ಮೋದಿ ಸಂಪುಟದಲ್ಲಿ ಮೇಜರ್‌ ಸರ್ಜರಿ: ಕಾನೂನು ಸಚಿವ ಸ್ಥಾನ ಕಳೆದುಕೊಂಡ ಕಿರಣ್‌ ರಿಜಿಜು

By BK AshwinFirst Published May 18, 2023, 10:28 AM IST
Highlights

ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ಸಚಿವಾಲಯದಲ್ಲಿ ಪುನರ್‌ ರಚನೆ ಮಾಡಲಾಗಿದೆ. ಕಾನೂನು ಸಚಿವರಾಗಿದ್ದ ಕಿರಣ್‌ ರಿಜಿಜುಗೆ ಭೂ ವಿಜ್ಞಾನ ಸಚಿವ ಸ್ಥಾನವನ್ನು ನೀಡಲಾಗಿದೆ. 

ನವದೆಹಲಿ (ಮೇ 18, 2023): ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ ಸಚಿವಾಲಯದಲ್ಲಿ ಪುನರ್‌ ರಚನೆ ಮಾಡಲಾಗಿದೆ. ಕಾನೂನು ಸಚಿವರಾಗಿದ್ದ ಕಿರಣ್‌ ರಿಜಿಜುಗೆ ಭೂ ವಿಜ್ಞಾನ ಸಚಿವ ಸ್ಥಾನವನ್ನು ನೀಡಲಾಗಿದೆ. 

ಇನ್ನು, ಸಂಸದೀಯ ವ್ಯವಹಾರಗಳು ಮತ್ತು ಸಂಸ್ಕೃತಿ ರಾಜ್ಯ ಸಚಿವರಾಗಿರುವ ಅರ್ಜುನ್‌ ರಾಮ್‌ ಮೇಘ್ವಾಲ್‌ ಅವರಿಗೆ ಹೆಚ್ಚುವರಿಯಾಗಿ ಕಾನೂನು ಮತ್ತು ನ್ಯಾಯಾಂಗ ಸಚಿವ ಸ್ಥಾನ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ರಾಷ್ಟ್ರಪತಿ ಭವನದ ಮೂಲಗಳು ಖಚಿತಪಡಿಸಿವೆ. 

ಇದನ್ನು ಓದಿ : ನ್ಯಾಯಾಂಗ, ಕೊಲಿಜಿಯಂ ವಿರುದ್ಧ ಹೇಳಿಕೆ: ಉಪರಾಷ್ಟ್ರಪತಿ ಧನಕರ್‌, ಸಚಿವ ರಿಜಿಜು ವಿರುದ್ಧ ಇಂದು ಸುಪ್ರಿಂಕೋರ್ಟ್‌ ವಿಚಾರಣೆ

ನ್ಯಾಯಾಂಗ ಮತ್ತು ಕೊಲಿಜಿಯಂ ಬಗ್ಗೆ ನೀಡಲಾದ ಹೇಳಿಕೆಗಳ ಸಂಬಂಧ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹಾಗೂ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯು ಪಾರದರ್ಶಕವಾಗಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದ್ದರು. ಕೊಲಿಜಿಯಂ ವಿಚಾರದಲ್ಲಿ ಕಿರಣ್‌ ರಿಜಿಜು ಅಸಮಾಧಾನ, ಸುಪ್ರೀಂಕೋರ್ಟ್‌ ವಿರುದ್ಧದ ತಿಕ್ಕಾಟದ ನಡುವೆಯೇ ಕೇಂದ್ರ ಸರ್ಕಾರ ಕ್ಯಾಬಿನೆಟ್‌ ಪುನರ್‌ರಚನೆ ಮಾಡಿದೆ. 

ಇನ್ನು, ಈ ಬೆಳವಣಿಗೆಗೆ ವಿಪಕ್ಷಗಳಾದ ಟಿಎಂಸಿ, ಉದ್ಧವ್‌ ಠಾಕ್ರೆ ಶಿವಸೇನೆ ಬಣ ಹಾಗೂ ಕಾಂಗ್ರೆಸ್‌ ನಾಯಕರು ಸಹ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಸಚಿವ ಸ್ಥಾನದಿಂದ ಕಿರಣ್‌ ರಿಜಿಜು ಪದಚ್ಯುತಿ ಮಾಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ  ಉದ್ಧವ್‌ ಠಾಕ್ರೆ ಬಣದ ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ “ಮಹಾರಾಷ್ಟ್ರದ ತೀರ್ಪಿನ ಮುಜುಗರದ ಕಾರಣವೇ? ಅಥವಾ ಮೋದಾನಿ-ಸೆಬಿ ತನಿಖೆಯೇ?’’ ಎಂದು ಟ್ವೀಟ್‌ ಮೂಲಕ ವ್ಯಂಗ್ಯವಾಡಿದ್ದಾರೆ.

Is it because of the Maharashtra judgement embarrassment? Or the Modani- SEBI investigation?

— Priyanka Chaturvedi🇮🇳 (@priyankac19)

ಇದನ್ನೂ ಓದಿ: ರಾಜಕೀಯ ಹಿನ್ನೆಲೆಯವರಿಗೆ ಜಡ್ಜ್‌ ಹುದ್ದೆ: ರಿಜಿಜು ಸಮರ್ಥನೆ; ಮದ್ರಾಸ್‌ ಹೈಕೋರ್ಟ್‌ಗೆ ಗೌರಿ ನೇಮಕ ಹಿನ್ನೆಲೆ ಸುಪ್ರೀಂ ವಿಚಾರಣೆ

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ನ ಅಲ್ಕಾ ಲಂಬಾ ಕೂಡ  "ಕೇಂದ್ರ ಸರ್ಕಾರವು ತನ್ನ ಇಮೇಜ್ ಅನ್ನು ರಕ್ಷಿಸಿಕೊಳ್ಳಲು ಕಿರಣ್‌ ರಿಜಿಜು ಅವರನ್ನು ತೆಗೆದುಹಾಕಿದೆ" ಎಂದು ಟ್ವೀಟ್‌ ಮೂಲಕ ಹೇಳಿದ್ದಾರೆ.

पिछले कुछ समय से कानून मंत्री के तौर द्वारा जजों की नियुक्ति और अदालतों के काम करने के तौर तरीकों को लेकर की जा रही टिप्पणियों और हस्तक्षेप ने मोदी सरकार के लिए मुश्किलें खड़ी कर दी थीं,
सरकार ने अपनी छवि बचाने के लिए अपने क़ानून मंत्री की बलि देकर अच्छा किया. https://t.co/cXDM9R8kjI

— Alka Lamba 🇮🇳 (@LambaAlka)

ಇದನ್ನೂ ಓದಿ: ಸುಪ್ರೀಂಕೋರ್ಟ್‌ಗೆ 5 ಜಡ್ಜ್‌ಗಳ ನೇಮಕ: ಸುಪ್ರೀಂ ಅತೃಪ್ತಿ ಬೆನ್ನಲ್ಲೇ ಕೇಂದ್ರ ಸರ್ಕಾರ ಅಸ್ತು

click me!