ಭಾರತದಲ್ಲಿ ಹೆಚ್ಚು ಸಂತೋಷದಿಂದಿರುವ ರಾಜ್ಯ ಯಾವುದು? ಸಮೀಕ್ಷೆ ಬಹಿರಂಗ!

By Suvarna NewsFirst Published Sep 19, 2020, 8:33 PM IST
Highlights

ಭಾರತದಲ್ಲಿ ಹೆಚ್ಚು ಸಂತೋಷದಿಂದ ಇರುವ ರಾಜ್ಯ ಯಾವುದು? ಈ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಮಾರ್ಚ್ ತಿಂಗಳನಿಂದ ಜುಲೈ ತಿಂಗಳವರೆಗೆ ನಡೆಸಿದ ಸಮೀಕ್ಷೆಯಲ್ಲಿ ಸಂತೋಷದ ರಾಜ್ಯ ಯಾವುದು ಅನ್ನೋದು ಬಹಿರಂಗವಾಗಿದೆ.
 

ನವದೆಹಲಿ(ಸೆ.19): ಬಡವನಿಗೆ ಆರ್ಥಿಕ ಸಂಕಷ್ಟ, ಶ್ರೀಮಂತನಿಗೆ ಇನ್ಯಾವುದೋ ಸಮಸ್ಯೆ ಹೀಗೆ ಸಮಸ್ಯೆ ಇಲ್ಲದವರು ತೀರಾ ವಿರಳ. ಇದು ತಾಲೂಕು, ಜಿಲ್ಲೆ, ರಾಜ್ಯದ ಪರಿಸ್ಥಿತಿ ಇದಕ್ಕಿಂತ ಭಿನ್ನವಲ್ಲ. ಆದರೆ ಸಂಕಷ್ಟಗಳು, ಸಮಸ್ಯೆಗಳ ನಡುವೆ ಇರುವುದರಲ್ಲಿ ಸಂತೋಷ ಕಂಡುಕೊಂಡವರು ಕೆಲವರಿದ್ದಾರೆ.  ಯಾವ ರಾಜ್ಯದಲ್ಲಿ ಈ ರೀತಿ ಜನರಿದ್ದಾರೆ ಎಂದು ಸಮೀಕ್ಷೆ ನಡೆಸಲಾಗಿತ್ತು. ಇದೀಗ ಸಮೀಕ್ಷೆ ವರದಿ ಬಹಿರಂಗವಾಗಿದ್ದು. ಮಿಜೋರಾಂ, ಸಿಕ್ಕಿ ಹಾಗೂ ಅರುಣಾಚಲ ಪ್ರದೇಶ ಟಾಪ್ 10 ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ.

ಸಿಕ್ಕಿಂ ರೀತಿ ಲಡಾಖ್‌ ಇಂಗಾಲ ಮುಕ್ತ!.

ಗುರಗಾಂವ್‌ನ ಡೆವಲಪ್‌ಮೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಯ ಪ್ರೋಫೆಸರ್ ರಾಜೇಶ್ ಕೆ ಪಿಳ್ಳಾನಿಯ ಈ ಸರ್ವೆ ಮಾಡಿದ್ದಾರೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ 15,950 ಮಂದಿ ಪ್ರತಿಕ್ರಿಯೆ ಪಡೆಯಲಾಗಿದೆ. ಇದರಲ್ಲಿ ಕೊರೋನಾ ಕಾರಣ ಇದ್ದ ಸಂತೋಷ ಕಳೆದುಕೊಂಡವರ ಪಟ್ಟಿಯಲ್ಲಿ ಮಹಾರಾಷ್ಟ್ರ, ದೆಹಲಿ ಹಾಗೂ ಹರ್ಯಾಣ ಮುಂಚೂಣಿಯಲ್ಲಿದೆ.

ಸಂತೋಷದಿಂದ ಇರುವ ಸಣ್ಣ ರಾಜ್ಯಗಳ ಪೈಕಿ ಮಿಜೋರಾಂ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶ ಅಗ್ರಸ್ಥಾನದಲ್ಲಿದೆ. ಇನ್ನು ದೊಡ್ಡ ರಾಜ್ಯಗಳ ಪೈಕಿ ಪಂಜಾಬ್, ಗುಜರಾತ್ ಹಾಗೂ ತೆಲಂಗಾಣ ಹೆಚ್ಚು ಸಂತೋಷದಿಂದ ಇದೆ ಎಂದು ಸಮೀಕ್ಷೆ ಹೇಳಿದೆ. ಇನ್ನು ಕೇಂದ್ರಾಡಳಿತ ಪ್ರದೇಶದಲ್ಲಿ ಅಂಡಮಾನ್ ನಿಕೋಬಾರ್ ದ್ವೀಪ, ಪುದುಚೇರಿ ಹಾಗೂ ಲಕ್ಷದ್ವೀಪ್ ಅಗ್ರಸ್ಥಾನ ಪಡೆದುಕೊಂಡಿದೆ.
 

click me!