ಆಸ್ತಿ ವಶಕ್ಕೆ ಪಡೆಯುವ ವಕ್ಫ್‌ ಮಂಡಳಿಗೆ ಕೇಂದ್ರ ಸರ್ಕಾರದಿಂದ ಅಂಕುಶ?

By Kannadaprabha News  |  First Published Aug 5, 2024, 5:16 AM IST

ಮಹತ್ವದ ಬೆಳವಣಿಗೆಯೊಂದರಲ್ಲಿ ವಕ್ಫ್‌ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಲಿಂಗ ವೈವಿಧ್ಯತೆ ತರುವ ನಿಟ್ಟಿನಲ್ಲಿ 1995ರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಇಂಥದ್ದೊಂದು ತಿದ್ದುಪಡಿ ಮೂಲಕ, ಯಾವುದೇ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸುವ ಮತ್ತು ಅದರ ನಿಯಂತ್ರಣವನ್ನು ತೆಗೆದುಕೊಳ್ಳುವ ವಕ್ಫ್ ಮಂಡಳಿಗಳ ‘ಅನಿರ್ಬಂಧಿತ’ ಅಧಿಕಾರ ನಿರ್ಬಂಧಿಸಲೂ ನಿರ್ಧರಿಸಿದೆ.


ನವದೆಹಲಿ (ಆ.5): ಮಹತ್ವದ ಬೆಳವಣಿಗೆಯೊಂದರಲ್ಲಿ ವಕ್ಫ್‌ ಮಂಡಳಿಯಲ್ಲಿ ಪಾರದರ್ಶಕತೆ ಮತ್ತು ಲಿಂಗ ವೈವಿಧ್ಯತೆ ತರುವ ನಿಟ್ಟಿನಲ್ಲಿ 1995ರ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಜೊತೆಗೆ ಇಂಥದ್ದೊಂದು ತಿದ್ದುಪಡಿ ಮೂಲಕ, ಯಾವುದೇ ಆಸ್ತಿಯನ್ನು ‘ವಕ್ಫ್ ಆಸ್ತಿ’ ಎಂದು ಘೋಷಿಸುವ ಮತ್ತು ಅದರ ನಿಯಂತ್ರಣವನ್ನು ತೆಗೆದುಕೊಳ್ಳುವ ವಕ್ಫ್ ಮಂಡಳಿಗಳ ‘ಅನಿರ್ಬಂಧಿತ’ ಅಧಿಕಾರ ನಿರ್ಬಂಧಿಸಲೂ ನಿರ್ಧರಿಸಿದೆ.

ಕಳೆದ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲಾಗಿದ್ದು, ಈ ತಿದ್ದುಪಡಿಯನ್ನು ಇದೇ ವಾರ ಸಂಪುಟ ಸಭೆಯಲ್ಲಿ ಮಂಡಿಸಿ ಅದನ್ನು ಸಂಸತ್ತಿನ ಪ್ರಸಕ್ತ ಅಧಿವೇಶನದಲ್ಲೇ ಅಂಗೀಕಾರ ಪಡೆಯುವ ದಿಸೆಯಲ್ಲಿ ಸರ್ಕಾರ ಹೆಜ್ಜೆ ಇಟ್ಟಿದೆ.

Tap to resize

Latest Videos

ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಲ್ಲಲು ಸಚಿವರಿಗೆ ಕೆ.ಸಿ. ವೇಣುಗೋಪಾಲ್‌ ತಾಕೀತು!

ವಕ್ಫ್‌ ಬೋರ್ಡ್‌ ನಿರ್ಧಾರಗಳನ್ನು ಸ್ವತಃ ಹೈಕೋರ್ಟ್‌ಗಳ ಕೂಡಾ ಪ್ರಶ್ನಿಸುವಂತಿಲ್ಲ ಎಂಬ ಮಂಡಳಿ ಆಕ್ಷೇಪಕ್ಕೆ ಹಲವು ಹೈಕೋರ್ಟ್‌ಗಳ ಮುಸ್ಲಿಂ ಜಡ್ಜ್‌ಗಳ ಆಕ್ಷೇಪ, ತಿದ್ದುಪಡಿಗೆ ಮುಸ್ಲಿಂ ಸಮುದಾಯದಿಂದಲೇ ಕೇಳಿಬಂದ ಒತ್ತಾಯ, ಸಾಚಾರ್‌ ಸಮಿತಿಯ ಶಿಫಾರಸು ಮತ್ತು ಕೆ.ರೆಹಮಾನ್‌ ಖಾನ್‌ ನೇತೃತ್ವದ ಸಂಸದೀಯ ಸಮಿತಿಯ ಶಿಫಾರಸು ಆಧರಿಸಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ.

ಕುಮಾರಸ್ವಾಮಿ ನವರಂಗಿ ಆಟ ರಾಜ್ಯದ ಜನರಿಗೆ ಗೊತ್ತಿದೆ: ಡಿಕೆ ಶಿವಕುಮಾರ ವಾಗ್ದಾಳಿ

ಒಂದು ವೇಳೆ ಈ ತಿದ್ದುಪಡಿ ಕಾಯ್ದೆ ಅಂಗೀಕಾರವಾದರೆ, ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದರೆ ವಕ್ಫ್‌ ಮಂಡಳಿಗೆ ಸರ್ಕಾರದ ದೃಢೀಕರಣ (ವೆರಿಫಿಕೇಶನ್‌) ಕಡ್ಡಾಯವಾಗಲಿದೆ. ವಕ್ಫ್‌ ಮಂಡಳಿ ಈಗ ದೇಶದಲ್ಲಿ ಲಕ್ಷಾಂತರ ಕೋಟಿ ರು. ಆಸ್ತಿಯ ಒಡೆತನ ಹೊಂದಿದ್ದು, ರಕ್ಷಣಾ ಇಲಾಖೆ ಹಾಗೂ ರೈಲ್ವೆ ನಂತರ ಅಧಿಕ ಭೂಮಿ ಹೊಂದಿರುವ ದೇಶದ 3ನೇ ಸಂಸ್ಥೆ ಆಗಿದೆ. ವಕ್ಫ್‌ ಮಂಡಳಿಯ ಆಸ್ತಿಗೆ ಹೋಲಿಸಿದರೆ ಅದಕ್ಕೆ ಲಭ್ಯವಾಗುತ್ತಿರುವ ವಾರ್ಷಿಕ 200 ಕೋಟಿ ರು. ಆದಾಯ ಕಡಿಮೆ. ಪಾರದರ್ಶಕತೆ ಇಲ್ಲದೇ ಇರುವ ಎನ್ನುವ ವಿಷಯ ಕೂಡಾ ತಿದ್ದುಪಡಿಗೆ ಕಾರಣ ಎನ್ನಲಾಗಿದೆ.

click me!