18 ವರ್ಷ ಮೇಲಿನವರಿಗೆ ಖಾಸಗಿ ವ್ಯಾಕ್ಸಿನ್ ಸೆಂಟರ್ ಆರಂಭಿಸಿ: ಶೇ. 75ರಷ್ಟು ಮಂದಿ ಅಭಿಪ್ರಾಯ!

By Suvarna NewsFirst Published Mar 18, 2021, 5:21 PM IST
Highlights

ಕೊರೋನಾ ಲಸಿಕೆ ಅಭಿಯಾನ ಆರಂಭ| ಲಸಿಕೆ ಅಭಿಯಾನದ ನಡುವೆ ಹಾಳಾಗುತ್ತಿವೆ ಲಸಿಕೆ| ಲಸಿಕೆ ಹಾಳಾಗದಂತೆ ತಡೆಯಲು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ

ನವದೆಹಲಿ(ಮಾ.18): ನವದೆಹಲಿ(ಮಾ.18): ಭಾರತ ಸರ್ಕಾರ ಕೊರೋನಾ ವಿರುದ್ಧ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ವಿಶ್ವದಲ್ಲೇ ಅತೀ ದೊಡ್ಡ ಲಸಿಕಾ ಅಭಿಯಾನ ಆರಂಭಿಸಿದೆ. ಎರಡು ತಿಂಗಳಲ್ಲಿ ಈವರೆಗೆ 3.5 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಈವರೆಗೆ 60ಕ್ಕಿತ ಮೇಲಿನ ಹಾಗೂ 45 ವರ್ಷಕ್ಕಿಂತ ಮೇಲಿನ ಅನಾರೋಗ್ಯಕ್ಕೀಡಾದವರಿಗೆ ಲಸಿಕೆ ನೀಡಲಾಗುತ್ತಿದೆ. 

ಇನ್ನು ಲೋಕಲ್ ಸರ್ಕಲ್‌ ಜೊತೆ ಅಭಿಪ್ರಾಯ ಹಂಚಿಕೊಂಡಿರುವ ಜನರು ಈ ಮಿತಿಗೊಳಪಡದವರೂ ಲಸಿಕೆ ಪಡೆಯುತ್ತಿದ್ದು, ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಇದೇ ವೇಳೆ ಶೇ. 75ರಷ್ಟು ಮಂದಿ ಹದಿನೆಂಟು ವರ್ಷ ಮೇಲಿನವರಿಗೆ ಲಸಿಕೆ ನೀಡಲು ಖಾಸಗಿ ಕೇಂದ್ರಗಳನ್ನು ಆರಂಭಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇದರಲ್ಲಿ ಹೆಚ್ಚುವರಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಲಿ ಎಂಬ ಅಭಿಪ್ರಾಯವನ್ನೂ ಮಂಡಿಸಿದ್ದಾರೆ.

ಹೌದು ಲಸಿಕರ ಅಭಿಯಾನ ಆರಂಭವಾದಾಗಿನಿಂದಲೂ, ಲಸಿಕೆ ಡೋಸ್‌ಗಳು ಹಾಳಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಹೀಗಿರುವಾಗ ಇದನ್ನು ತಡೆಯಲು ಖಾಸಗಿ ಆಸ್ಪತ್ರೆ, ಲ್ಯಾಬ್‌ಗಳಲ್ಲಿ ಸಂಜೆ ಆರು ಗಂಟೆ ಬಳಿಕ ಲಸಿಕೆ ನೀಡುವ ಅಭಿಯಾನ ಆರಂಭಿಸಲಿ. ಇಲ್ಲಿ ಹೆಚ್ಚುವರಿ ಹಣ ನೀಡಿ ಲಸಿಕೆ ಪಡೆಯಲಿ. ಇದರಿಂದ ಲಸಿಕೆ ಅಭಿಯಾನವೂ ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. 

click me!