ಟಿಫಿನ್ ಬಾಕ್ಸ್‌ನಲ್ಲಿ ಚಿನ್ನದ ಬಳೆ: ಸೋಂಕಿತರಾಗಿದ್ದಾಗ ಊಟ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದು ಹೀಗೆ

By Suvarna News  |  First Published May 7, 2021, 9:58 AM IST

ಕೊರೋನಾ ನಮ್ಮ ಸುತ್ತ ಎಷ್ಟೊಂದು ವಿಚಾರಗಳನ್ನು ಬದಲಿಸಿದೆ ಅಲ್ವಾ ? ಮನುಷ್ಯ, ಮನಸ್ಸು, ಮೋಹ, ಆಸಕ್ತಿ ಬಹಳಷ್ಟು ವಿಚಾರಗಳು ಕೊರೋನಾದ ಈ ಸಂಕಷ್ಟದ ಸ್ಥಿತಿಯಲ್ಲಿ ಬದಲಾಗಿದೆ. ಸೋಂಕಿತಳಾಗಿ ಹಾಸಿಗೆ ಹಿಡಿದಾಗ ತುತ್ತು ಅನ್ನ ಕೊಟ್ಟವರಿಗೆ ಈ ವ್ಯಕ್ತಿ ಥ್ಯಾಂಕ್ಸ್ ಹೇಳಿದ್ದು ಹೇಗೆ ನೋಡಿ..! ಒಂದೊಳ್ಳೆ ಚಿಂತನೆ ಅಲ್ಲವೇ ಇದು ?


ಮುಂಬೈ(ಮೇ.07): ಕೊರೋನಾ ಬಂದ ನಂತರ ಜನ ಬಹಳಷ್ಟು ಬದಲಾಗಿದ್ದಾರೆ. ತಮ್ಮ ಆಪ್ತರ ಸಾವು, ನೋವು, ನರಳಾಟ ನೋಡಿ, ಸ್ವತಃ ಸೋಂಕಿತರಾಗಿ ಅದರಿಂದ ಹೊರಬಂದು ಇತರರಿಗೆ ನೆರವಾಗುವವರೂ ಇದ್ದಾರೆ.

ಕೊರೋನಾ ಬಂದು ಬಹಳಷ್ಟನ್ನು ಬದಲಾಯಿಸಿದೆ. ಮನುಷ್ಯ ಸಂಬಂಧ, ಕಾಳಜಿ, ಪ್ರೀತಿ ಇವುಗಳ ಮಹತ್ವವನ್ನು ತಿಳಿಸಿದೆ. ಆಪತ್ತಿಗೆ ಹಣ, ಅಂತಸ್ತು ಏನಿದ್ದರೂ ಇಷ್ಟೇ ಎಂಬುದನ್ನು ತೋರಿಸಿಕೊಟ್ಟಿದೆ. ಇದು ಕೊರೋನಾದ ಇನ್ನೊಂದು ಮುಖ.

Tap to resize

Latest Videos

ಕೊರೋನಾ ಯಾರಿಗೂ ಬೇಧ ಮಾಡಿಲ್ಲ, ಧನಿಕ, ಬಡವ, ಅಧಿಕಾರಿ, ಕೆಲಸಗಾರ ಎಲ್ಲರಿಗೂ ಈ ರೋಗ ಒಂದೇ. ಈ ವೈರಸ್ ನೋವು ಎಲ್ಲರಿಗೂ ಒಂದೇ ಆಗಿರೋದ್ರಿಂದಲೇ ಜನ ಇದರಿಂದ ಬಹಳಷ್ಟು ಕಲಿತಿದ್ದಾರೆ.

ಫ್ರಂಟ್‌ಲೈನ್ ಕಾರ್ಯಕರ್ತರ ನೆರವಿಗೆ ಬಂದ ಇಶಾ..! ಆಹಾರ, ಪಾನೀಯ ಪೋರೈಕೆ

ಕೊರೋನಾ ಸಂದರ್ಭ ಉಚಿತವಾಗಿ ಊಟ ಕಳುಹಿಸಿದ ಎನ್‌ಜಿಒ ಒಂದಕ್ಕೆ ವ್ಯಕ್ತಿಯೊಬ್ಬರು ಧನ್ಯವಾದ ಹೇಳಿದ ರೀತಿ ಸುಂದರವಾಗಿದೆ. ದಹಿಸಾರ್ ಮೂಲದ ಸಮಸ್ತ ಮಹಾಜನ್ ಆಸುಪಾಸಿನ ಜನರಿಗೆ ಕೊರೋನಾ ಸೋಂಕಿತರಿಗೆ ಉಚಿತವಾಗಿ ಆಹಾರ ಒದಗಿಸಿತ್ತು.

ಹಲವು ಬಾರಿ ಈ ಎನ್‌ಜಿಒದಿಂದ ನೆರವು ಪಡೆದ ಕೊರೋನಾ ರೋಗಿಯೊಬ್ಬರು ತಮ್ಮ ಲಂಚ್‌ಬಾಕ್ಸ್‌ ಮರಳಿಸೋವಾಗ ಥ್ಯಾಂಕ್ಸ್ ಹೇಳಿದ್ದಾರೆ. ತಮಗೆ ನೆರವಾಗಿದ್ದಕ್ಕೆ ಅಭಿನಂದನಾ ರೀತಿಯಲ್ಲಿ ವ್ಯಕ್ತಿ ಎರಡು ಚಿನ್ನದ ಬಳೆಗಳನ್ನು ಬಾಕ್ಸ್‌ನಲ್ಲಿಟ್ಟು ಕಳುಹಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!