ಜಮ್ಮು ಮತ್ತು ಕಾಶ್ಮೀರದ 32,000 ಕೋಟಿ ರೂ ಮೌಲ್ಯದ ಅಭಿವೃದ್ಧಿ ಯೋಜನೆ ಉದ್ಘಾಟಿಸಿದ ಭಾಷಣ ಮಾಡಿದ ಪ್ರಧಾನಿ ಮೋದಿ, ಜನಸ್ತೋಮದಲ್ಲಿ ಮಗುವನ್ನು ಎತ್ತಿ ಹಿಡಿದ ಪೋಷಕರಿಗೆ ಮಾಡಿದ ಮನವಿ ಎಲ್ಲರ ಮನಸ್ಸು ಗೆದ್ದಿತ್ತು. ಪುಟ್ಟ ಮಗುವನ್ನು ಎತ್ತಿ ಹಿಡಿದು ತೊಂದರೆಕೊಡಬೇಡಿ. ಪುಟ್ಟ ಮಗು ಅದು. ನನ್ನ ಆಶೀರ್ವಾದ ಮಗುವಿಗೆ ಇದೆ ಎಂದು ಮೋದಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಜಮ್ಮು(ಫೆ.20) ಪ್ರಧಾನಿ ನರೇಂದ್ರ ಮೋದಿ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಜಮ್ಮುವಿನಲ್ಲಿ 32,000 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ. ಆರೋಗ್ಯ, ಶಿಕ್ಷಣ, ರೈಲು, ರಸ್ತೆ, ವಾಯುಯಾನ, ಪೆಟ್ರೋಲಿಯಂ ಮತ್ತು ನಾಗರಿಕ ಮೂಲಸೌಕರ್ಯ ಸೇರಿದಂತೆ ಹಲವು ಯೋಜನಗಳ ಉದ್ಘಾಟನೆ ಮಾಡಿದ್ದಾರೆ. ಬಳಿಕ ಮಾತನಾಡಿದ ಮೋದಿ ಕಳೆದ 10 ವರ್ಷದಲ್ಲಿ ಆಗಿರುವ ಬದಲಾವಣೆ ಕುರಿತು ಮಾತನಾಡಿದ್ದಾರೆ. ಇದೇ ವೇಳೆ ಪೋಷಕರೊಬ್ಬರ ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿರುವುದನ್ನು ಗಮನಿಸಿದ ಪ್ರಧಾನಿ ಮೋದಿ, ಮಗುವಿಗೆ ತೊಂದರೆಕೊಡಬೇಡಿ ಎಂದು ಮನವಿ ಮಾಡಿದರು. ಮೋದಿಯ ಈ ಹೃದಯಸ್ಪರ್ಶಿ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಭಾಷಣದ ನಡುವೆ ಪೋಷಕರೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ನಿಂತಿರುವುದನ್ನು ಮೋದಿ ಗಮನಿಸಿದ್ದಾರೆ. ಎರಡು ಕೈಗಳಲ್ಲಿ ಎತ್ತಿಹಿಡಿದು ಗಮನಸೆಳೆಯುವ ಯತ್ನವನ್ನು ಪೋಷಕರು ಮಾಡಿದ್ದರು. ಮಗುವನ್ನು ಗಮನಿಸಿದ ಮೋದಿ, ಪೋಷಕರಲ್ಲಿ ವಿಶೇಷ ಮನವಿ ಮಾಡಿದರು. ಪುಟ್ಟ ಮಗುವನ್ನು ಎತ್ತಿಕೊಂಡು ಆ ಮಗುವಿಗೆ ತೊಂದರೆಕೊಡಬೇಡಿ. ತುಂಬಾ ಪುಟ್ಟ ಕಂದಮ್ಮ ಅದು. ಈ ಚಳಿ ವಾತಾವರಣದಲ್ಲಿ ಮಗುವಿಗೆ ತೊಂದರೆಕೊಡಬೇಡಿ ಎಂದು ಮೋದಿ ಮನವಿ ಮಾಡಿದ್ದಾರೆ.
ಸೋಲಿನಿಂದ ಕುಗ್ಗಬೇಡಿ, ಪಾಠ ಕಲಿಯಿರಿ: ಪ್ರಧಾನಿ ನರೇಂದ್ರ ಮೋದಿ
ಮೋದಿಯ ಈ ನಡೆಗೆ ಭಾರಿ ಚಪ್ಪಾಳೆ ವ್ಯಕ್ತವಾಗಿತ್ತು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಮೋದಿಯ ಈ ವಿಡಿಯೋ ಭಾರಿ ವೈರಲ್ ಆಗಿದೆ. ಭಾರಿ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
आज देश में शिक्षा और कौशल के क्षेत्र में जिस स्केल पर काम हो रहा है, 10 साल पहले तक उसके बारे में सोचना भी मुश्किल था। pic.twitter.com/P3rXhmDgIo
— Narendra Modi (@narendramodi)
ಪೋಷಕರಿಗೆ ವಿಶೇಷ ಮನವಿ ಮಾಡಿ ಭಾಷಣ ಮುಂದುವರಿಸಿದ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿನ ಬದಲಾವಣೆ ಕುರಿತು ವಿವರಣೆ ನೀಡಿದರು. ಕಾಶ್ಮೀರದಲ್ಲಿ ವೈದ್ಯಕೀಯ ಕಾಲೇಜುಗಳ ಸಂಖ್ಯೆ 2014 ರಲ್ಲಿದ್ದ 4 ರಿಂದ 12 ಕ್ಕೆ ಏರಿಕೆಯಾಗಿದೆ, ಎಂಬಿಬಿಎಸ್ ಸೀಟುಗಳು 2014 ರಲ್ಲಿದ್ದ 500 ಕ್ಕೆ ಹೋಲಿಸಿದರೆ 1300 ಮತ್ತು ಪಿಜಿ ಮೆಡಿಕಲ್ ಸೀಟುಗಳು . 2014ರಲ್ಲಿದ್ದ ಶೂನ್ಯದಿಂದ 650 ಕ್ಕೆ ಹೆಚ್ಚಳವಾಗಿವೆ. ಕಳೆದ 4 ವರ್ಷಗಳಲ್ಲಿ 45 ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಿರುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಏಮ್ಸ್ ಗಳು ಬರಲಿವೆ. ಅದರಲ್ಲಿ ಜಮ್ಮು ಏಮ್ಸ್ ಅನ್ನು ಪ್ರಧಾನಿ ಇಂದು ಉದ್ಘಾಟಿಸಿದರು. ಕಳೆದ 10 ವರ್ಷಗಳಲ್ಲಿ ದೇಶದಲ್ಲಿ 15 ಹೊಸ ಏಮ್ಸ್‌ಗಳನ್ನು ಮಂಜೂರು ಮಾಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
Chenab Rail Bridge ವಿಶ್ವದ ಅತಿ ಎತ್ತರದ ರೈಲ್ವೇ ಸೇತುವೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ!
370 ನೇ ವಿಧಿ ರದ್ದತಿಯ ಕುರಿತು ಮಾತನಾಡಿದ ಪ್ರಧಾನಿ, ಹೊಸ ಜಮ್ಮು ಕಾಶ್ಮೀರವು ಅಸ್ತಿತ್ವಕ್ಕೆ ಬರುತ್ತಿದೆ, ಅದರ ಅಭಿವೃದ್ಧಿಗೆ ಇದ್ದ ದೊಡ್ಡ ಅಡಚಣೆಯನ್ನು ತೆಗೆದುಹಾಕಲಾಗಿದೆ ಮತ್ತು ಈ ಪ್ರದೇಶವು ಸಮತೋಲಿತ ಅಭಿವೃದ್ಧಿಯ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರು. ಅವರು ಮುಂಬರುವ ಆರ್ಟಿಕಲ್ 370 ಚಲನಚಿತ್ರವನ್ನು ಸಹ ಉಲ್ಲೇಖಿಸಿದರು.