New Rules For Foreign Arrivals : ಆರ್ ಟಿ ಪಿಸಿಆರ್ ಟೆಸ್ಟ್, ಕ್ವಾರಂಟೈನ್ ಇಲ್ಲ!

Suvarna News   | Asianet News
Published : Feb 10, 2022, 07:38 PM IST
New Rules For Foreign Arrivals : ಆರ್ ಟಿ ಪಿಸಿಆರ್ ಟೆಸ್ಟ್, ಕ್ವಾರಂಟೈನ್ ಇಲ್ಲ!

ಸಾರಾಂಶ

ಅಂತರರಾಷ್ಟ್ರೀಯ ಆಗಮನಕ್ಕಾಗಿ ಮಾರ್ಗಸೂಚಿ ಪರಿಷ್ಕರಿಸಿದ ಸರ್ಕಾರ ಸೋಮವಾರದಿಂದ ಹೊಸ ಮಾರ್ಗಸೂಚಿಗಳು ಜಾರಿ ಹೈ ರಿಸ್ಕ್ ವಿಭಾಗವನ್ನು ತೆಗೆದುಹಾಕಿದ ಕೇಂದ್ರ ಸರ್ಕಾರ

ನವದೆಹಲಿ (ಫೆ. 10): ಒಮಿಕ್ರಾನ್ (Omicron) ಕೋವಿಡ್ (Covid-19)ರೂಪಾಂತರದ ಪ್ರಕರಣವು ದೇಶದಲ್ಲಿ ಹೆಚ್ಚಾದಾಗ ಪರಿಚಯಿಸಲಾಗಿದ್ದ "ಹೈ ರಿಸ್ಕ್" (High Risk)ದೇಶಗಳ ವರ್ಗವನ್ನು ತೆಗೆದುಹಾಕುವ ಮೂಲಕ ಅಂತಾರಾಷ್ಟ್ರೀಯ ಪ್ರವಾಸಿಗರು (Foreign Arrival) ದೇಶಕ್ಕೆ ಬರುವ ಮಾರ್ಗಸೂಚಿಗಳಲ್ಲಿ (Guidelines) ಕೇಂದ್ರ ಸರ್ಕಾರ (Central Government) ಗುರುವಾರ ದೊಡ್ಡ ಮಟ್ಟದ ಪರಿಷ್ಕರಣೆ ಮಾಡಿದೆ. ಪ್ರಸ್ತುತ ಇರುವ ಏಳು ದಿನಗಳ ಹೋಮ್ ಕ್ವಾರಂಟೈನ್ (Quarantine ) ವಿರುದ್ಧ ರೋಗಲಕ್ಷಣಗಳಿಗೆ 14 ದಿನಗಳ ಸ್ವಯಂ-ಮೇಲ್ವಿಚಾರಣೆಯನ್ನು ಶಿಫಾರಸು ಮಾಡಿದೆ.

ಹೊಸ ಮಾರ್ಗಸೂಚಿಗಳು ಸೋಮವಾರದಿಂದ (ಫೆ. 14) ಜಾರಿಗೆ ಬರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.  "ನಿರಂತರವಾಗಿ ಬದಲಾಗುತ್ತಿರುವ" ಕೋವಿಡ್-19 ವೈರಸ್ ಅನ್ನು ಮೇಲ್ವಿಚಾರಣೆ ಮಾಡುವ ಅಗತ್ಯವಿದೆ ಎನ್ನುವುದನ್ನು ಒತ್ತಿ ಹೇಳಿದ ಸಚಿವಾಲಯ, ಆದರೆ "ಆರ್ಥಿಕ ಚಟುವಟಿಕೆಗಳನ್ನು ಅಡೆತಡೆಯಿಲ್ಲದ ರೀತಿಯಲ್ಲಿ ಮುಂದುವರಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯೂ ಇದೆ" ಎಂದು ತಿಳಿಸಿದೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ವಿದೇಶದಿಂದ ಬರುವ ಎಲ್ಲಾ ವ್ಯಕ್ತಿಗಳು ಕಳೆದ 14 ದಿನಗಳ ಪ್ರಯಾಣದ ಇತಿಹಾಸವನ್ನು ಒಳಗೊಂಡಂತೆ ಆನ್‌ಲೈನ್‌ನಲ್ಲಿ ಸ್ವಯಂ ಘೋಷಣೆ ಫಾರ್ಮ್ ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ಗಳು  ಏರ್ ಸುವಿಧಾ ವೆಬ್ ಪೋರ್ಟಲ್‌ನಲ್ಲಿ (Air Suvidha web portal) ಲಭ್ಯವಿರಲಿದೆ. ಅವರು ಪ್ರಯಾಣದ ದಿನಾಂಕದ 72 ಗಂಟೆಗಳ ಒಳಗೆ ನಡೆಸಿದ ನೆಗೆಟಿವ್ ಆರ್ ಟಿಪಿಸಿಆರ್ (negative RT-PCR ) ಪರೀಕ್ಷೆಯನ್ನು ಸಹ ಅಪ್‌ಲೋಡ್ ಮಾಡಬೇಕು. ಅದರೊಂದಿಗೆ ಅವರು ಎರಡೂ ಲಸಿಕೆ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ದೃಢೀಕರಿಸುವ ಪ್ರಮಾಣಪತ್ರವನ್ನು ಅಪ್‌ಲೋಡ್ ಮಾಡಬಹುದಾಗಿದೆ. ಈ ಆಯ್ಕೆಯು 72 ದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ ಮಾತ್ರ ಲಭ್ಯವಿರುತ್ತದೆ, ಅವರ ಲಸಿಕೆ ಕಾರ್ಯಕ್ರಮಗಳನ್ನು ಭಾರತ ಸರ್ಕಾರವು ಪರಸ್ಪರ ಕಾರ್ಯಕ್ರಮದ ಭಾಗವಾಗಿ ಗುರುತಿಸುತ್ತದೆ. ಕೆನಡಾ, ಹಾಂಗ್ ಕಾಂಗ್, ಅಮೆರಿಕ, ಇಂಗ್ಲೆಂಡ್, ಬಹರೇನ್, ಕತಾರ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಕೆಲವು ಯುರೋಪಿಯನ್ ರಾಷ್ಟ್ರಗಳು ಇದರಲ್ಲಿ ಸೇರಿವೆ.
 


" ಸ್ವಯಂ ಘೋಷಣಾ ನಮೂನೆಯಲ್ಲಿ ನೆಗೆಟಿವ್ ಆರ್ ಟಿಪಿಸಿಆರ್ ಪರೀಕ್ಷಾ ವರದಿ ಅಥವಾ ಕೋವಿಡ್ -19 ಲಸಿಕೆ ಪ್ರಮಾಣಪತ್ರವನ್ನು ಸೇರಿದಂತೆ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಪ್ರಯಾಣಿಕರಿಗೆ ಮಾತ್ರ ವಿಮಾನಯಾನ ಸಂಸ್ಥೆಗಳು (ನ) ಬೋರ್ಡಿಂಗ್ ಅನ್ನು ಅನುಮತಿಸುತ್ತವೆ" ಆರೋಗ್ಯ ಸಚಿವಾಲಯ ಹೇಳಿದೆ. ಲಕ್ಷಣರಹಿತ ಪ್ರಯಾಣಿಕರಿಗೆ ಮಾತ್ರವೇ ವಿಮಾನವೇರಲು ಅನುಮತಿಸಲಾಗುವುದು ಮತ್ತು ವಿಮಾನ ಹಾರಾಟದ ಸಮಯದಲ್ಲಿ ಫೇಸ್ ಮಾಸ್ಕ್‌ಗಳ ಬಳಕೆ ಮತ್ತು ಸಾಮಾಜಿಕ ಅಂತರವನ್ನು ಅಭ್ಯಾಸ ಮಾಡುವುದು ಸೇರಿದಂತೆ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕು.

Covid-19 Vaccine: ರಾಜ್ಯದಲ್ಲಿ ಕೋವ್ಯಾಕ್ಸಿನ್‌ ಲಸಿಕೆಯ ತೀವ್ರ ಅಭಾವ: ಮಕ್ಕಳಿಗೆ ಸಮಸ್ಯೆ
ವಿಮಾನ ನಿಲ್ದಾಣಕ್ಕೆ ಥರ್ಮಲ್ ಸ್ಕ್ರೀನಿಂಗ್ ಜೊತೆಗೆ, ರಾಂಡಮ್ ಆಗಿ ಆಯ್ಕೆ ಮಾಡಿದ ಪ್ರಯಾಣಿಕರಿಗೆ (ಪ್ರತಿ ವಿಮಾನಕ್ಕೆ ಶೇ.2ರಷ್ಟು) ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಕೇಳಲಾಗುತ್ತದೆ. ಪ್ರಯಾಣಿಕರನ್ನು ಏರ್ ಲೈನ್ ಸಂಸ್ಥೆಯೇ ಆಯ್ಕೆ ಮಾಡಲಿದ್ದು, ಇವರು ಭಿನ್ನ ದೇಶದ ಪ್ರಯಾಣಿಕರಾಗಿರುವಂತೆ ನೋಡಿಕೊಳ್ಳಲಾಗುತ್ತದೆ. ರೋಗಲಕ್ಷಣಗಳು ಕಂಡುಬರುವ ಪ್ರಯಾಣಿಕರನ್ನು ತಕ್ಷಣವೇ ನಿರ್ಭಂಧ ಮಾಡಿ ಪರೀಕ್ಷೆ ಮಾಡಲಾಗುತ್ತದೆ.  ಎಲ್ಲಾ ಇತರ ಪ್ರಯಾಣಿಕರು ಯಾವುದೇ ಕೋವಿಡ್ ರೋಗಲಕ್ಷಣಗಳಿಗೆ 14 ದಿನಗಳವರೆಗೆ ಸ್ವಯಂ-ಮೇಲ್ವಿಚಾರಣೆ ಮಾಡಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Covid Crisis: 71365 ಕೇಸ್‌, 1217 ಸಾವು, ಸಕ್ರಿಯ ಕೇಸಿನ ಸಂಖ್ಯೆ 8.9 ಲಕ್ಷಕ್ಕಿಳಿಕೆ
ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ಕಠಿಣ ಮಾರ್ಗಸೂಚಿಗಳನ್ನು ಅಂತಾರಾಷ್ಟ್ರೀಯ ಆಗಮನಕ್ಕಾಗಿ ಪ್ರಕಟಿಸಿತ್ತು. ಹಿಂದಿನ ಎಲ್ಲಾ ವೈರಸ್ ಗಿಂತ ಹೆಚ್ಚು ಸಾಂಕ್ರಾಮಿಕವಾಗಿದ್ದ ಒಮಿಕ್ರಾನ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು. ಈ ನಿಯಮಗಳ ಹೊರತಾಗಿಯೂ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದವು. ಕಳೆದ ಒಂದು ತಿಂಗಳಲ್ಲಿ ಪ್ರತಿನಿತ್ಯದ ಕೇಸ್ ಗಳು 3.5 ಲಕ್ಷದ ವರೆಗೂ ಮುಟ್ಟುತ್ತಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!