ಆತಂಕದ ನಡುವೆಯೂ ಸಿಹಿ ಸುದ್ದಿ : ಜೂ.1ರಿಂದಲೇ ಮುಂಗಾರು ಆರಂಭ

By Kannadaprabha NewsFirst Published May 7, 2021, 10:39 AM IST
Highlights

ಜೂ.1ರಿಂದಲೇ ಕೇರಳದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ‍್ಯದರ್ಶಿ ಎಂ.ರಾಜೀವನ್‌  ತಿಳಿಸಿದ್ದಾರೆ. ಆದರೆ ನೇ 15 ರಂದು ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. 

ನವದೆಹಲಿ (ಮೇ.07): ಕೊರೋನಾ ಆತಂಕದ ಮಧ್ಯೆಯೂ ರೈತರಿಗೆ ಸಿಹಿ ಸುದ್ದಿ ಇಲ್ಲಿದೆ. 

ಈ ವರ್ಷ ಜೂ.1ರಿಂದಲೇ ಕೇರಳದಲ್ಲಿ ಮುಂಗಾರು ಮಳೆ ಆರಂಭವಾಗಲಿದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ‍್ಯದರ್ಶಿ ಎಂ.ರಾಜೀವನ್‌ ಗುರುವಾರ ತಿಳಿಸಿದ್ದಾರೆ. 

ಜೊತೆಗೆ ಭಾರತೀಯ ಹವಾಮಾನ ಇಲಾಖೆಯು ಮುಂಗಾರಿನ ಬಗ್ಗೆ ಮೇ 15ರಂದು ಮತ್ತು ಮಳೆ ಪ್ರಮಾಣದ ಬಗ್ಗೆ ಮೇ 31ರ ವೇಳೆಗೆ ಅಧಿಕೃತ ವರದಿ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ. 

ಸೈಕ್ಲೋನ್ ಸರ್ಕ್ಯುಲೇಷನ್: ಮುಂದಿನ ಕೆಲವು ದಿನ ಮಳೆ ...

ಮುಂಗಾರು ಮಾರುತಗಳು ದೇಶದ ಒಟ್ಟು ಮಳೆಯಲ್ಲಿ ಶೇ.75ರಷ್ಟುಪಾಲು ಹೊಂದಿವೆ. ದೇಶದ ಆರ್ಥಿಕತೆ ಬಹುಪಾಲು ಮುಂಗಾರನ್ನೇ ಅವಲಂಬಿಸಿದೆ.

ಈ ವರ್ಷವೂ ಸಾಮಾನ್ಯ ಮುಂಗಾರು: ಸ್ಕೈಮೆಟ್‌!

ಈಗಾಗಲೇ ಕರ್ನಾಟಕದಲ್ಲಿ ಮಳೆ ಆರಂಭವಾಗಿದೆ. ಅಲ್ಲಲ್ಲಿ ಮಳೆಯಾಗುತ್ತಲೇ ಇದ್ದು ಬಿಸಿಲ ಜಳಕ್ಕೆ ತಂಪೆರೆಯುತ್ತಿದ್ದು, ಇದೀಗ ಜೂನ್ ಆರಂಭದಲ್ಲಿಯೇ ಮುಂಗಾರು ಕೇರಳದಲ್ಲಿ ಆರಂಭವಾಗಲಿದ್ದು, ಬಳಿಕ ಕರ್ನಾಟಕ ಪ್ರವೇಶಿಸಲಿದೆ. 

click me!