
ಭೋಪಾಲ್(ಡಿ.17): ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಕ ಕೈಲಾಶ್ ವಿಜಯವರ್ಗೀಯ ಹೇಳಿಕೆಯಿಂದ ಮಧ್ಯಪ್ರದೇಶದ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಇಂಧೋರ್‌ನಲ್ಲಿ ಆಯೋಜಿಸಲಾಗಿದ್ದ ರೈತ ಸಮ್ಮೇಳನದಲ್ಲಿ ಮಾತನಾಡಿದ ಕೈಲಾಶ್ ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರ ಬೀಳಿಸುವಲ್ಲಿ ಪ್ರಧಾನ್‌ರವರ ಅಲ್ಲ, ಪ್ರಧಾನ ಮಂತ್ರಿಯ ಪಾತ್ರವಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಈ ವಿಚಾರವಾಗಿ ಕಾಂಗ್ರೆಸ್ ಪಿಎಂ ಮೋದಿ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದೆ.
ಉಪ ಚುನಾಣೆ: ಸುಪ್ರೀಂಕೋರ್ಟ್ ಮಹತ್ವದ ಆದೇಶ, ಮಾಜಿ ಸಿಎಂಗೆ ಬಿಗ್ ರಿಲೀಫ್..!
ಆದರೆ ವೇದಿಕೆಯಿಂದ ಕೆಳಗಿಳಿದ ಬಳಿಕ ಕೈಲಾಶ್ ತಮ್ಮ ಹೇಳಿಕೆಗೆ ವಿವರಣೆ ನೀಡಿದ್ದಾರೆ. ರೈತರನ್ನು ಸಂಬೋಧಿಸಿ ಮಾತನಾಡುತ್ತಿದ್ದ ಕೈಲಾಶ್ ಯಾವಾಗದವರೆಗೆ ಕಮಲನಾಥ್ ಅಧಿಕಾರದಲ್ಲಿದ್ದರೋ ಅಲ್ಲಿಯವರೆಗೆ ಅವರು ರೈತರನ್ನು ನೆಮ್ಮದಿಯಿಂದ ನಿದ್ರಿಸಲು ಬಿಡಲಿಲ್ಲ. ನರೋತ್ತಮ್ ಮಿಶ್ರಾ ಕಮಲನಾಥ್‌ರವರ ಕನಸಿನಲ್ಲೂ ಬರುತ್ತಿದ್ದರು. ಈ ಮಾತುಗಳನ್ನು ನಾನು ಕ್ಯಾಮೆರಾ ಹಿಂದೆ ಹೇಳುತ್ತಿದ್ದೇನೆ ನೀವೂ ಯಾರಿಗೂ ಹೇಳಬೇಡಿ ಎಂದಿದ್ದಾರೆ.
ಪ್ರಧಾನ ಮಂತ್ರಿ ಪಾತ್ರ
ನಾನು ಈವರೆಗೆ ಈ ವಿಚಾರ ಯಾರಿಗೂ ಹೇಳಿಲ್ಲ. ಕಮಲನಾಥ್ ಸರ್ಕಾರ ಬೀಳಿಸುವಲ್ಲಿ ಧರ್ಮೇಂದ್ರ ಪ್ರಧಾನ್‌ಜೀಯಲ್ಲ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಹತ್ವದ ಪಾತ್ರ ವಹಿಸಿದ್ದಾರೆ. ಇದೇ ಮೊದಲ ಬಾರಿ ಈ ವಿಚಾರ ನಾನು ಬಾಯ್ಬಿಡುತ್ತಿದ್ದೇನೆ ಎಂದು ಕೈಲಾಶ್ ಹೇಳಿದ್ದರು. ಅವರು ಈ ಮಾತುಗಳನ್ನು ಹೇಳುತ್ತಿದ್ದ ವೇಳೆ ಧರ್ಮೇಂದ್ರ ಪ್ರಧಾನ್ ಕೂಡಾ ವೇದಿಕೆ ಮೇಲಿದ್ದರು ಎಂಬುವುದು ಉಲ್ಲೇಖನೀಯ.
ಮಾಜಿ ಸಿಎಂ, ಕಾಂಗ್ರೆಸ್ ನಾಯಕಗೆ ಬಿಗ್ ಶಾಕ್...!
ಬಳಿಕ ವಿವರಣೆ ಕೊಟ್ಟ ಕೈಲಾಶ್
ಬಿಜೆಪಿ ಪ್ರಧಾನ ಕಾರ್ಯದರ್ಶಿಯ ಹೇಳಿಕೆಯಿಂದ ಭಾರೀ ವಿವಾದ ಹುಟ್ಟಿಕೊಂಡಿದೆ. ಹೀಗಾಗಿ ಈ ವಿಚಾರವಾಗಿ ಕೈಲಾಶ್ ಸ್ಪಷ್ಟನೆ ನೀಡಿದ್ದಾರೆ. ಸಮ್ಮೇಳನದಲ್ಲಿದ್ದವರಿಗೆ ಇದು ನಿಜವಲ್ಲ, ತಮಾಷೆಗಾಗಿ ಹೇಳಿದ್ದು ಎಂದು ಹೇಳಿದ್ದಾರೆ.
ಉತ್ತರ ನೀಡಿ ಎಂದ ದಿಗ್ವಿಜಯ್ ಸಿಂಗ್
ಕೈಲಾಶ್ ವಿಜಯ ವರ್ಗೀಯರವರ ಈ ಹೇಳಿಕೆ ವಿಚಾರವಾಗಿ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಸ್ಪಷ್ಟನೆ ಕೋರಿದ್ದಾರೆ. ಟ್ವೀಟ್ ಮಾಡಿರುವ ಸಿಂಗ್ ಮೋದಿಜೀ ಮಧ್ಯಪ್ರದೇಶ ಸರ್ಕಾರ ಬೀಳಿಸುವಲ್ಲಿ ಅವರ ಪಾತ್ರವಿತ್ತೆಂದು ಈಗಲಾದರೂ ಹೇಳುತ್ತೀರಾ? ಮಧ್ಯಪ್ರದೇಶ ಸರ್ಕಾರ ಬೀಳಿಸುವ ಸಲುವಾಗಿ ಲಾಕ್‌ಡೌನ್ ಹೇರಲು ವಿಳಂಬವಾಯ್ತೇ? ಇದು ಬಹಳ ಗಂಭೀರ ಆರೋಪ ಮೋದೀಜೀ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ