ರಾಹುಲ್‌ ಗಾಂಧಿ ಇದೇ ಥರ ಮಾತನಾಡ್ತಿದ್ರೆ ರಸ್ತೆಯಲ್ಲಿ ನಡೆದಾಡೋದು ಕಷ್ಟವಾಗುತ್ತೆ!

By Santosh NaikFirst Published Mar 25, 2023, 6:08 PM IST
Highlights

ರಾಹುಲ್‌ ಗಾಂಧಿ ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ, ಅವರಿಗೆ ರಸ್ತೆಯಲ್ಲಿ ನಡೆದಾಡೋದು ಕೂಡ ಕಷ್ಟವಾಗಲಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಎಚ್ಚರಿಸಿದ್ದಾರೆ.
 

ಮುಂಬೈ (ಮಾ.25): ಕಾಂಗ್ರೆಸ್‌ ನಾಯಕ ಹಾಗೂ ವಯನಾಡ್‌ ಮಾಜಿ ಸಂಸದ ರಾಹುಲ್‌ ಗಾಂಧಿ ದೇಶದ ಪ್ರಧಾನಿ ನರೇಂದ್ರ ಮೋದಿ, ಒಬಿಸಿ ಸಮುದಾಯ ಹಾಗೂ ಹಿಂದುತ್ವದ ದ್ಯೋತಕವಾಗಿರುವ ವಿಡಿ ಸಾವರ್ಕರ್‌ ಅವರನ್ನು ಅವಮಾನಿಸಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಆಗ್ರಹಿಸಿದ್ದಾರೆ. ರಾಹುಲ್‌ ಗಾಂಧಿ ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ, ಮುಂದೊಂದು ದಿನ ಅವರು ರಸ್ತೆಯಲ್ಲಿ ನಡೆದಾಡೋದು ಕೂಡ ಕಷ್ಟವಾಗಲಿದೆ ಎಂದು ಎಚ್ಚರಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರತಿಪಕ್ಷ ಪ್ರಾಯೋಜಿತ ಲಾಸ್ಟ್‌ ವೀಕ್‌ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ, ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ಕಾನೂನನ್ನು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೆ ತಂದಿತ್ತು. ಮೋದಿ ಸರ್ಕಾರ ಅದನ್ನು ಅಳವಡಿಸಿಕೊಂಡಿದೆ ಎಂದು ಮಾಹಿತಿ ನೀಡಿದರು. ಈಗ ಅದೇ ಕಾನೂನಿಗೆ ಅವರು ಬಲಿಯಾದರೆ, ಯಾರೇನು ಮಾಡೋಕೆ ಅಗುತ್ತೆ ಎನ್ನುವ ಅರ್ಥದಲ್ಲಿ ಪ್ರಶ್ನೆ ಮಾಡಿದ್ದಾರೆ. 'ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿಯನ್ನು ಟೀಕಿಸಿದ್ದು ಮಾತ್ರವಲ್ಲದೆ ಇಡೀ ಒಬಿಸಿ ಸಮುದಾಯಕ್ಕೆ ಮಾನಹಾನಿ ಮಾಡಿದ್ದಾರೆ. ಅವರು ಅದೇ ರಿತಿಯಲ್ಲಿ ಮಾತನಾಡುವುದನ್ನು ಮುಂದುವರಿಸುತ್ತಿದ್ದಾರೆ. ಹೀಗೆಯೇ ಮುಂದುವರಿದರೆ ಅವರಿಗೆ ರಸ್ತೆಯಲ್ಲಿ ನಡೆಯುವುದು ಕೂಡ ಕಷ್ಟವಾಗಲಿದೆ ಎಂದು ನಾನು ಹೇಳಲು ಬಯಸುತ್ತೇನೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿಧಾನಸಭೆಯಲ್ಲಿ ಹೇಳಿದ್ದಾರೆ.

'ಸಾವರ್ಕರ್ ಮಹಾರಾಷ್ಟ್ರದ ಆರಾಧ್ಯದೈವ ಮಾತ್ರವಲ್ಲ ಇಡೀ ದೇಶಕ್ಕೆ ಆರಾಧ್ಯ ದೈವ. ಅವರ ಬಗ್ಗೆಯೂ ರಾಹುಲ್ ಗಾಂಧಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಅವರ ಈ ಕಾರ್ಯಕ್ಕೆ ಅವರ ವಿರುದ್ಧ ಯಾವುದೇ ಟೀಕೆ ಕೂಡ ಕಡಿಮೆಯೇ ಇಂದು ಕೂಡ ಕ್ಷಮೆ ಕೇಳುವ ಕುರಿತಾಗಿ ಪ್ರಶ್ನೆ ಬಂದಾಗ, ನಾನು ಸಾವರ್ಕರ್ ಅಲ್ಲ ಎನ್ನುತ್ತಾರೆ. ಹಾಗಿದ್ದರೆ .ಸಾವರ್ಕರ್ ಬಗ್ಗೆ ಅವರ ಅಭಿಪ್ರಾಯವೇನು? ಇದಕ್ಕಾಗಿ ಅವರಿಗೆ ಶಿಕ್ಷೆಯಾಗಬೇಕು' ಎಂದು ಹೇಳಿದ್ದಾರೆ.

ಸ್ವತಃ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮಾಡಿದ್ದ ಕಾನೂನಿನ ಮೂಲಕ ರಾಹುಲ್ ಗಾಂಧಿ ಅವರನ್ನು ಅಮಾನತು ಮಾಡಲಾಗಿದೆ. ಲಾಲೂ ಪ್ರಸಾದ್‌ ಯಾದವ್‌ ಸೇರಿದಂತೆ ಇತರರನ್ನು ಈ ಕಾನೂನಿನ ಅಡಿಯಲ್ಲಿ ಅನರ್ಹ ಮಾಡಲಾಗುತ್ತು. ಅಗ ಇವರು ಹೇಳಿದ ರೀತಿ ಪ್ರಜಾಪ್ರಭುತ್ವದ ಕೊಲೆ ಆಗಿರಲಿಲ್ಲ. ಆಗ ಪ್ರಜಾಪ್ರಭುತ್ವ ಅಪಾಯದಲ್ಲಿ ಸಿಲುಕಿರಲಿಲ್ಲವೇ? ಎಂದು ಮಹಾ ಸಿಎಂ ಪ್ರಶ್ನೆ ಮಾಡಿದ್ದಾರೆ.

PM Modi In Karnataka: ಕಾರ್ಯಕರ್ತರಿಗೆ ಗೌರವ ನೀಡದವರು ಜನರಿಗೆ ಗೌರವ ನೀಡ್ತಾರಾ? ಮೋದಿ ಪ್ರಶ್ನೆ

2019 ರ "ಮೋದಿ ಸರ್‌ನೇಮ್‌" ಹೇಳಿಕೆಯ ಕುರಿತು ಕ್ರಿಮಿನಲ್ ಮಾನಹಾನಿ ಕೇಸ್‌ ಅನ್ನು ರಾಹುಲ್‌ ಗಾಂಧಿ ಎದುರಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಸೂರತ್ ನ್ಯಾಯಾಲಯವು ಗುರುವಾರ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಬಳಿಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹ ಮಾಡಲಾಗಿತ್ತು. ರಾಹುಲ್‌ಗೆ ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಬೇಕಾದ ಕಾರಣ 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತುಗೊಳಿಸಲಾಗಿದೆ.

ನಾನು ಸಾವರ್ಕರ್‌ ಅಲ್ಲ, ಗಾಂಧಿ, ಗಾಂಧಿ ಯಾರಿಗೂ ಕ್ಷಮೆ ಕೇಳಲ್ಲ!

ಕೆಲವು ದಿನಗಳ ಹಿಂದೆ ಮಹಾರಾಷ್ಟ್ರ ವಿಧಾನಸೌಧದ ಸಂಕೀರ್ಣದ ಮೆಟ್ಟಿಲುಗಳ ಮೇಲೆ ರಾಹುಲ್ ಗಾಂಧಿ ಅವರ ಪೋಸ್ಟರ್ ಅನ್ನು ಚಪ್ಪಲಿಯಿಂದ ಹೊಡೆದ ಆಡಳಿತಾರೂಢ ಮೈತ್ರಿಕೂಟದ ಕೆಲವು ಶಾಸಕರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಕ್ಕಾಗಿ ಶಿವಸೇನೆ (ಯುಬಿಟಿ), ಎನ್‌ಸಿಪಿ ಮತ್ತು ಕಾಂಗ್ರೆಸ್ ಒಳಗೊಂಡಿರುವ ಪ್ರತಿಪಕ್ಷಗಳನ್ನು ಶಿಂಧೆ ತರಾಟೆಗೆ ತೆಗೆದುಕೊಂಡರು. . ‘ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಪ್ರತಿಪಕ್ಷಗಳು ಕೇಳಲು ಇಷ್ಟಪಡುತ್ತಿಲ್ಲ. ಅದಕ್ಕಾಗಿ ಅವರ ಸದಸ್ಯರು ಸದನದಿಂದ ಓಡಿಹೋಗುತ್ತಿದ್ದಾರೆ' ಎಂದು ಪ್ರತಿಪಕ್ಷಗಳ ಸದಸ್ಯರ ಸಭಾತ್ಯಾಗದ ಕುರಿತಾಗಿ ಶಿಂಧೆ ಪ್ರತಿಕ್ರಿಯೆ ನೀಡಿದ್ದಾರೆ.

click me!