6 ಲಾರಿಗಳಿಗೆ 8 ಚಾಲಕರು ಇದ್ದಾರೆ ಎಂದ ಮಾಲೀಕಗೆ ಮೋದಿ ತೀವ್ರ ತರಾಟೆ!

Published : Nov 09, 2020, 09:43 AM IST
6 ಲಾರಿಗಳಿಗೆ 8 ಚಾಲಕರು ಇದ್ದಾರೆ ಎಂದ ಮಾಲೀಕಗೆ ಮೋದಿ ತೀವ್ರ ತರಾಟೆ!

ಸಾರಾಂಶ

ಗುಜರಾತಿನ ಭಾವನಗರದ ಸಾರಿಗೆ ಸಂಸ್ಥೆಯ ಮಾಲೀಕನೊಬ್ಬ ತನ್ನಲ್ಲಿರುವ 6 ಟ್ರಕ್‌ಗಳಿಗೆ ಕೇವಲ 8 ಮಂದಿ ಚಾಲಕರನ್ನು ನೇಮಿಸಿಕೊಂಡಿದ್ದ|  ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ 

ಅಹಮದಾಬಾದ್(ನ.09)‌: ಗುಜರಾತಿನ ಭಾವನಗರದ ಸಾರಿಗೆ ಸಂಸ್ಥೆಯ ಮಾಲೀಕನೊಬ್ಬ ತನ್ನಲ್ಲಿರುವ 6 ಟ್ರಕ್‌ಗಳಿಗೆ ಕೇವಲ 8 ಮಂದಿ ಚಾಲಕರನ್ನು ನೇಮಿಸಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ಹೊರಹಾಕಿರುವ ಪ್ರಸಂಗ ಶನಿವಾರ ನಡೆದಿದೆ.

ಸೂರತ್‌ನ ಹಜಾರಿಯಾ ಮತ್ತು ಭಾವನಗರದ ಘೋಹಾದ ಮಧ್ಯೆ ರೋಪಾಕ್ಸ್‌ ಫೆರ್ರಿ ಸೇವೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿದ ಮೋದಿ, ಸಾರಿಗೆ ಸಂಸ್ಥೆಯ ಮಾಲಿಕರ ಜೊತೆ ಕೆಲ ಹೊತ್ತು ಸಂವಾದ ನಡೆಸಿದರು.

ಈ ವೇಳೆ ಭಾವನಗರದಲ್ಲಿ ಸಾರಿಗೆ ಉದ್ದಿಮೆ ನಡೆಸುತ್ತಿರುವ ಆಸಿಫ್‌ ಸೋಲಂಕಿ ಅವರ ಬಳಿ ನಿಮ್ಮ ಬಳಿಕ ಎಷ್ಟು ಟ್ರಕ್‌ ಟ್ರಕ್‌ಗಳು ಹಾಗೂ ಚಾಲಕರು ಇದ್ದಾರೆ ಎಂದು ಪ್ರಶ್ನಿಸಿದರು. ಅದಕ್ಕೆ ಆಸಿಫ್‌ ಸೋಲಂಕಿ ತಮ್ಮ ಬಳಿ 6 ಟ್ರಕ್‌ಗಳು ಹಾಗೂ 8 ಮಂದಿ ಚಾಲಕರು ಇದ್ದಾರೆ ಎಂದು ಹೇಳಿದ್ದರು.

ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮೋದಿ, ಚಾಲಕರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಳ್ಳುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಇರುತ್ತದೆ. 6 ಟ್ರಕ್‌ಗಳಿಗೆ ಕನಿಷ್ಠ 12 ಚಾಲಕರು ಇರಲೇ ಬೇಕು. ಉಳಿದ ಚಾಲಕರನ್ನು ನೇಮಿಸಿಕೊಳ್ಳಿ ಎಂದು ಸೂಚನೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ