PM Modi Rally ಉಗ್ರರ ಮೇಲಿನ ಕೇಸ್ ವಾಪಸ್ ಪಡೆಯಲು ಯತ್ನಿಸಿದ ಪಕ್ಷ SP, ಉನ್ನಾವೋದಲ್ಲಿ ಮೋದಿ ವಾಗ್ದಾಳಿ!

By Suvarna NewsFirst Published Feb 20, 2022, 8:27 PM IST
Highlights
  • ಉಗ್ರರ ಬಗ್ಗೆ ಸಹಾನುಭೂತಿ ಹೊಂದಿದೆ ಸಮಾಜವಾದಿ ಪಕ್ಷ
  • ಅಹಮದಾಬಾದ್ ಸ್ಫೋಟದ ಕುರಿತು ಈ ಪಕ್ಷಗಳ ಹೇಳಿಕೆ ಸ್ಪಷ್ಟ
  • ಅಮಾಯಕ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಆರೋಪಿಸಿದ್ದರು
  • ಉನ್ನಾವೋ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಉನ್ನಾವೋ(ಫೆ.20): ಉಗ್ರರ(Terror) ಮೇಲಿನ ಕೇಸ್ ಹಿಂಪಡೆಯಲು ಹಿಂದಿನ ಸಮಾಜವಾದಿ ಪಕ್ಷ(samajwadi party) ಯತ್ನಿಸಿತ್ತು. ಅಹಮದಾಬಾದ್ ಸ್ಫೋಟದ(ahmedabad bomb blast) ಆರೋಪಿಗಳ ಕುರಿತು ಸಹಾನಭೂತಿ ಹೊಂದಿದ್ದ ಎಸ್‌ಪಿ, ಅಮಾಯಕರನ್ನು ಬಂಧಿಸಲಾಗಿದೆ ಎಂದಿತ್ತು. ಇದೀಗ ವಿಶೇಷ ನ್ಯಾಯಾಲಯ 49 ಮಂದಿಗೆ ಶಿಕ್ಷೆ ಪ್ರಕಟಿಸಿದೆ ಎಂದು ಪ್ರದಾನಿ ನರೇಂದ್ರ ಮೋದಿ(PM Narendra Modi) ಹೇಳಿದ್ದಾರೆ. 

ಉತ್ತರ ಪ್ರದೇಶ ಚುನಾವಣೆ ರ‍್ಯಾಲಿಯಲ್ಲಿ(Uttar pradesh Election Rally) ಪ್ರಧಾನಿ ನರೇಂದ್ರ ಮೋದಿ, ಸಮಾಜವಾದಿ, ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಸಮಾಜವಾದಿ ಪಕ್ಷ ಉಗ್ರರ ಮೇಲೆ ಸಹಾನಭೂತಿ ಹೊಂದಿದ್ದರೆ, ಬಿಜೆಪಿ ಸ್ಫೋಟದ ಹಿಂದಿನ ರೂವಾರಿಗಳಿಗೆ ತಕ್ಷ ಶಿಕ್ಷೆ ನೀಡಲು ಎಲ್ಲಾ ಪ್ರಯತ್ನ ನಡೆಸಿತು ಎಂದು ಮೋದಿ ಹೇಳಿದ್ದಾರೆ.

Latest Videos

Ahmedabad Bomb Blast ಸರಣಿ ಬಾಂಬ್ ಸ್ಫೋಟದ ಹಿಂದೆ ಮೋದಿ ಹತ್ಯೆ ಸಂಚು, ತೀರ್ಪಿನಲ್ಲಿ ಪ್ರಸ್ತಾಪ!

2008ರಲ್ಲಿ ನಡೆದ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ನಡೆದಾಗ ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆ ಘಟನೆ ತೀವ್ರ ನೋವುಂಟು ಮಾಡಿತ್ತು. ಎಲ್ಲೆಡೆ ರಕ್ತಗಳು ಚೆಲ್ಲಿತ್ತು. ಆಸ್ಪತ್ರೆಯಲ್ಲಿ ಹಲವು ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಂತ್ರಸ್ತರನ್ನು, ಕುಟುಂಬದರವನ್ನು ಭೇಟಿಯಾದಾಗ ದುಃಖ ಉಮ್ಮಳಿಸಿ ಬಂದಿತ್ತು. ಅಂದೆ ನಾನು ಈ ಘಟನೆಗೆ ಕಾರಣರಾದ ಉಗ್ರರಿಗೆ ತಕ್ಷ ಶಿಕ್ಷೆ ನೀಡಲೇಬೇಕು ಎಂದು ಶಪಥ ಮಾಡಿದ್ದೆ. ಇದೀಗ ಸಾಕಾರಗೊಂಡಿದೆ. ನ್ಯಾಯಾಲಯ ಅಹಮ್ಮದಾಬಾದ್ ಸ್ಫೋಟದ 49 ಮಂದಿಗೆ ಶಿಕ್ಷೆ ಪ್ರಕಟಿಸಿದೆ ಎಂದು ಮೋದಿ ರ್ಯಾಲಿಯಲ್ಲಿ ಹೇಳಿದ್ದಾರೆ.

ಈ ಘಟನೆ ಕುರಿತು ಕಳೆದ ಹಲವು ವರ್ಷಗಳಿಂದ ನಾನು ಮೌನವಾಗಿದ್ದೆ. ಮಡುಗಟ್ಟಿದ ನೋವು ಹಾಗೇ ಉಳಿದಿತ್ತು. ಆದರೆ ನ್ಯಾಯಾಲಯದ ತೀರ್ಪು ಸಮಾಧಾನ ತಂದಿದೆ.  ಹರ್ದೋಯಿ ಹಾಗೂ ಉನ್ನಾವೋ ಬಿಜೆಪಿ ಚುನಾವಣಾ  ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಷಣ ಕೇಳಲು ಜನಸಾಗರವೇ ಹರಿದುಬಂದಿತ್ತು. 

Punjab Election : ಕಾಂಗ್ರೆಸ್ ನ ಪಾಪದಿಂದಾಗಿ ಇಂದು ಕರ್ತಾರ್ ಪುರ ಪಾಕಿಸ್ತಾನದ ಭಾಗವಾಗಿದೆ ಎಂದ ಪ್ರಧಾನಿ ಮೋದಿ!

ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ರ್ಯಾಲಿ ಸ್ಥಳಕ್ಕೆ ಆಗಮಿಸಿದಾಗ ಮೋದಿ ನೋಡಲು ಜನಸ್ತೋಮವೇ ಹರಿದುಬಂದಿತ್ತು. ಮೋದಿ ಮೋದಿ ಎಂಬ ಘೋಷಣೆಗಳು ಮೊಳಗಿತ್ತು. ಮೋದಿಯನ್ನು ನೋಡು ಕಟ್ಟಡ, ಮನೆ ಟೆರೇಸ್ ಸೇರಿದಂತೆ ಎತ್ತರ ಕಟ್ಟಡಗಳನ್ನು ಹತ್ತಿ ಕುಳಿತಿದ್ದರು. ಇದು ಮೋದಿ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಜನಸ್ತೋಮದತ್ತ ಕೈಬಿಸಿದ ಮೋದಿ ಎಲ್ಲರಿಗೂ ನಮಸ್ಕರಿಸಿದೆ ರ್ಯಾಲಿ ವೇದಿಕೆಯತ್ತ ತೆರಳಿದ್ದಾರೆ. ರ್ಯಾಲಿ ಮೈದಾನ ಮೋದಿ ಭಾಷಣ ಕೇಳಲು ಕಿಕ್ಕಿರಿದು ತುಂಬಿತ್ತು. ಜನಸಾಗರ, ಮೋದಿ ಘೋಷಣಗಳು, ಚಪ್ಪಾಳೆ ಸದ್ದು ಮೋದಿ ಮಾತ್ರವಲ್ಲ ಉತ್ತರ ಪ್ರದೇಶದಲ್ಲಿ ಬಿಜೆಪಿ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಉತ್ತರ ಪ್ರದೇಶ ಚುನಾವಣೆ:
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 7 ಹಂತಗಳಲ್ಲಿ ನಡೆಯಲಿದೆ. ಇಂದಿನ(ಫೆ.20) ಮತದಾನ ಸೇರಿದಂತೆ ಮೂರು ಹಂತದ ಮತದಾನ ಮುಕ್ತಾಯಗೊಂಡಿದೆ. ಮಾರ್ಚ್ 7 ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಫಲಿತಾಂಶ ಹೊರಬೀಳಲಿದೆ. ಉತ್ತರ ಪ್ರದೇಶದ 403 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ಯುಪಿ ಮ್ಯಾಜಿಕ್ ನಂಬರ್ 202.

2017ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಸರ್ಕಾರ ರಚಿಸಿತು. ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 

click me!