ತಮಿಳುನಾಡಿನಲ್ಲಿ ಒಟ್ಟಿಗೆ ನೀಟ್ ಪರೀಕ್ಷೆ ಪಾಸಾದ ಅಮ್ಮ, ಮಗಳು

Kannadaprabha News   | Kannada Prabha
Published : Aug 01, 2025, 04:43 AM IST
NEET

ಸಾರಾಂಶ

ಫಿಸಿಯೋಥೆರಫಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿರುವ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ಫಿಸಿಯೋಥೆರಫಿಸ್ಟ್ ಆಗಿರುವ 49 ವರ್ಷದ ಅಮ್ಮ ಹಾಗೂ ಆಕೆಯ ಮಗಳು, ಇಬ್ಬರೂ ಒಟ್ಟಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ತೇರ್ಗಡೆಯಾಗಿರುವ ಅಪರೂಪದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ತಾಯಿ ಅಮುತವಲ್ಲಿ ಮಣಿವಣ್ಣನ್ 147 ಹಾಗೂ ಮಗಳು ಎಂ. ಸಂಯುಕ್ತಾ 450 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ. ತಾಯಿಗೆ ಅಂಗವೈಕಲ್ಯ ಮೀಸಲಾತಿಯಡಿ ತಮ್ಮದೇ ಜಿಲ್ಲೆಯ ವಿರುಧನಗರ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ದೊರಕಿದೆ. ಅವರ ಶಾಲಾ ಶಿಕ್ಷಣ ಪೂರ್ಣಗೊಂಡು 3 ದಶಕಗಳಾಗಿವೆ. ಆಗ ವೈದ್ಯಕೀಯ ಕೋರ್ಸ್‌ಗೆ ಸೀಟು ಸಿಗದ ಕಾರಣ ಫಿಸಿಯೋಥೆರಫಿಸ್ಟ್ ಆಗಿದ್ದರು.

‘ನನ್ನ ಶಾಲಾ ದಿನಗಳ ಪಠ್ಯಕ್ಕೂ ಈಗಿನ ಪಠ್ಯಕ್ಕೂ ಬಹಳ ವ್ಯತ್ಯಾಸವಿದೆ. ಈಗಿನದು ಬಹಳ ಕಠಿಣ. ನನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದ ನಂತರ ನನ್ನ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು. ಅವಳೇ ನನಗೆ ಸ್ಫೂರ್ತಿಯಾದಳು. ಅವಳ ಪುಸ್ತಕವನ್ನು ಪಡೆದು ಓದಲು ಪ್ರಾರಂಭಿಸಿದೆ’ ಎಂದು ಅಮುತವಲ್ಲಿ ಹೇಳಿದ್ದಾರೆ.

‘ಅಮ್ಮ ಕಲಿಯುವ ಕಾಲೇಜಿನಲ್ಲೇ ಕಲಿಯಲು ನನಗೆ ಇಷ್ಟವಿಲ್ಲ. ಹೊರರಾಜ್ಯದಲ್ಲಿ, ಮೀಸಲಾತಿ ಇಲ್ಲದೇ ಸಾಮಾನ್ಯಳಾಗಿ ಸೀಟ್ ಪಡೆಯಬೇಕು ಎಂಬುದು ನನ್ನ ಹಂಬಲ’ ಎಂದು ಮಗಳು ಸಂಯುಕ್ತಾ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ