ಪ್ರತಿ ಮನೆಯಲ್ಲೂ ಅತ್ತೆ-ಸೊಸೆ ಜಗಳ ಇರುತ್ತೆ, ಇದು ಸಾಮಾನ್ಯ ಎಂದ ಕೋರ್ಟ್‌!

By Santosh NaikFirst Published Jan 16, 2023, 11:23 PM IST
Highlights

ಮನೆಯೊಳಗೆ ಅತ್ತೆ-ಸೊಸೆ ನಡುವೆ ಜಗಳ ನಡೆಯುವುದು ಸಹಜ ಎಂದು ಕೋರ್ಟ್ ತನ್ನ ಮಹತ್ವದ ತೀರ್ಪಿನೊಂದರಲ್ಲಿ ಹೇಳಿದೆ. ದೆಹಲಿಯ ತೀಸ್‌ ಹಜಾರಿ ಕೋರ್ಟ್‌ ತನ್ನ ತೀರ್ಪಿನಲ್ಲಿ ಈ ಮಾತನ್ನು ಹೇಳಿದೆ.
 

ನವದೆಹಲಿ (ಜ.16): ಅತ್ತೆ ಮತ್ತು ಸೊಸೆ ಜಗಳದ ಕುರಿತು ನ್ಯಾಯಾಲಯವು ಮಹತ್ವದ ಹೇಳಿಕೆಯನ್ನು ನೀಡಿದೆ. ಮನೆಯೊಳಗೆ ನಡೆಯುವ ಅತ್ತೆ ಮತ್ತು ಸೊಸೆ ನಡುವೆ ಜಗಳವನ್ನು ಸಾರ್ವಜನಿಕ ಶಾಂತಿಗೆ ಭಂಗ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ. ಮನೆಯೊಳಗೆ ಅತ್ತೆ-ಸೊಸೆ ನಡುವೆ ಜಗಳ ನಡೆಯುವುದು ಸಹಜ ಎಂದು ಕೋರ್ಟ್ ತನ್ನ ಮಹತ್ವದ ತೀರ್ಪಿನೊಂದರಲ್ಲಿ ತಿಳಿಸಿದೆ. ಇದು ನೆರೆಹೊರೆಯವರ ಮತ್ತು ಹೊರಗಿನವರ ಶಾಂತಿಯನ್ನು ಕದಡಲು ಯಾವುದೇ ಆಧಾರವನ್ನು ರೂಪಿಸುವುದಿಲ್ಲ ಎಂದಿದೆ. ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಮನೀಶ್ ಖುರಾನಾ ಅವರ ನ್ಯಾಯಾಲಯವು ಈ ಪ್ರಕರಣದಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅವರು ಸೊಸೆಯ ವಿರುದ್ಧ ಹೊರಡಿಸಿದ ಸಿಆರ್‌ಪಿಸಿ ಯ ಸೆಕ್ಷನ್ 107/111 ಅನ್ನು ರದ್ದುಗೊಳಿಸುವಂತೆ ಆದೇಶಿಸಿದ್ದಾರೆ.

ಪ್ರತಿ ಬಾರಿ ತಪ್ಪು ಸೊಸೆಯದ್ದೇ ಆಗಿರೋದಿಲ್ಲ: ಪ್ರತಿ ಬಾರಿಯೂ ಸೊಸೆಯದ್ದೇ ತಪ್ಪು ಆಗಿರೋದಿಲ್ಲ ಎಂದು ಕೋರ್ಟ್ ಹೇಳಿದೆ. ಇಲ್ಲಿ ಪೊಲೀಸರು ವಿವೇಚನೆಯಿಂದ ವರ್ತಿಸಬೇಕಿತ್ತು. ಕೌಟುಂಬಿಕ ಕಲಹ ಶಾಂತಿ ಭಂಗಕ್ಕೆ ಕಾರಣವಾಗಬಾರದು. ಎಸ್‌ಇಎಂ ಈ ವಿಷಯದಲ್ಲಿ ಸೊಸೆಯ ಕಡೆಯ ಮಾತನ್ನೂ ಕೇಳಲಿಲ್ಲ ಅಥವಾ ಇಡೀ ಪ್ರಕರಣದ ಸತ್ಯಗಳನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ನ್ಯಾಯಾಲಯ ಹೇಳಿದೆ. ನೇರವಾಗಿ ಸೊಸೆಯನ್ನು ಅಪರಾಧಿ ಎನ್ನುವಂತೆ ಕೇಸ್‌ ಹಾಕಿ, ಶಾಂತಿ ಕದಡುವ ಅಪರಾಧಿ ಎಂದು ಪರಿಗಣಿಸಿ, ಜಾಮೀನು ಪಡೆಯಲು ಅಲೆಯುವಂತೆ ಮಾಡಿದರು ಎಂದು ಕೋರ್ಟ್‌ ಹೇಳಿದೆ.

ಹೆಂಡ್ತಿನ ತವರಿಗೆ ಕಳಿಸೋಕೆ ಒಲ್ಲೆ ಅನ್ಬೇಡಿ... ಇಲ್ಲೇನಾಯ್ತು ನೋಡಿ

ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಸೊಸೆ: ಅರ್ಜಿದಾರರು 2018 ರ ಡಿಸೆಂಬರ್ 20 ರಂದು ತನ್ನ ಅತ್ತೆಯೊಂದಿಗೆ ಜಗಳವಾಡಿದ್ದಾರೆ ಎಂದು ನ್ಯಾಯಾಲಯದ ಮುಂದೆ ತಿಳಿಸಿದ್ದಾರೆ. ಅತ್ತೆ ಪೊಲೀಸರಿಗೆ ಕರೆ ಮಾಡಿದರು. ಶಾಂತಿ ಕದಡಿದ್ದಕ್ಕೆ ಸೊಸೆಯ ವಿರುದ್ಧ ಕೇಸ್‌ ಹಾಕಿ ಬಂಧಿಸಿದ್ದರು.

ಮಗಳು ಬೇಡ, ಅತ್ತೇನೆ ಬೇಕು ! 40ರ ಹರೆಯದ ಅತ್ತೆಯೊಂದಿಗೆ ಓಡಿ ಹೋದ ಅಳಿಯ

ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ಮುಂದೆ ಹಾಜರಾಗುವಂತೆ ಮಹಿಳೆಗೆ ತಿಳಿಸಲಾಯಿತು. ಎಸ್‌ಇಎಂ ಈ ಪ್ರಕರಣದಲ್ಲಿ ಸೊಸೆಯನ್ನು ಅಪರಾಧಿ ಎಂದು ಘೋಷಿಸಿತು ಮತ್ತು ಆರು ತಿಂಗಳ ಅವಧಿಗೆ ಬಾಂಡ್ ಅನ್ನು ಒದಗಿಸುವಂತೆ ಆದೇಶಿಸಿತು. ಎಸ್‌ಇಎಂನ ಈ ಆದೇಶವನ್ನು ಸೊಸೆ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಶಾಂತಿ ಭಂಗದ ಪ್ರಕರಣವೆಂದು ಪರಿಗಣಿಸಲು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದೆ.
 

click me!