ಕಾಶ್ಮೀರ ಹಿಂದುಗಳ ಸರಣಿ ಹತ್ಯೆ,ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ್ತ ಮಟ್ಟದ ಭದ್ರತಾ ಸಭೆ!

By Suvarna News  |  First Published Jun 3, 2022, 4:40 PM IST
  • ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರೀಕರ ಗುರಿಯಾಗಿಸಿ ಉಗ್ರರ ದಾಳಿ
  • ಹಿಂದೂಗಳ ಹತ್ಯೆ ಖಂಡಿಸಿ ಕಣಿವೆ ರಾಜ್ಯದಲ್ಲಿ ಪ್ರತಿಭಟನೆ
  • ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ದಾಳಿ

ನವದೆಹಲಿ(ಜೂ.03): ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಹಿಂದೂಗಳ ಗುರಿಯಾಗಿಸಿ ದಾಳಿ ನಡೆಯುತ್ತಿದೆ. ಒಂದು ತಿಂಗಳಲ್ಲಿ ಬರೋಬ್ಬರಿ 9 ಮಂದಿಯ ಹತ್ಯೆಯಾಗಿದೆ. ಕಣಿವೆ ರಾಜ್ಯದಲ್ಲಿ ನಾಗರೀಕರ ಭದ್ರತೆ ಹೆಚ್ಚಿಸಲು ಇಂದು ಕೇಂದ್ರ  ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ಜೂನ್ 2ಕ್ಕೆ ಮೊದಲ ಸಭೆ ನಡೆಸಿದ ಅಮಿತ್ ಶಾ ಇಂದು ಎರಡನೆ ಸಭೆಯಾಗಿದೆ.

ದೆಹಲಿಯಲ್ಲಿ ನಡೆದ  ಈ ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದಿಲ್‌ಬಾಗ್ ಸಿಂಗ್, ಗುಪ್ತಚರ ಇಲಾಖೆ ಮುಖ್ಯಸ್ಥ, ರಾ ಮುಖ್ಯಸ್ಥ ಸಮಂತ್‌ ಗೋಯಲ್‌  ಸೇರಿದಂತೆ ಕೆಲ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

Tap to resize

Latest Videos

ಕಣಿವೆಯಲ್ಲಿ ಮತ್ತೆ ಹರಿದ ನೆತ್ತರು, ಬ್ಯಾಂಕ್‌ಗೆ ನುಗ್ಗಿ ಮ್ಯಾನೇಜರ್ ಹತ್ಯೆಗೈದ ಉಗ್ರರು!

ಜಮ್ಮು ಕಾಶ್ಮೀರದಲ್ಲಿ ನಾಗರೀಕರ ಗುರಿಯಾಗಿಸಿ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ದಾಳಿಗೆ ಅಮಿತ್ ಶಾ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಗುರಿಯಾಸಿ ನಡೆಯುತ್ತಿರುವ ದಾಳಿಯನ್ನು ಹತ್ತಿಕ್ಕಲು ಅಮಿತ್ ಶಾ ಕಟ್ಟು ನಿಟ್ಟಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗುರವಾರ(ಜೂ.02) ರಂದು ಜಮ್ಮು ಮತ್ತು ಕಾಶ್ಮೀರ ಗವರ್ನರ್ ಮನೋಜ್ ಸಿನ್ಹ ಜೊತೆ ಸಭೆ ನಡೆಸಿದ ಅಮಿತ್ ಶಾ, ದಾಳಿ ಮಾಹಿತಿಗಳನ್ನು ಪಡೆದಿದ್ದರು. ಈ ವೇಳೆ ಉಗ್ರರ ದಾಳಿ ಹತ್ತಿಕ್ಕಲು ಸ್ಪಷ್ಟ ಸೂಚನೆ ನೀಡಿದ್ದರು. ಕುಲ್ಗಾಂನಲ್ಲಿ ಹಿಂದೂ ಧರ್ಮೀಯ ಬ್ಯಾಂಕ್‌ ಮ್ಯಾನೇಜರ್‌ ಹತ್ಯೆಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಜೊತೆ ಸುದೀರ್ಘ ತುರ್ತು ಸಭೆ ನಡೆಸಿ ಕಣಿವೆಯಲ್ಲಿನ ‘ಟಾರ್ಗೆಟೆಡ್‌ ಕಿಲ್ಲಿಂಗ್‌’ಗಳ ಬಗ್ಗೆ ಮಾಹಿತಿ ಪಡೆದಿದ್ದರು. ನಂತರ ಕಾಶ್ಮೀರದಲ್ಲಿ ಹಿಂದುಗಳ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದ್ದರು. ಇದರ ಮುಂದುವರಿದ ಭಾಗವಾಗಿ ಇಂದು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. 

 ನಿನ್ನೆ(ಜೂ03) 1 ತಾಸಿಗೂ ಹೆಚ್ಚು ಕಾಲ ಸಭೆ ನಡೆಸಿದ ಅಮಿತ್‌ ಶಾ, ಉಗ್ರ ಚಟುವಟಿಕೆಗಳನ್ನು ತಡೆಗಟ್ಟಲು ಶೋಧ ಕಾರ್ಯಾಚರಣೆಗಳನ್ನು ಕಟ್ಟುನಿಟ್ಟಾಗಿ ನಡೆಸುವಂತೆ ಸೂಚಿಸಿದ್ದರು. ಸಭೆಯಲ್ಲಿ ರಾ ಮುಖ್ಯಸ್ಥ ಸಮಂತ್‌ ಗೋಯಲ್‌ ಸಹ ಹಾಜರಿದ್ದರು.

ಉಗ್ರರ ಅಟ್ಟಹಾಸ, ಶಿಕ್ಷಕಿಯ ಹತ್ಯೆ ಬಳಿಕ ಕಣಿವೆ ತೊರೆದ 100ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು!

ಒಂದು ತಿಂಗಳಲ್ಲಿ 9 ಮಂದಿಯ ಹತ್ಯೆ
ಜಮ್ಮು-ಕಾಶ್ಮೀರದಲ್ಲಿ ಕಳೆದೊಂದು ತಿಂಗಳಿನಿಂದ ನಡೆಯುತ್ತಿರುವ ‘ಹಿಂದುಗಳನ್ನು ಗುರುತಿಸಿ ಹತ್ಯೆಗೈಯುವ’ ಹೇಯ ಕೃತ್ಯ ಮತ್ತೆ ಮುಂದುವರೆದಿದ್ದು, ಗುರುವಾರ ಬೆಳಿಗ್ಗೆ ಕುಲ್ಗಾಂ ಜಿಲ್ಲೆಯ ಬ್ಯಾಂಕೊಂದರಲ್ಲಿ ಮ್ಯಾನೇಜರ್‌ವೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅಲ್ಲದೆ, ಬದ್ಗಾಂನಲ್ಲಿ ಬಿಹಾರ ಮೂಲದ ಹಿಂದೂ ಧರ್ಮೀಯ ಇಟ್ಟಿಗೆ ಭಟ್ಟಿಕಾರ್ಮಿಕನನ್ನು ಹತ್ಯೆ ಮಾಡಲಾಗಿದೆ. ಇದರೊಂದಿಗೆ ಮೇ 1ರ ನಂತರ ಕಣಿವೆಯಲ್ಲಿ 9 ಹಿಂದೂಗಳನ್ನು ಹತ್ಯೆ ಮಾಡಿದಂತಾಗಿದೆ.

ಮ್ಯಾನೇಜರ್‌ ಹತ್ಯೆಯ ಹೊಣೆಯನ್ನು ಲಷ್ಕರ್‌ ಎ ತೊಯ್ಬಾ ಉಗ್ರ ಸಂಘಟನೆಯ ಸೋದರ ಸಂಘಟನೆಯಾದ ‘ದ ರೆಸಿಸ್ಟನ್ಸ್‌ ಫ್ರಂಟ್‌’ ಹೊತ್ತುಕೊಂಡಿದೆ. ಘಟನೆಗೆ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತವಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಜೊತೆ ದೆಹಲಿಯಲ್ಲಿ ತುರ್ತು ಸಭೆ ನಡೆಸಿ ಕಾಶ್ಮೀರದ ಪರಿಸ್ಥಿತಿಯನ್ನು ಅವಲೋಕಿಸಿ, ಹಿಂದೂಗಳ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ. ಈ ಕುರಿತು ಚರ್ಚಿಸಲು ಶುಕ್ರವಾರ ಕಾಶ್ಮೀರ ಉಪರಾಜ್ಯಪಾಲರ ಜತೆ ಸಭೆಯನ್ನೂ ಶಾ ಆಯೋಜಿಸಿದ್ದಾರೆ. ಮತ್ತೊಂದೆಡೆ, ಕಾಶ್ಮೀರದಲ್ಲಿ ಶಾಂತಿ ಸ್ಥಾಪಿಸುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಹಳಿತಪ್ಪಿಸಲೆಂದು ಪಾಕಿಸ್ತಾನ ಇಂತಹ ಕೃತ್ಯಗಳನ್ನು ಎಸಗುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಗುರುವಾರದ ಹತ್ಯೆಯ ಬೆನ್ನಲ್ಲೇ ಜಮ್ಮುವಿನಲ್ಲಿ ಸರ್ಕಾರಿ ನೌಕರರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ತಮ್ಮನ್ನು ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಮಾಡುವಂತೆ ಆಗ್ರಹಿಸಿದ್ದಾರೆ.
 

click me!