ಕೇರಳ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಭರ್ಜರಿ ಗೆಲುವು, 45 ವರ್ಷದ LDF ಅಧಿಪತ್ಯ ಅಂತ್ಯ

Published : Dec 13, 2025, 04:35 PM IST
Thiruvananthapuram BJP Celebration

ಸಾರಾಂಶ

ಕೇರಳ ರಾಜಧಾನಿಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಗೆ ಭರ್ಜರಿ ಗೆಲುವು, 45 ವರ್ಷದ LDF ಅಧಿಪತ್ಯ ಅಂತ್ಯ, ಎನ್‌ಡಿಎ ಮೈತ್ರಿಕೂಟ ತಿರುವನಂತಪುರಂ ಕಾರ್ಪೋರೇಶನ್‌ನಲ್ಲಿ 50 ಸ್ಥಾನ ಗೆಲ್ಲುವ ಮೂಲಕ ಹೊಸ ಇತಿಹಾಸ ರಚಿಸಿದೆ.

ತಿರುವನಂತಪುರಂ (ಡಿ.13) ಕೇರಳ ರಾಜಕೀಯ ಹೊಸ ತಿರುವು ಪಡೆದುಕೊಂಡಿದೆ. ಎಲ್‌ಡಿಎಫ್ ಹಾಗೂ ಯುಡಿಎಫ್ ಎರಡು ಪ್ರಮುಖ ಪಕ್ಷಗಳೇ ಕೇರಳ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಮಾಡುತ್ತಿತ್ತು. ಆದರೆ ಈ ಬಾರಿ ಕೇರಳ ಸ್ಥಳೀಯ ಚುನಾವಣೆಯಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಕೇರಳದ ರಾಜಧಾನಿ ತಿರುವನಂತಪುರಂ ಕಾರ್ಪೋರೇಶನ್ ಬಿಜೆಪಿ ಗೆದ್ದುಕೊಂಡಿದೆ. ಕಳೆದ 56 ವರ್ಷದಿಂದ ಎಲ್‌ಡಿಎಫ್ (ಕಮ್ಯೂನಿಸ್ಟ್) ತಿರುವನಂತಪುರಂ ಕಾರ್ಪೋರೇಶನ್‌ನಲ್ಲಿ ಆಡಳಿತ ಮಾಡಿಗೆ. ಆದರೆ ಎಲ್‌ಡಿಎಫ್ ಅಧಿಪತ್ಯಕ್ಕೆ ಬ್ರೇಕ್ ಹಾಕಿರುವ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ.

ತಿರುವನಂತಪುರಂನಲ್ಲಿ ಎನ್‌ಡಿಎಗೆ 50 ಸ್ಥಾನದಲ್ಲಿ ಗೆಲುವು

ತಿರುವಂತಪುರಂ ಕಾರ್ಪೋರೇಶನ್‌ನ 101 ಸ್ಥಾನಗಳ ಪೈಕಿ 100 ಸ್ಥಾನಗಳಿಗೆ ಚನಾವಣೆ ನಡೆದಿತ್ತು. ಒಂದು ಸ್ಥಾನದ ಅಭ್ಯರ್ಥಿ ನಿಧನರಾದ ಹಿನ್ನಲೆಯಲ್ಲಿ ಚುನಾವಣೆ ಮುಂದೂಡಲಾಗಿದೆ. 100ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 50 ಸ್ಥಾನ ಗೆಲ್ಲುವ ಮೂಲಕ ತಿರುವಂತನಪುರಂ ಕಾರ್ಪೋರೇಶನ್ ಗೆದ್ದುಕೊಂಡಿದೆ. ಕಳೆದ 45 ವರ್ಷಗಳಿಂದ ಎಲ್‌ಡಿಎಫ್ ಈ ತಿರುವಂತಪುರಂ ಕಾರ್ಪೋರೇಶನ್‌ನಲ್ಲಿ ಅಧಿಕಾರ ನಡೆಸಿದೆ. ಸುದೀರ್ಘ ಅಧಿಕಾರ ಅನುಭವಿಸಿದ ಎಲ್‌ಡಿಎಫ್‌ಗೆ ಬಿಜೆಪಿ ಶಾಕ್ ನೀಡಿದೆ. ಎಲ್‌ಡಿಎಫ್ (ಕಮ್ಯೂನಿಸ್ಟ್) 29 ಸ್ಥಾನಕ್ಕೆ ಕುಸಿದರೆ, ಇತ್ತ ಯುಡಿಎಫ್ (ಕಾಂಗ್ರೆಸ್) 19 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇನ್ನು ಇತರರು 2 ಸ್ಥಾನ ಗೆದ್ದುಕೊಂಡಿದ್ದಾರೆ. ತಿರುವನಂತಪುರಂನಲ್ಲಿ 50 ಸ್ಥಾನ ಗೆದ್ದು ಅತೀ ದೊಡ್ಡ ಪಕ್ಷವಾಗಿರುವ ಎನ್‌ಡಿಎ ಇದೇ ಮೊದಲ ಬಾರಿಗೆ ಕೇರಳದಲ್ಲಿ ಅಧಿಕಾರಕ್ಕೇರುತ್ತಿದೆ.

ತಿರುವಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಕ್ಷೇತ್ರ

ತಿರುವನಂತಪುರಂ ಲೋಕಸಭೆ ಚುನಾವಣಯಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಇಲ್ಲಿ ಶಶಿ ತರೂರ್ ಸಂಸದರಾಗಿ ಆಯ್ಕೆಯಾಗಿದ್ದಾರೆ. ಎಲ್‌ಡಿಎಫ್ ಹಾಗೂ ಯುಡಿಎಫ್ ಭದ್ರಕೋಟೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭಾರಿ ಗೆಲುವು ಕಂಡಿದೆ.

ಪಾಲಕ್ಕಾಡ್, ತ್ರಿಪೂಣಿತರ ಮುನ್ಸಿಪಾಲಿಟಿ

ಪಾಲಕ್ಕಾಡ್ ಹಾಗೂ ತ್ರಿಪೂಣಿತರ ಮುನ್ಸಿಪಾಲಿಟಿಯಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಇನ್ನು ಹಲವೆಡೆ ಬಿಜೆಪಿ ಪ್ರಬಲ ಪೈಪೋಟಿ ನೀಡಿದೆ. ಈ ಮೂಲಕ 2026ರ ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ಸ್ಪಷ್ಟ ಸಂದೇಶ ನೀಡಿದೆ. ಇದುವರೆಗೆ ಎಲ್‌ಡಿಎಫ್ ಹಾಗೂ ಯುಡಿಎಫ್ ನಡುವೆ ನಡೆಯುತ್ತಿದ್ದ ಹೋರಾಟಕ್ಕೆ ಬಿಜೆಪಿ ಸೇರಿಕೊಂಡಿದೆ. ಮೂರನೇ ಪಕ್ಷವಾಗಿ ಎಂಟ್ರಿಕೊಟ್ಟಿರುವ ಎನ‌್‌ಡಿಎ ಇದೀಗ ಭರವಸೆಯ ಹಾಗೂ ಭಾರಿ ವೇಗದಲ್ಲಿ ಬೆಳೆಯುತ್ತಿರುವ ಪಾರ್ಟಿಯಾಗಿ ಗುರುತಿಸಿಕೊಂಡಿದೆ.

ಕೇರಳ ಸ್ಥಳೀಯ ಚುನಾವಣೆಯಲ್ಲಿ ಯುಡಿಎಫ್‌ ನಾಗಾಲೋಟ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಕೇರಳದಲ್ಲಿ ಅಧಿಕಾರದಲ್ಲಿದೆ. ಆದರೆ ಆಡಳಿತ ವಿರೋಧಿ ಅಲೆಯಿಂದ ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಎಲ್‌ಡಿಎಫ್ ನೆಲಕಚ್ಚಿದೆ. ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹುತೇಕ ಸ್ಥಾನದಲ್ಲಿ ಗೆಲುವು ಕಂಡಿದೆ. ಕೇರಳ 6 ಕಾರ್ಪೋರೇಶನ್, 14 ಜಿಲ್ಲಾ ಪಂಚಾಯತ್, 87 ಮುನ್ಸಿಪಾಲಿಟಿ, 152 ಬ್ಲಾಕ್ ಪಂಚಾಯತ್, 941 ಗ್ರಾಮಾ ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಡಿಸೆಂಬರ್ 9 ಹಾಗೂ 11ರಂದು ಎರಡು ಹಂತದಲ್ಲಿ ಮತದಾನ ನಡೆದಿತ್ತು. 6 ಕಾರ್ಪೋರೇಶನ್ ಪೈಕಿ ತಿರುವಂತಪುರಂ ಬಿಜೆಪಿ ಕೈಸೇರಿದರೆ, ಇನ್ನುಳಿದ ಕೊಲ್ಲಂ, ಕೊಚ್ಚಿ, ತಿಶೂರ್ ಹಾಗೂ ಕಣ್ಣೂರು ಒಟ್ಟು ನಾಲ್ಕು ಕಾರ್ಪೋರೇಶನ್ ಯುಡಿಎಫ್ ಗೆದ್ದುಕೊಂಡಿದೆ. ಕೇವಲ ಒಂದು ಕಾರ್ಪೋರೇಶನ್ ಎಲ್‌ಡಿಎಫ್ ಗೆದ್ದುಕೊಂಡಿದೆ. ಮುನ್ಸಿಪಾಲಿಟಿ ಚುನಾವಣೆಯಲ್ಲಿ 86ರಲ್ಲಿ 54 ಯುಡಿಎಫ್ (ಕಾಂಗ್ರೆಸ್) ಗೆದ್ದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ತಿರುವಂತಪುರಂ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ಕೇರಳದಲ್ಲಿ ಬಿಜೆಪಿ ದಿಟ್ಟ ಹೆಜ್ಜೆ ಇಟಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈಲು ಟಿಕೆಟ್ ಬುಕಿಂಗ್‌ನಿಂದ ಪ್ರಯಾಣ , ಹಿರಿಯ ನಾಗರೀಕರಿಗಿದೆ ಭರ್ಜರಿ ವಿನಾಯಿತಿ
ಕೇರಳದ ಮೊದಲ ಜೆನ್‌ಝಿ ಪೋಸ್ಟ್ ಆಫೀಸ್ ಆರಂಭ, ಟ್ರೆಂಡಿ ಕಚೇರಿಗೆ ಮನಸೋತ ಯುವ ಸಮೂಹ