ಸೇನೆಗೆ ಮತ್ತಷ್ಟು ಬಲ: 97 ತೇಜಸ್‌ ಯುದ್ಧ ವಿಮಾನ, 156 ಪ್ರಚಂಡ ಹೆಲಿಕಾಪ್ಟರ್ ಖರೀದಿಗೆ ಸಮ್ಮತಿ

By Kannadaprabha NewsFirst Published Dec 1, 2023, 9:11 AM IST
Highlights

ನೆರೆಯ ಚೀನಾ ಮತ್ತು ಪಾಕಿಸ್ತಾನದಿಂದ ಸದಾ ಆತಂಕ ಎದುರಿಸುತ್ತಿರುವ ಮತ್ತು ಇಂಥ ಆತಂಕ ನಿವಾರಣೆಯ ಹೊಣೆ ಹೊತ್ತಿರುವ ಭಾರತೀಯ ಸೇನಾ ಪಡೆಗೆ ಮತ್ತಷ್ಟು ಬಲ ತುಂಬಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ನವದೆಹಲಿ: ನೆರೆಯ ಚೀನಾ ಮತ್ತು ಪಾಕಿಸ್ತಾನದಿಂದ ಸದಾ ಆತಂಕ ಎದುರಿಸುತ್ತಿರುವ ಮತ್ತು ಇಂಥ ಆತಂಕ ನಿವಾರಣೆಯ ಹೊಣೆ ಹೊತ್ತಿರುವ ಭಾರತೀಯ ಸೇನಾ ಪಡೆಗೆ ಮತ್ತಷ್ಟು ಬಲ ತುಂಬಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ದಿಸೆಯಲ್ಲಿ ಸೇನೆಗೆ 97 ತೇಜಸ್‌ ಯುದ್ಧವಿಮಾನ ಮತ್ತು 156 ಪ್ರಂಚಂಡ ಹೆಲಿಕಾಪ್ಟರ್‌ಗಳ ಖರೀದಿಗೆ ಕೇಂದ್ರ ಸರ್ಕಾರ ತನ್ನ ಅನುಮೋದನೆ ನೀಡಿದೆ. 2.23 ಲಕ್ಷ ಕೋಟಿ ರು. ವೆಚ್ಚ ಮಾಡಲಾಗುತ್ತಿದೆ.

ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ನಡೆದ ರಕ್ಷಣಾ ಖರೀದಿ ವ್ಯವಹಾರಗಳ ಮಂಡಳಿ ಸಭೆಯಲ್ಲಿ 2.23 ಲಕ್ಷ ಕೋಟಿ ರು. ವೆಚ್ಚದ ಖರೀದಿಗೆ ಯೋಜನೆಗೆ ಅನುಮೋದನೆ ನೀಡಲಾಗಿದೆ. 

Latest Videos

ಮದುವೆಗೆ ಬರಬೇಕಿದ್ದ ಮಗ, ಹೆಣವಾಗಿ ಬಂದ; ಸಂಭ್ರಮದ ಊರಲ್ಲಿ ಈಗ ಬರೀ ಸೂತಕ!

ಈ ಯೋಜನೆಗೆ ಮಾಡುತ್ತಿರುವ ವೆಚ್ಚದಲ್ಲಿ ಶೇ.98ರಷ್ಟು ವೆಚ್ಚವನ್ನು ದೇಶೀಯ ಉತ್ಪನ್ನದ ಮೇಲೆ ವೆಚ್ಚ ಮಾಡಲಾಗುತ್ತಿದೆ. ಇದು ಭಾರತದ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲವನ್ನು ತಂದುಕೊಡುವುದಲ್ಲದೇ, ಆತ್ಮ ನಿರ್ಭರ ಭಾರತ ಪರಿಕಲ್ಪನೆ ಸಾಕಾರವಾಗಲು ಸಹಾಯ ಒದಗಿಸಲಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಅಲ್ಲದೇ ಸುಖೋಯ್‌-30 ವಿಮಾನಗಳನ್ನು ಇನ್ನಷ್ಟು ಉನ್ನತೀಕರಿಸುವ ಪ್ರಸ್ತಾವನೆಗೂ ಸಹ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ನೇತೃತ್ವದ ರಕ್ಷಣಾ ಖರೀದಿ ಮಂಡಳಿ  ಕೌನ್ಸಿಲ್‌ ಒಪ್ಪಿಗೆ ಸೂಚಿಸಿದೆ. ಸುಖೋಯ್‌ ವಿಮಾನಗಳ ಖರೀದಿಗೆ 1.3 ಲಕ್ಷ ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ರಜೌರಿಯಲ್ಲಿ ಉಗ್ರರ ಜೊತೆ ಸೇನೆಯ ಎನ್‌ಕೌಂಟರ್,‌ ಮೇಜರ್‌ ಸೇರಿದಂತೆ 3 ಸೈನಿಕರು ಹುತಾತ್ಮ

click me!