ರೈತರ ನಾಲ್ಕರಲ್ಲಿ 2 ಬೇಡಿಕೆಗೆ ಕೇಂದ್ರ ಸಮ್ಮತಿ; 7ನೇ ಸುತ್ತಿನ ಸಭೆಗೆ ದಿನಾಂಕ ಫಿಕ್ಸ್!

By Suvarna NewsFirst Published Dec 30, 2020, 10:12 PM IST
Highlights

ಕೇಂದ್ರ ಸರ್ಕಾರ ಹಾಗೂ ರೈತರು ನಡುವಿನ ಬಿಕ್ಕಟ್ಟು ಮುಂದುವರಿದಿದೆ. ತೀವ್ರ ಪ್ರತಿಭಟನೆ ಬಳಿಕ ಡಿಸೆಂಬರ್ 30 ರಂದು ನಿಗದಿ ಮಾಡಿದ್ದ ಮಾತುಕತೆ ಏನಾಯ್ತು. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ನವದೆಹಲಿ(ಡಿ.30): ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಕಾರಣ ರೈತರ ಸಮಸ್ಯೆ ಹಾಗೂ ಪ್ರತಿಭಟನಗೆ ಅಂತ್ಯಹಾಡಲು ನಡೆಸಿದ 6ನೇ ಸುತ್ತಿನ ಮಾತುಕತೆ ಸಂಪೂರ್ಣ ಸಫಲಗೊಂಡಿಲ್ಲ. ರೈತ ಸಂಘಟನೆಗಳು ಇಟ್ಟ ನಾಲ್ಕು ಬೇಡಿಕೆಗಳಲ್ಲಿ 2 ಬೇಡಿಕೆಗೆ ಕೇಂದ್ರ ಸಮ್ಮತಿಸಿದೆ

ಮೋದಿ ಮೇಲೆ ರೈತರು ನಂಬಿಕೆ ಕಳೆದುಕೊಂಡಿದ್ದಾರೆ; ಕಾರಣ ಹೇಳಿದ ರಾಹುಲ್ ಗಾಂಧಿ

ಪ್ರತಿಭಟನಾ ನಿರತ ರೈತರ ಜೊತೆ ಕೇಂದ್ರ ಸರ್ಕಾರ ಸುದೀರ್ಘ ಮಾತುಕತೆ ನಡೆಸಿದೆ. ಆದರೆ ರೈತ ಸಂಘಟನೆಗಳು ಪಟ್ಟು ಸಡಿಲಗೊಳಿಸಿಲ್ಲ. ವಿದ್ಯುತ್ ಬಿಲ್ ಸೇರಿದಂತೆ ರೈತರ ನಾಲ್ಕು ಬೇಡಿಕೆಗಳಲ್ಲಿ 2 ಬೇಡಿಕೆಗೆ ಕೇಂದ್ರ ಒಪ್ಪಿಗೆ ನೀಡಿದೆ. ಆದರೆ ಇನ್ನುಳಿದ ಕೇಂದ್ರ ಸರ್ಕಾರ  ಮಾತಿಗೆ ರೈತರು ಜಗ್ಗಿಲ್ಲ. ಹೀಗಾಗಿ ಮಾತುಕತೆ, ಸಂಪೂರ್ಣ ಫಲಪ್ರದವಾಗಿಲ್ಲ. ಹೀಗಾಗಿ ಪ್ರತಿಭಟನೆ ಮುಂದುವರಿಯಲಿದೆ.  7ನೇ ಸುತ್ತಿನ ಮಾತುಕತೆ ಜನವರಿ 4 ರಂದು ನಡೆಲು ನಿರ್ಧರಿಸಲಾಗಿದೆ.

ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೇ ಸಚಿವ ಪಿಯೂಷ್ ಗೋಯಸ್ ಸೇರಿದಂತೆ ಕೇಂದ್ರಸರ್ಕಾರ ಮೂವರು ಸಚಿವರು ರೈತರೊಂದಿಗೆ ಮಾತುಕತೆ ನಡೆಸಿತು. ಪ್ರತಿಭಟನಾ ನಿರತ ರೈತ ಸಂಘಟನೆಗಳ 41 ಮುಖಂಡರು ಈ ಮಾತುಕತೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಸರ್ಕಾರ ಕೃಷಿ ಕಾಯ್ದೆಗೆ ಸಂಬಂಧಿಸಿ ಸಮಿತಿ ರಚಿಸುವ ಭರವೆಸೆ ನೀಡಿದೆ. ಆದರೆ ಕಾಯ್ದೆಯನ್ನೇ ಹಿಂಪಡೆಯಲು ರೈತ ಸಂಘಟನೆಗಳು ಪಟ್ಟು ಹಿಡಿದಿದೆ.

ಕನಿಷ್ಠ ಬೆಂಬಲ ಬೆಲೆ ಸರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳವು ಸಮಿತಿ ಸೇರಿದಂತೆ ಹಲವು ಪರಿಹಾರ ಸೂತ್ರಗಳನ್ನು ಕೇಂದ್ರ ಮುಂದಿಟ್ಟಿತು. ಆದರೆ ರೈತ ಸಂಘಟನಗಳು ಮೂರು ಕೃಷಿ ಕಾಯ್ದೆ ಹಿಂಪೆಡಯುವುದನ್ನು ಬಿಟ್ಟು ಬೇರೆ ಏನೂ ಮಾತಾಡಿಲ್ಲ. ಮೂರು ಕಾಯ್ದೆಗಳಲ್ಲಿನ ಸಮಸ್ಯೆಗಳಲ್ಲ, ಮೂರು ಕಾಯ್ದೆಗಳೇ ಸಮಸ್ಯೆ ಎಂದು ರೈತರ ಪಟ್ಟು ಹಿಡಿದಿದ್ದಾರೆ.

 

click me!