ಶಹೀನ್‌ ಬಾಗ್‌ ಶೂಟರ್ ಬಿಜೆಪಿ ಸೇರ್ಪಡೆ... ಗೇಟ್ ಪಾಸು ಕೊಟ್ಟಾಯ್ತು!

By Suvarna NewsFirst Published Dec 30, 2020, 7:58 PM IST
Highlights

ಪೌರತ್ವ ಕಾಯಿದೆ ತಿದ್ದುಪಡಿ  ವಿರೋಧಿ ವೇಳೆ ಗುಂಡು ಹಾರಿಸಿದ್ದವ ಬಿಜೆಪಿ ಸೇರ್ಪಡೆ/ ಸೇರ್ಪಡೆಯಾದ ಕೆಲವೇ ಗಂಟೆಗಳಲ್ಲಿ ಸದಸ್ಯತ್ವ ರದ್ದು/ ಉತ್ತರ ಪ್ರದೇಶದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದ ಕಪಿಲ್ ಗುಜ್ಜರ್

ನವದೆಹಲಿ(ಡಿ.30)ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ಕಳೆದ ವರ್ಷ ಶಹೀನ್‌ ಬಾಗ್‌ ಪ್ರದೇಶದಲ್ಲಿ ನಡೆದ ದೀರ್ಘಕಾಲದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರ ವಿರುದ್ಧ ಗುಂಡು ಹಾರಿಸಿದ್ದ ಕಪಿಲ್‌ ಗುಜ್ಜರ್‌ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾನೆ ಎಂದು ವರದಿಯಾಗಿತ್ತು. ಇದಾದ  ಕೆಲವೇ ಗಂಟೆಗಳಲ್ಲಿ ಬಿಜೆಪಿ ಆತನ ಸದಸ್ಯತ್ವ ರದ್ದು ಮಾಡಿದೆ ಎನ್ನಲಾಗಿದೆ.

ಉತ್ತರಪ್ರದೇಶದ ಘಾಜಿಯಾಬಾದ್‌ನಲ್ಲಿ ಸ್ಥಳೀಯ ನಾಯಕರ ಸಮ್ಮುಖದಲ್ಲಿ ಈತ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದದ್ದಾನೆ ಎಂದು ವರದಿಯಾಗಿದ್ದವು.  ಪೂರ್ವ ದಿಲ್ಲಿಯ ದಲ್ಲುಪುರ ಪ್ರದೇಶ ನಿವಾಸಿ ಕಪಿಲ್‌, ಬಿಜೆಪಿ ಸೇರ್ಪಡೆ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದ.

ಕಾಂಗ್ರೆಸ್ ಗೆ ಇದು ಸತ್ವಪರೀಕ್ಷೆ ಕಾಲ.. ಸಿದ್ದು ಹೀಗೆ ಹೇಳಿದ್ದು ಯಾಕೆ?

ಕಳೆದ ವರ್ಷ ಫೆಬ್ರವರಿ 1ರಂದು ಶಹೀನ್‌ ಬಾಗ್‌ನಲ್ಲಿ ಪ್ರತಿಭಟನಾನಿರತ ಪ್ರದೇಶದಲ್ಲಿ ಪಿಸ್ತೂಲ್ ಹಿಡಿದು ಗುಂಡು ಹಾರಿಸಿದ್ದ. ಈತ ಎಬಿವಿಪಿ ಕಾರ್ಯಕರ್ತ ಎಂಬ ಮಾತುಗಳು ಕೇಳಿ ಬಂದಿದ್ದವು. ಒಟ್ಟಿನಲ್ಲಿ ಬಿಜೆಪಿ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಕೆಲಸ ಮಾಡಿದೆ ಎನ್ನಲಾಗುತ್ತಿದೆ.

 

click me!