4 ಬಾರಿ ಟ್ರಂಪ್‌ ಕರೆ ಮಾಡಿದ್ರೂ ಪ್ರತಿಕ್ರಿಯೆಗೆ ಮೋದಿ ನಕಾರ?

Kannadaprabha News   | Kannada Prabha
Published : Aug 27, 2025, 03:38 AM IST
Donald Trump Narendra Modi

ಸಾರಾಂಶ

ಟ್ರಂಪ್‌ ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಸಂಪರ್ಕಿಸುವ ಪ್ರಯತ್ನವನ್ನೂ ನಡೆಸಿದ್ದರು. ಕಳೆದ ಕೆಲ ವಾರಗಳಿಂದ ಮೋದಿ ನಾಲ್ಕು ಬಾರಿ ಕರೆ ಮಾಡಿದ್ದರು. ಆದರೆ, ಪ್ರತಿ ಬಾರಿಯೂ ಟ್ರಂಪ್‌ ಅವರ ಕರೆ ಸ್ವೀಕರಿಸಲು ಮೋದಿ ನಿರಾಕರಿಸಿದರು ಎಂದು ಜರ್ಮನಿಯ ಪ್ರತಿಷ್ಠಿತ ಪತ್ರಿಕೆಯೊಂದು ವರದಿ

ನವದೆಹಲಿ : ಒಂದು ಕಡೆ ಭಾರತದ ಮೇಲೆ ತೆರಿಗೆ ಬಾಂಬ್‌ ಬೆದರಿಕೆ ಹಾಕುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಮತ್ತೊಂದು ಕಡೆ ಪ್ರಧಾನಿ ಮೋದಿ ಅವರನ್ನು ಹಲವು ಬಾರಿ ಸಂಪರ್ಕಿಸುವ ಪ್ರಯತ್ನವನ್ನೂ ನಡೆಸಿದ್ದರು. ಕಳೆದ ಕೆಲ ವಾರಗಳಿಂದ ಮೋದಿ ನಾಲ್ಕು ಬಾರಿ ಕರೆ ಮಾಡಿದ್ದರು. ಆದರೆ, ಪ್ರತಿ ಬಾರಿಯೂ ಟ್ರಂಪ್‌ ಅವರ ಕರೆ ಸ್ವೀಕರಿಸಲು ಮೋದಿ ನಿರಾಕರಿಸಿದರು ಎಂದು ಜರ್ಮನಿಯ ಪ್ರತಿಷ್ಠಿತ ಪತ್ರಿಕೆಯೊಂದು ವರದಿ ಮಾಡಿದೆ.

ಜರ್ಮನಿಯ ‘ಫ್ರಾಂಕ್‌ಫರ್ಟರ್‌ ಆಲ್ಗೊಹಿನ್ಜ್‌ ಜಿಂತುಂಕ’ ಪತ್ರಿಕೆ ಈ ಕುರಿತು ವರದಿ ಮಾಡಿದೆ. ಮೋದಿ ಅವರು ಟ್ರಂಪ್‌ರ ಮಾಧ್ಯಮ ಪ್ರಚಾರ ಕಾರ್ಯತಂತ್ರದ ಭಾಗವಾಗಲು ಬಯಸುತ್ತಿಲ್ಲ. ಅದೇ ರೀತಿ ದೇಶದ ಕೃಷಿ ಕ್ಷೇತ್ರವನ್ನು ಅಮೆರಿಕಕ್ಕೆ ತೆರೆಯುವ ವಿಚಾರದಲ್ಲಿ ಅವರ ಒತ್ತಡಕ್ಕೆ ಮಣಿಯಲೂ ಸಿದ್ಧವಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವರದಿ ಕುರಿತು ಭಾರತದ ಅಧಿಕಾರಿಗಳು ಈವರೆಗೆ ಯಾವುದೇ ಸ್ಪಷ್ಟನೆಯಾಗಲಿ, ಪ್ರತಿಕ್ರಿಯೆಯಾಗಲಿ ನೀಡಿಲ್ಲ.

ಬೆದರಿಕೆಗೆ ಮಣಿದಿಲ್ಲ:

ಟ್ರಂಪ್‌ ಅವರು ವ್ಯಾಪಾರ ಒಪ್ಪಂದ ವಿಚಾರದಲ್ಲಿ ಮೊದಲು ಬೆದರಿಸಿ ನಂತರ ಒಪ್ಪಂದಕ್ಕೆ ಸಹಿಹಾಕಿಸಿಕೊಂಡು ಪ್ರಚಾರ ಪಡೆಯುತ್ತಾರೆ. ಹಲವು ದೇಶಗಳ ವಿಚಾರದಲ್ಲಿ ಅವರು ಇದೇ ಕಾರ್ಯತಂತ್ರ ಅನುಸರಿಸಿದ್ದಾರೆ. ಮೋದಿ ಇದಕ್ಕೆ ತಲೆಬಾಗಲು ಸಿದ್ಧರಿಲ್ಲ. ಅಲ್ಲದೆ, ವಿಯೆಟ್ನಾಂ ವಿಚಾರದಲ್ಲಿ ಒಪ್ಪಂದ ಏರ್ಪಡುವ ಮೊದಲೇ ಟ್ರಂಪ್‌ ಈ ಕುರಿತು ಘೋಷಣೆ ಮಾಡಿದ್ದರು. ಟ್ರಂಪ್‌ ಅವರ ಇಂಥ ಮಾಧ್ಯಮ ಪ್ರಚಾರ ಪ್ರಿಯತೆಯಿಂದ ದೂರವಿರಲು ಮೋದಿ ಎಚ್ಚರಿಕೆಯ ನಡೆ ಅನುಸರಿಸುತ್ತಿದ್ದಾರೆ ಎಂದೂ ವರದಿ ಹೇಳಿದೆ.

ಮೋದಿ ಮತ್ತು ಟ್ರಂಪ್‌ ಅವರ ನಡುವಿನ ಈ ವೈಮನಸ್ಯ ಅಮೆರಿಕದ ಇಂಡೋ ಪೆಸಿಫಿಕ್‌ ಕಾರ್ಯತಂತ್ರಕ್ಕೆ ಭಾರೀ ಹೊಡೆತ ನೀಡಲಿದೆ. ಚೀನಾವನ್ನು ಬಗ್ಗುಬಡಿಯಲು ಅಮೆರಿಕವು ಇಂಡೋ ಪೆಸಿಫಿಕ್‌ ಕಾರ್ಯತಂತ್ರ ರೂಪಿಸಿತ್ತು. ಈ ಕಾರ್ಯತಂತ್ರದಲ್ಲಿ ಭಾರತವೇ ಅಮೆರಿಕದ ಪಾಲಿಗೆ ಮಹತ್ವದ್ದಾಗಿತ್ತು. ಆದರೆ ಉಭಯ ನಾಯಕರ ನಡುವಿನ ವೈಮಸ್ಯ ಈ ಇಡೀ ಕಾರ್ಯತಂತ್ರಕ್ಕೇ ಏಟು ನೀಡಿದೆ. ಜತೆಗೆ, ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ಪಾಕಿಸ್ತಾನದ ಸೇನಾ ಮುಖ್ಯಸ್ಥರನ್ನು ವೈಟ್‌ಹೌಸ್‌ಗೆ ಕರೆಸಿ ಔತಣಕೂಟ ನೀಡಿದ್ದು, ಭಾರತದಲ್ಲಿ ತೀವ್ರ ಆಕ್ರೋಶಕ್ಕೂ ಕಾರಣವಾಗಿದೆ. ಸಾರ್ವಜನಿಕರಲ್ಲೂ ಟ್ರಂಪ್‌ ವಿರುದ್ಧ ತೀವ್ರ ಆಕ್ರೋಶ ಮನೆ ಮಾಡಿದೆ ಎಂದೂ ವರದಿ ಉಲ್ಲೇಖಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಭಾಸ್, ವಿಜಯ್, ಅಲ್ಲು ಅರ್ಜುನ್ ಯಾರೂ ಅಲ್ಲ.. ದಕ್ಷಿಣ ಭಾರತದಲ್ಲೇ ಅತೀ ಹೆಚ್ಚು ಸಂಭಾವನೆ ಪಡೆಯುವುದು ಈ ನಟ!
ಮೀನುಗಾರ ಬಲೆಗೆ ಸಿಲುಕಿ ತೀರಕ್ಕೆ ಬಂದ ಭಾರಿ ಗಾತ್ರದ ಶಾರ್ಕ್‌: ವಾಪಸ್ ಸಮುದ್ರಕ್ಕೆ ಬಿಟ್ಟ ಕಡಲ ಮಕ್ಕಳು..