ್ಮೆ ಭಾನು ಪ್ರಕಾಶ್ ಪಾಲಾಗಿದೆ.
ಲಂಡನ್ನ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ 13 ದೇಶಗಳಿಂದ 30 ಸ್ಪರ್ಧಿಗಳಿದ್ದರು. ನೀಲಕಂಠ ಗರಿಷ್ಠ 65 ಪಾಯಿಂಟ್ ಕಲೆಹಾಕಿ ಅಗ್ರಸ್ಥಾನ ಗಳಿಸಿಕೊಂಡರು. 10-57ವರ್ಷದವರೆಗಿರುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಿತ್ತು.
1998ರಿಂದ ಚಾಲನೆಯಲ್ಲಿರುವ ಈ ಗಣಿತ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಸಿಕ್ಕಿರುವುದು ಇದೇ ಮೊದಲು. ನನ್ನ ಮೆದುಳು ಕ್ಯಾಲ್ಕ್ಯುಲೇಟರ್‌ಗಿಂತ ವೇಗವಾಗಿ ಕೆಲಸ ಮಾಡುತ್ತದೆ ಎನ್ನುವ ಪ್ರಕಾಶ್ 50 ರಾಷ್ಟ್ರೀಯ ಹಾಗೂ 4 ಅಂತಾರಾಷ್ಟ್ರೀಯ ರೆಕಾರ್ಡ್ ಮಾಡಿದ್ದಾರೆ. 21 ವರ್ಷದ ವಿದ್ಯಾರ್ಥಿ 29 ಮಂದಿಯನ್ನು ಸೋಲಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ.
ಗಣಿತ ಪ್ರಯೋಗಾಲಯವನ್ನು ತರೆಯುವ ಕನಸು ಭಾನು ಪ್ರಕಾಶ್ ಅವರದ್ದು ನಾವು ಇದಕ್ಕಾಗಿ ಹೂಡಿಕೆದಾರರನ್ನು ಎದುರು ನೋಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ