
ದೆಹಲಿ (ಡಿ.13) ಅಪಾರ್ಟ್‌ಮೆಂಟ್ ಒಂದರಲ್ಲಿ ಕೆಲ ವರ್ಷಗಳಿಂದ ವಾಸವಿದ್ದ ಕುಟುಂಬ ಇದೀಗ ಅದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದೆ. ಕೆಲ ತಿಂಗಳಿನಿಂದ ಬಾಡಿಗೆ ನೀಡದ ಕಾರಣ ಮನವಿ ಮಾಡಿ ಸುಸ್ತಾಗಿದ್ದ ಮಾಲೀಕ ಕೋರ್ಟ್ ಮೂಲಕ ನೋಟಿಸ್ ಹಿಡಿದು ಬಂದಿದ್ದ. ನೋಟಿಸ್ ನೀಡಿ ಬಾಡಿಗೆಗೆ ಇರುವ ಕುಟುಂಬವನ್ನು ಮನೆಯಿಂದ ಹೊರಗೆ ಹಾಕಲು ಮುಂದಾಗಿದ್ದ. ಆದರೆ ಮನೆಗೆ ಬಂದ ಮಾಲೀಕ ಕಂಗಾಲಾಗಿದ್ದಾನೆ. ಮೂವರು ಶವವಾಗಿ ಪತ್ತೆಯಾಗಿದ ಘಟನೆ ದೆಹಲಿಯ ಕಲ್ಕಾಜಿ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.
ಕಲ್ಕಾಜಿ ಅಪಾರ್ಟ್‌ಮೆಂಟ್‌ನ ವಾಸವಿದ್ದ 52 ವರ್ಷದ ಮಹಿಳೆ, ಅವರ ಇಬ್ಬರು ಮಕ್ಕಳಾದಲ 32 ವರ್ಷ ಹಾಗೂ 27 ವರ್ಷದ ಪುತ್ರರು ದುರಂತ ಅಂತ್ಯಕಂಡಿದ್ದಾರೆ. ಕಳೆದ ಕೆಲ ತಿಂಗಳಿನಿಂದ ಇಡೀ ಕುಟುಂಬ ಖಿನ್ನತೆಗೆ ಜಾರಿತ್ತು. ಪತಿಯ ನಿಧನದ ಬಳಿಕ ಇಡೀ ಕುಟುಂಬವೇ ಅಲ್ಲೋಕಲ್ಲೋಲವಾಗಿತ್ತು. 2024ರಲ್ಲಿ ಪತಿ ದಿಢೀರ್ ಸಾವು ಕುಟುಂಬವನ್ನು ಬೀದಿಗೆ ತಂದಿತ್ತು. ಪತಿ ಮಾಡಿದ್ದ ಸಾಲ ತೀರಿಸಲು ಆಗಲಿಲ್ಲ, ಇತ್ತ ಇಬ್ಬರು ಮಕ್ಕಳಿಗೂ ಕೆಲಸ ಸಿಗಲಿಲ್ಲ. ಮಕ್ಕಳಿಬ್ಬರು ಸರ್ಕಾರಿ ಉದ್ಯೋಗದ ಪರೀಕ್ಷೆ ಬರೆಯಲು ತಯಾರಿ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲೇ ತಂದೆಯ ಅಗಲಿಕೆ ತೀವ್ರ ಆಘಾತ ತಂದಿತ್ತು. ಪ್ರಮುಖವಾಗಿ ಅಲ್ಪ ಸ್ವಲ್ಪ ಸಾಲದಲ್ಲಿದ್ದ ಕುಟುಂಬವನ್ನು ದಿವಾಳಿ ಮಾಡಿತ್ತು. ಹೀಗಾಗಿ ಮೂವರು ಖಿನ್ನತೆಗೆ ಜಾರಿದ್ದರು. ಕಳೆದ ಒಂದು ವರ್ಷದಿಂದ ಬಾಡಿಗೆ ನೀಡದೆ ಮನೆಯಲ್ಲೇ ದಿನ ದೂಡುತ್ತಿದ್ದರು.
ತಿಂಗಳಿಗೆ 25,000 ರೂಪಾಯಿ ಬಾಡಿಗೆ ನೀಡದೆ ವರ್ಷಗಳಾಗಿತ್ತು. ಮನೆಯಲ್ಲಿ ಅಕ್ಕಿ ಸೇರಿದಂತೆ ಯಾವುದೇ ವಸ್ತುಗಳು ಇರಲಿಲ್ಲ. ಅಂಗಡಿಗಳಲ್ಲೂ ಸಾಲ ಮಾಡಿಕೊಂಡಿದ್ದರು. ಮನೆ ಮಾಲೀಕ ಬಾಡಿಗೆ ಕ್ಲೀಯರ್ ಮಾಡುವಂತೆ ಹಲವು ಬಾರಿ ಸೂಚಿಸಿದ್ದ. ಆದರೆ ಬಾಡಿಗೆ ನೀಡಲು ಈ ಕುಟುಂಬದ ಬಳಿ ಹಣ ಇರಲಿಲ್ಲ. ಈ ಮನೆ ಬಿಟ್ಟರೆ ಬೇರೆಲ್ಲೂ ಹೋಗಿ ಬದುಕು ಸಾಗಿಸುವ ಆತ್ಮವಿಶ್ವಾಸ ಇರಲಿಲ್ಲ. ಖಿನ್ನತೆಯಿಂದ ಬಳಲುತ್ತದ್ದ ಈ ಮೂವರು ಬಾಡಿಗೆ ನೀಡಲು ಸಾಧ್ಯವಾಗದೇ ಮನೆಯಲ್ಲೇ ಉಳಿದುಕೊಂಡಿದ್ದರು. ಹಲವು ಬಾರಿ ವಾರ್ನಿಂಗ್ ನೀಡಿದ ಮಾಲೀಕ ಕೊನೆಗ ಕೋರ್ಟ್‌ಗೆ ಮನವಿ ಮಾಡಿದ್ದರು.
ಕೋರ್ಟ್ ಬಾಡಿಗೆ ಕ್ಲೀಯರ್ ಮಾಡದಿದ್ದರೆ ತಕ್ಷಣವೆ ಮನೆ ಖಾಲಿ ಮಾಡಲು ಸೂಚನೆ ನೀಡಿತ್ತು. ಈ ಕೋರ್ಟ್ ನೋಟಿಸ್ ಹಿಡಿದು ಸ್ಥಳೀಯ ಪೊಲೀಸರೊಂದಿಗೆ ಬಾಡಿಗೆ ಮನೆಗೆ ಬಂದ ಮಾಲೀಕನಿಗೆ ಆಘಾತ ಎದುರಾಗಿದೆ. ಮನೆಯ ಬಾಗಿಲು ಬಂದ್ ಆಗಿತ್ತು. ಬಾಗಿಲು ಬಡಿದರೂ ತೆರೆಯಲಿಲ್ಲ. ಮಾಲೀಕ ಮನೆಗೆ ತೆರಳಿ ಮತ್ತೊಂದು ಕೀ ತಂದು ಮನೆಯ ಬಾಗಿಲು ತೆರೆದಾಗ ಮೂವರು ದುರಂತ ಅಂತ್ಯಕಂಡಿರುವುದು ಗೊತ್ತಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಏಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ