
ಇಸ್ಲಾಮಾಬಾದ್(ಮಾ.18): ಅಹಮ್ಮದಿಯಾಸ್ ಪಾಕಿಸ್ತಾನದಲ್ಲಿನ ಪ್ರಬಲ ಅಲ್ಪಸಂಖ್ಯಾತ ಸಮುದಾಯ. ಆದರೆ ದಶಕಗಳಿಂದ ಅಹಮ್ಮದಿ ಸಮುದಾಯ ಹಾಗೂ ಪಾಕಿಸ್ತಾನ ಮುಸಲ್ಮಾನರ ನಡುವೆ ಘೋರ ಕದನವೇ ನಡೆಯುತ್ತಿದೆ. ಇದೀಗ ಅಹಮ್ಮದಿ ಸಮುದಾಯದ ಮೇಲೆ ಸತತ ದಾಳಿ ನಡೆಯುತ್ತಿದೆ. ಪಾಕಿಸ್ತಾನದ ಗುರ್ಜನವಾಲ ಜಿಲ್ಲೆಯ ವಿಕರನ್ ಗ್ರಾಮದಲ್ಲಿನ ಅಹಮ್ಮದಿ ಮಸೀದಿಯನ್ನ ಧ್ವಂಸಗೊಳಿಸಲಾಗಿದೆ.
ಇಸ್ಲಾಂ ಮೂಲಭೂತವಾದಕ್ಕೆ ಬ್ರೇಕ್ ... ಇನ್ಮುಂದೆ ಮಸೀದಿ ಶಿಕ್ಷಣ ಬ್ಯಾನ್!
ಉದ್ರಿಕ್ತ ಮುಲ್ಲಾಗಳ ಗುಂಪು ಏಕಾಏಕಿ ಮಸೀದಿ ಮೇಲೆ ದಾಳಿ ಮಾಡಿದೆ. ವಿಶೇಷ ಅಂದರೆ ಮುಲ್ಲಾಗಳ ಜೊತೆಗೆ ಪಾಕಿಸ್ತಾನ ಪೊಲೀಸರು ಆಗಮಿಸಿ ಮಸೀದಿ ಧ್ವಂಸದಲ್ಲಿ ನೆರವಾಗಿದ್ದಾರೆ. ಪಾಕ್‌ನ ಪಂಜಾಬ್ ಪ್ರಾಂತ್ಯದ ಆಡಳಿತ ಈ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುವುದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪಶ್ನೆ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ.
ಅಹಮ್ಮದಿ, ಹಿಂದೂ, ಕ್ರಿಶ್ಚಿಯನ್ ಪಾಕಿಸ್ತಾನದ ಅಲ್ವ ಸಂಖ್ಯಾತ ಸಮುದಾಯಗಳು. ಈ ಸಮುದಾಯಗಳನ್ನು ನಿರ್ನಾಮ ಮಾಡಲು ಖುದ್ದು ಪಾಕಿಸ್ತಾನ ಸರ್ಕಾರವೇ ಟೊಂಕ ಕಟ್ಟಿ ನಿಂತಿದೆ ಅನ್ನೋ ಹಲವು ಅಂತಾರಾಷ್ಟ್ರೀಯ ವರದಿಗಳು ಭಾರಿ ಸದ್ದು ಮಾಡಿತ್ತು. 1974ರಲ್ಲಿ ಪಾಕಿಸ್ತಾನ ಸರ್ಕಾರ ಪಾಕಿಸ್ತಾನದಲ್ಲಿನ ಅಹಮ್ಮದಿಯರು ಮುಸ್ಲೀಮರಲ್ಲ ಎಂದು ಘೋಷಿಸಿತ್ತು
ಈ ಘೋಷಣೆ ಬಳಿಕ ಅಹಮ್ಮದೀಯರ ಮೇಲಿನ ದಾಳಿಗಳು ಹೆಚ್ಚಾಯಿತು. ಇತ್ತ ಪಾಕಿಸ್ತಾನ ಸರ್ಕಾರ ಕೂಡ ದಾಳಿಗಳಿಗೆ ಮೌನವಹಿಸಿತ್ತು. ಅಹಮ್ಮದೀಯರು ಸೌದಿ ಅರೇಬಿಯಾಗೆ ತೆರಳುವುದನ್ನು ನಿಷೇಧಿಸಲಾಗಿದೆ. ಸರ್ಕಾರವೇ ಇಂತ ದಾಳಿ ಸಂಘಟಿಸುತ್ತಿದೆ ಎಂದು ಅಹಮ್ಮದೀಯ ಮುಖಂಡರ ಆರೋಪಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ