ನವದೆಹಲಿ(ಜು.20): ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಹಲೆವೆಡೆ ಲಸಿಕೆ ಅಭಾವ ಕಾಡುತ್ತಿದೆ. ಈ ಕುರಿತು ನರೇಂದ್ರ ಮೋದಿ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು 188 ಕೋಟಿ ಲಸಿಕೆ ಡೋಸ್ ಅವಶ್ಯಕತೆ ಇದೆ ಎಂದಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿದಿದೆ 2.11 ಕೋಟಿ ಲಸಿಕೆ!
ಭಾರತದಲ್ಲಿ 18 ವರ್ಷ ಮೇಲ್ಪಟ್ಟವರ ಸಂಖ್ಯೆ 94 ಕೋಟಿ. ಪ್ರತಿಯೊಬ್ಬರಿಗೆ 2 ಡೋಸ್ ನೀಡಲು 188 ಲಸಿಕೆ ಡೋಸ್ ಅವಶ್ಯಕತೆ ಇದೆ. ಸದ್ಯ ಸರಿಸುಮಾರು 43 ಕೋಟಿ ಲಸಿಕೆ ಡೋಸ್ ನೀಡಲಾಗಿದೆ. ಹೀಗಾಗಿ ಹೆಚ್ಚಿನ ಜನರಿಗೆ ಮೊದಲ ಡೋಸ್ ಲಸಿಕೆ ಸಿಕ್ಕಿಲ್ಲ. ಈ ಕುರಿತು ಕೇಳಲಾದ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ.
3ನೇ ಅಲೆ ಎದುರಿಸಲು 30 ದಿನದ ಔಷಧ ಸಂಗ್ರಹ!
ಈ ವರ್ಷದ ಅಂತ್ಯದೊಳಗೆ ಅಥವಾ 2022ರ ಜನವರಿ ತಿಂಗಳಲ್ಲಿ 188 ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗಲಿದೆ. ಈಗಾಗಲೇ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಜೂನ್ 21 ರಿಂದ ಭಾರತದಲ್ಲಿ ಲಸಿಕಾ ಅಭಿಯಾನಕ್ಕೆ ಮತ್ತಷ್ಟು ವೇಗ ನೀಡಲಾಗಿದೆ ಎಂದು ಆರೋಗ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಹೇಳಿದ್ದಾರೆ.
ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗೆ ಈಗಾಗಲೇ ಬೆಲೆ ನಿಗದಿ ಪಡಿಸಲಾಗಿದೆ. ಕೋವಿಶೀಲ್ಡ್ ಬೆಲೆ 600 ರೂ ಮತ್ತು ಕೋವಾಕ್ಸಿನ್ಗೆ 1,200 ರೂ. ಇಹಾಗೂ ಸ್ಪುಟ್ನಿಕ್ ವಿಗೆ ರೂ 948 ರೂ ನಿಗದಿಪಡಿಸಲಾಗಿದೆ ಎಂದು ಪವಾರ್ ಹೇಳಿದ್ದಾರೆ.