ಪನ್ನೂನ್‌ ಹತ್ಯೆ ಮಾಡಿದರೆ ಗುಜರಾತ್‌ ಕೇಸಿಂದ ಮುಕ್ತಿ : ಆರೋಪಿಗೆ ಭಾರತದ ಆಮಿಷ: ಅಮೆರಿಕಾ ಆರೋಪ

By Kannadaprabha NewsFirst Published Dec 1, 2023, 8:46 AM IST
Highlights

ಸಿಖ್‌ ಪ್ರತ್ಯೇಕತಾವಾದಿ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಗೆ ಸಂಚು ರೂಪಿಸಿದ ಮೇರೆಗೆ ಅಮೆರಿಕದಲ್ಲಿ ದೋಷಾರೋಪಕ್ಕೆ ಒಳಗಾಗಿರುವ ಭಾರತೀಯ ನಾಗರಿಕ ನಿಖಿಲ್‌ ಗುಪ್ತಾ ಮೇಲೆ ಹಾಗೂ ಭಾರತ ಸರ್ಕಾರದ ಮೇಲೆ ಅಮೆರಿಕ ಸರ್ಕಾರಿ ವಕೀಲರು ಮತ್ತೊಂದು ಗಂಭೀರ ಆರೋಪ ಹೊರಿಸಿದ್ದಾರೆ

ಪಿಟಿಐ ನ್ಯೂಯಾರ್ಕ್‌: ಸಿಖ್‌ ಪ್ರತ್ಯೇಕತಾವಾದಿ, ಖಲಿಸ್ತಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನೂನ್‌ ಹತ್ಯೆಗೆ ಸಂಚು ರೂಪಿಸಿದ ಮೇರೆಗೆ ಅಮೆರಿಕದಲ್ಲಿ ದೋಷಾರೋಪಕ್ಕೆ ಒಳಗಾಗಿರುವ ಭಾರತೀಯ ನಾಗರಿಕ ನಿಖಿಲ್‌ ಗುಪ್ತಾ ಮೇಲೆ ಹಾಗೂ ಭಾರತ ಸರ್ಕಾರದ ಮೇಲೆ ಅಮೆರಿಕ ಸರ್ಕಾರಿ ವಕೀಲರು ಮತ್ತೊಂದು ಗಂಭೀರ ಆರೋಪ ಹೊರಿಸಿದ್ದಾರೆ. ‘ಭಾರತದ ಗುಜರಾತ್‌ನಲ್ಲೂ ಪ್ರಕರಣವೊಂದರಲ್ಲಿ ನಿಖಿಲ್‌ ಆರೋಪಿಯಾಗಿದ್ದ. ಪನ್ನೂನ್‌ ಹತ್ಯೆ ಮಾಡಿದರೆ, ಗುಜರಾತ್‌ನಲ್ಲಿನ ಕೇಸು ಕೈಬಿಡಲಾಗುತ್ತದೆ ಎಂದು ಆತನಿಗೆ ಭರವಸೆ ನೀಡಲಾಗಿತ್ತು’ ಎಂದು ಅಮೆರಿಕದ ವಕೀಲರು ಹೇಳಿದ್ದಾರೆ.

‘ಪನ್ನೂನ್‌ ಹತ್ಯೆಗೆ ಸಂಬಂಧಿಸಿದಂತೆ ದಿಲ್ಲಿಯಲ್ಲಿ ಭಾರತ ಸರ್ಕಾರದ ಅಧಿಕಾರಿಯೊಬ್ಬರನ್ನು 2023ರ ಮೇನಲ್ಲೇ ನಿಖಿಲ್‌ ಗುಪ್ತಾ ಭೇಟಿ ಮಾಡಿದ್ದ. ಈ ಅಧಿಕಾರಿಯು ಗುಪ್ತಾಗೆ, ‘ನೀನು ಪನ್ನೂನ್‌ ಅಮೆರಿಕದಲ್ಲಿ ಇದ್ದಾಗ ಹತ್ಯೆ ಮಾಡು. ಇದಕ್ಕೆ ಪ್ರತಿಯಾಗಿ ಗುಜರಾತ್‌ನಲ್ಲಿ ನಿನ್ನ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಕ್ಕೆ ಮುಕ್ತಿ ಕೊಡಿಸಲಾಗುವುದು ಎಂದಿದ್ದರು. ಬಳಿಕ ಈ ಬಗ್ಗೆ ಇಬ್ಬರ ನಡುವೆ ದೂರವಾಣಿ ಮಾತುಕತೆಗಳೂ ನಡೆದಿದ್ದವು. ಕ್ಯಾಲಿಫೋರ್ನಿಯಾ ಹಾಗೂ ನ್ಯೂಯಾರ್ಕ್‌ನಲ್ಲಿ ಟಾರ್ಗೆಟ್‌ ಮಾಡಬೇಕು ಎಂಬ ಮೆಸೇಜ್‌ಗಳೂ ಇಬ್ಬರ ನಡುವೆ ಹರಿದಾಡಿದ್ದವು’ ಎಂದು ದೋಷಾರೋಪದಲ್ಲಿ ದಾಖಲಿಸಲಾಗಿದೆ.

Latest Videos

ಖಲಿಸ್ತಾನಿ ಉಗ್ರನ ಹತ್ಯೆ: ಭಾರತಕ್ಕೇ ವಾರ್ನಿಂಗ್ ಕೊಡ್ತಾ ಅಮೆರಿಕಾ? ಭಾರತದ ಪ್ರತ್ಯುತ್ತರವೇನು?

‘ಇದಾದ ಬಳಿಕ ಗುಜರಾತ್‌ನ ನಿಮ್ಮ ಎಲ್ಲ ಕೇಸು ಕ್ಲಿಯರ್‌ ಆಗಿವೆ. ಇನ್ನಾರೂ ನಿಮಗೆ ಗುಜರಾತಿಂದ ತೊಂದರೆ ಕೊಡಲ್ಲ ಎಂದು ಭಾರತೀಯ ಅಧಿಕಾರಿ ಹೇಳಿದ್ದರು’ ಎಂದು ಅಮೆರಿಕ ಪ್ರಾಸಿಕ್ಯೂಷನ್‌ ಹೇಳಿದೆ.

ಅಮೆರಿಕದಲ್ಲಿ ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆ ಸಂಚು ವಿಫಲ: ವರದಿ

click me!