ಉತ್ತರ ಪ್ರದೇಶದಲ್ಲಿ ಗೆಲ್ಲಲು ಪ್ರಧಾನ ಮಂತ್ರಿ ಹೆಸರೇ ಸಾಕು: ಮೋದಿ ಆಪ್ತನ ಮಾತು!

By Suvarna News  |  First Published Jun 22, 2021, 3:19 PM IST

* ಉತ್ತರ ಪ್ರದೇಶ ಚುನಾವಣೆಗೆ ಸಿದ್ಧತೆ ಆರಂಭ

* ಉತ್ತರ ಪ್ರದೇಶ ಉಪಾಧ್ಯಕ್ಷರಾಗಿ ಮೋದಿ ಆಪ್ತ ಎ. ಕೆ. ಶರ್ಮಾ ಆಯ್ಕೆ

* ಉತ್ತರ ಪ್ರದೇಶದಲ್ಲಿ ಗೆಲ್ಲಲು ಪ್ರಧಾನ ಮಂತ್ರಿ ಹೆಸರೇ ಸಾಕು ಎಂದ ಶರ್ಮಾ


ಲಕ್ನೋ(ಜೂ.22): ಉತ್ತರ ಪ್ರದೇಶದಲ್ಲಿ ಚುನಾವಣೆಗೆ ಸಿದ್ಧತೆ ಆರಮಭವಾಗಿದೆ. ಹೀಗಿರುವಾಗ ಬಿಜೆಪಿ ನೂತನ ಉಪಾಧ್ಯಕ್ಷ ಹಾಗೂ ಮಾಜಿ ಐಎಎಸ್ ಅಧಿಕಾರಿ ಎ. ಕೆ. ಶರ್ಮಾ ಈ ಬಗ್ಗೆ ಮಾತನಾಡುತ್ತಾ ರಾಜ್ಯದ ಜನತೆ ಪ್ರಧಾನ ಮಂತ್ರಿಯನ್ನು ಈಗಲೂ  2013-14ರಂತೇ ಪ್ರೀತಿಸುತ್ತಾರೆ. ಮುಂದಿನ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅವರ ಹೆಸರುಉ ಹಾಗೂ ಪಕ್ಷದ ಹಿರಿಯ ನಾಯಕರ ಆಶೀರ್ವಾದವೇ ಸಾಕು ಎಂದಿದ್ದಾರೆ.

ಬಿಜೆಪಿಯ ಉತ್ತರ ಪ್ರದೇಶ ವಿಭಾಗದ ನೂತನ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎ. ಕೆ. ಶರ್ಮಾರವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯು ಕಳೆದ ಬಾರಿಗಿಂತ ಹೆಚ್ಚು ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತದೆ ಎಂದಿದ್ದಾರೆ. ಅಲ್ಲದೇ ತಮ್ಮನ್ನು ಉಪಾಧ್ಯಕ್ಷರನ್ನಾಗಿ ಮಾಡಿರುವುದಕ್ಕೆ, ಉತ್ತರ ಪ್ರದೇಶ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್, ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.

Tap to resize

Latest Videos

ಸ್ವತಂತ್ರ್‌ ದೇವ್‌ ಸಿಂಗ್‌ರವರಿಗೆ ಬರೆದ ಪತ್ರದಲ್ಲಿ ಶರ್ಮಾರವರು, 2022ರ ಚುನಾವಣೆಯಲ್ಲಿ, ಸಿಎಂ ಯೋಗಿ ನೇತೃತ್ವದಲ್ಲಿ ಬಿಜೆಪಿ ಅಪೂರ್ವ ಸಾಧನೆ ಮಾಡಲಿದೆ. ನಾನು ಪಕ್ಷದ ಮೂಲಕ ಜನಸೇವೆ ಮಾಡುತ್ತೇನೆ ಎಂದೂ ತಿಳಿಸಿದ್ದಾರೆ.
 

click me!